ನಮ್ಮಬಗ್ಗೆ
                                            About Us

ನಮ್ಮಬಗ್ಗೆ



         ಇದು ಕರ್ನಾಟಕ, ಭಾರತ ಅಥವಾ ವಿಶ್ವದ ಯಾವುದೇ ಭಾಗದಿಂದ ಬಂದು ಆಸ್ಟ್ರೇಲಿಯಾದ ಸಿಡ್ನಿ ಭಾಗದಲ್ಲಿ ನೆಲೆಸಿರುವ ಕನ್ನಡಿಗರೆಲ್ಲರ ಪ್ರಾತಿನಿಧಿಕ ಸಂಸ್ಥೆಯಾದ ಸುಗಮ ಕನ್ನಡ ಬಳಗದಿಂದ ವಿಶ್ವವ್ಯಾಪಿ ಕನ್ನಡಿಗರೆಲ್ಲರಿಗೆ ನಲ್ಮೆಯ ಕೊಡುಗೆ. ನಮ್ಮ ಸಂಸ್ಥೆಯು ಈ ಭಾಗದ ಕನ್ನಡಿಗರ ಸಾಂಸ್ಕೃತಿಕ ಹಾಗೂ ಸಾಮಾಜಿಕ ಬದುಕಿನ ಒಡನಾಡಿ. ಸಿಡ್ನಿಯ ಶ್ರೀಸಾಮಾನ್ಯ ಕನ್ನಡಿಗರೆಲ್ಲರೂ ವಯಸ್ಸು,ಲಿಂಗ ಭೇದವಿಲ್ಲದೆ ತಿಂಗಳಿಗೊಮ್ಮೆ ಕಲೆತು ತಮ್ಮನ್ನು ತೊಡಗಿಸಿಕೊಳ್ಳುತ್ತಿರುವ ಜನಪ್ರಿಯ ವೇದಿಕೆ.ಕಳೆದ ಕೆಲವು ವರ್ಷಗಳಿಂದ ನಮ್ಮ ಸಂಸ್ಥೆಯು ಕನ್ನಡ ಸಮಾಜದ ವಯಸ್ಕ,ಯುವಕ ಹಾಗೂ ಮಹಿಳೆಯರಿಗೆ ಮನರಂಜನೆಯನ್ನು ನೀಡುವುದರ ಜೊತೆಗೆ ಸೃಜನಾತ್ಮಕ, ಸಾಂಸ್ಕೃತಿಕ, ಶೈಕ್ಷಣಿಕ, ವ್ಯಾವಹಾರಿಕ ಹಾಗೂ ಶ್ರೇಯೋಭಿಲಾಷಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ.


ನಮ್ಮ ವಿವಿಧ ಕಾರ್ಯಕ್ರಮಗಳು :


         ಸುಗಮ ಗಾನ ಸಮಾಜ (ಕನ್ನಡ ಕ್ಯಾರಿಯೋಕೆ) - ಹಾಡಿರಿ ಕುಣಿಯಿರಿ ನಲಿಯಿರಿ ನಲಿಸಿರಿ

         ಸುಗಮ ಆರೋಗ್ಯ ನುರಿತ ವೈದ್ಯರು ಮತ್ತು ತಜ್ಞರಿಂದ ಉತ್ತಮ ಆರೋಗ್ಯದಾಯಕ ಸಲಹೆ

         ಘಮ ಘಮ ಸುಗಮ - ನಾಲಿಗೆಗೆ ನಾಸಿಕಕೆ ಉದರಕೆ ಕನ್ನಡದ ಉಣಿಸುಗಳ ರಸದೌತಣ

         ಸುಗಮ ಹಾಸ್ಯ - ಹೊಟ್ಟೆ ತುಂಬಾ ನಕ್ಕುಬಿಡಿ, ಮೆಲುಕು ಹಾಕಿ ಮಜಾ ಮಾಡಿ

         ಕನ್ನಡ ಪಾಠ ಶಾಲೆ - ಮಕ್ಕಳು ಹಾಗೂ ಯುವಕರಿಗೆ ಸುಲಭವಾಗಿ ಕನ್ನಡ ಓದಲು ಬರೆಯಲು
         ಮಾತನಾಡಲು ಕಲಿಸುವ ಜ್ಞಾನದೇಗುಲ

         ಸುಗಮ ಚಿಣ್ಣರ ಲೋಕ - ಮಕ್ಕಳಿಗಾಗಿ ರಜಾದಿನಗಳಲ್ಲಿ ಹಮ್ಮಿಕೊಂಡೀರುವ ತರಬೇತಿ
         ಶಿಬಿರ/ವರ್ಕ್ ಶಾಪ್


