ಬದನೇಕಾಯಿ ಮೊಸರು ಗೊಜ್ಜು

ಬೇಕಾಗುವ ಸಾಮಗ್ರಿಗಳು
- ನಾಲ್ಕು ಉದ್ದವಾದ ಬದನೇಕಾಯಿಗಳು
- ಎರಡು ಬಟ್ಟಲು ಮೊಸರು
- ನಾಲ್ಕು ಹಸಿಮೆಣಸಿನ ಕಾಯಿ
- ಹಸಿ ಶುಂಟಿ ಸಣ್ಣ ತುಂಡು
- ಎರಡು ಚಮಚ ತುಪ್ಪ
- ಉಪ್ಪು ಒಂದು ಚಮಚ
- ವಗ್ಗರಣೆಗೆ ಸಾಸಿವೆ,ಕರಿ ಮೆಣಸು
ಮಾಡುವ ವಿಧಾನ
- ಬದನೇಕಾಯನ್ನು ಕೆಂಡದಲ್ಲಿ ಅಥವಾ ಗ್ಯಾಸ್ ಒಲೆಯ ಮೇಲೆ ಸುಟ್ಟು ಆರಿದ ಬಳಿಕ ಸಿಪ್ಪೆ ತೆಗೆಯಿರಿ
- ಅದನ್ನು ಒಂದು ದಪ್ಪತಳದ ಪಾತ್ರೆಯಲ್ಲಿ ಕಿವುಚಿ
- ಅದಕ್ಕೆ ಹಸಿಮೆಣಸಿನ ಕಾಯಿ,ಶುಂಟಿ ಅತಿ ಸಣ್ಣಗೆ ಕತ್ತರಿಸಿ ಉಪ್ಪು, ಮೊಸರು
- ತುಪ್ಪದಲ್ಲಿ ಒಣಮೆಣಸಿನಕಾಯಿ,ಸಾಸಿವೆ,ಮೆಣಸಿನ ವಗ್ಗರಣೆ ಹಾಕಿ,ಕಲಸಿ - ಬಳಸಿ
ಗಮನಿಸಿ
ಇದೇ ರೀತಿ ಬೇಯಿಸಿದ ಆಲೂಗಡ್ಡೆ,ಬಾಳೇಕಾಯಿ,ಗೆಣಸು,ಬೂದಕುಂಬಳಕಾಯಿ ಗಳಲ್ಲೂ ಮೊಸರು ಗೊಜ್ಜನ್ನು ಮಾಡಬಹುದು.