         ನೀವೂ ನಮ್ಮ ಸದಸ್ಯರಾಗಬಯಸುವಿರಾ ? ನಮ್ಮದು ಯಾವುದೇ ಲಾಭೋದ್ದೇಶವಿಲ್ಲದ ಸಂಸ್ಥೆಯಾದ್ದರಿಂದ, ಸದಸ್ಯತ್ವಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ನೀವು ಕನ್ನಡಾಭಿಮಾನಿಗಳಾಗಿದ್ದಲ್ಲಿ ಅದೇ ನಿಮ್ಮ ಅರ್ಹತೆ ಹಾಗೂ ನಮ್ಮ ಆಸ್ತಿ. ನಿಮ್ಮ ಕ್ರಿಯಾತ್ಮಕ ಸೃಜನಶೀಲ ಆಸಕ್ತಿ ಹಾಗೂ ಪಾಲ್ಗೊಳ್ಳುವಿಕೆಯೇ ನಮ್ಮ ಯಶಸ್ಸಿನ ರಹಸ್ಯ.    ಹಾಗಿದ್ದಲ್ಲಿ ತಡವೇತಕೆ? ನಾಳೆ ಮಾಡುವ ಕೆಲಸ ಇಂದೇ ಮಾಡಿ.
ಕನ್ನಡದಾ ಮಕ್ಕಳೆಲ್ಲ ಒಂದಾಗಿ ಬನ್ನಿ  ಜೈ ಕನ್ನಡ ಭುವನೇಶ್ವರಿ



About Us


         Sugamakannada is an organization representing the Kannada speaking people from Karnataka State , India or any part of the world who have settled in Sydney .

         We organize useful social and cultural activities to facilitate Kannada speaking people to socially interact with their friends and show interest in Kannada and culture among adults, as well as youths born and growing in Australia .

         Over a period of few years our team has organised many social, cultural, educational, charitable events almost with an interval of one month as well as dedicated in weekly kannada school. We always look forward to our events to be creative entertaining, educative, recognize local talents, using their extraordinary art and skills.

         We have grown from strength to strength since its inception due to the interest, dedication, excellent suggestions and contributions of our friends & participants. We are still a growing organisation.

         Since Sugamakannada koota is not for profit organization, there is NO formal annual membership or membership fee involved. However, a nominal fee may be collected towards the expenses incurred while hiring the venue.

         Membership eligibility - kannadiga or interest in kannada.

         We welcome everyone to participate or to attend all events . Please don't hesitate to Contact Us through e-mail.

         We would like to see that Kannadigas here will continue to enrich our Language, culture and heritages and contribute to our mother BHUVANESHWARI.



ಕಾರ್ಯಕರ್ತರು Working Committee

                                            
Mrs.Anuradha Anand,        Mr.Dakshina Murthy,          Mrs.Deepthi Jitendra

                                            
Mr.Diwakar Herale,           Mr.Gurappa Harisha,           Mr.Kanakapur Narayana     
                                             
Mr.Nagaraj,                      Mr.Nagaraju,                        Mrs.Poornima Bhat,  

                                             
Mrs.Prema Nagaraj,         Mrs.RajalakshmiNarayana,   Mr.Shankar Madhystha

                                             
Mr.Subramani Raj,           Mrs.Surekha Anil,               Mrs.VeenaSudarshan

 
Mr.Vinay Narayan


 

ವೆಬ್ ಸೈಟ್ ವಿಕಾಸ/ಬೆಳವಣಿಗೆ : ಶ್ರೀ.ದಕ್ಷಿಣಾ ಮೂರ್ತಿ,  ಚಿ| ವಿನಯ್ ನಾರಾಯಣ್, ಶ್ರೀ.ನಾಗರಾಜು
Website Design/Developing : Mr.Dakshina Murthy, Mr.Vinay Narayan, Mr.Nagaraju.


ವೆಬ್ ಸೈಟ್ ಪರಿಷ್ಕರಣೆ: ಶ್ರೀ ಗುರಪ್ಪ ಹರೀಶ, ಶ್ರೀ ಕನಕಾಪುರ ನಾರಾಯಣ
Website Editing: Mr.Gurappa Harisha, Mr.Kanakapur Narayana


ಸುಗಮ ಗಾನ ಸಮಾಜದ ಮುಖ್ಯ ಕಾರ್ಯಕರ್ತರ:   ಶ್ರೀ.ನಾಗರಾಜ್,  ಶ್ರೀ.ಶಂಕರ ಮಧ್ಯಸ್ಥ, ಶ್ರೀ.ಸುಬ್ರಮಣಿ ರಾಜ್, ಶ್ರೀ ಕನಕಾಪುರ ನಾರಾಯಣ,


ಘಮ ಘಮ ಸುಗಮ ನಿರ್ವಹಣಾ ಸಮಿತಿ: ಶ್ರೀಮತಿ:ಅನುರಾಧಾ ಆನಂದ್, ಶ್ರೀಮತಿ.ಪ್ರೇಮಾ ನಾಗರಾಜ್, ಶ್ರೀಮತಿ.ಅನು ಶಿವರಾಂ, ಶ್ರೀಮತಿ.ಪೂರ್ಣಿಮಾ ಭಟ್, ಶ್ರೀಮತಿ.ದೀಪ್ತಿ ಜಿತೇಂದ್ರ.


ಆರೊಗ್ಯ ಸುಗಮ: ಶ್ರೀ.ದಿವಾಕರ್ ಹೇರಳೆ,ಶ್ರೀಮತಿ.ಸುರೇಖಾ ಅನಿಲ್, ಚಿ| ವಿನಯ್ ನಾರಾಯಣ್,



ಕನ್ನಡ ಪಾಠ ಶಾಲೆ : ಶ್ರೀಮತಿ.ವೀಣಾ ಸುದರ್ಶನ್, ಶ್ರೀಮತಿ.ರಾಜಲಕ್ಷ್ಮಿ ನಾರಾಯಣ, ಶ್ರೀಮತಿ.ಸುರೇಖಾ ಅನಿಲ್