ಬೂದಕುಂಬಳಕಾಯಿ ಹಲ್ವ(ಮೊರಬ್ಬ)

ಬೇಕಾಗುವ ಸಾಮಗ್ರಿಗಳು
- ಭಾರವಾದ ಅರ್ಧ ಬೂದಕುಂಬಳಕಾಯಿ
- ಮುಕ್ಕಾಲು ಕೇಜಿ ಸಕ್ಕರೆ
- ಅರ್ಧ ಲೀಟರ್ ಹಾಲು
- ಹದಿನೈದು ಏಲಕ್ಕಿ
ಮಾಡುವ ವಿಧಾನ
- ಬೂದಕುಂಬಳಕಾಯಿಯ ಸಿಪ್ಪೆ ಹಾಗೂ ತಿರುಳನ್ನು ತೆಗೆದು ಚಿಕ್ಕ ಹೋಳುಗಳನ್ನಾಗಿ ಮಾಡಿ ತೊಳೆದಿಟ್ಟುಕೊಳ್ಳಿ
- ತೊಳೆದ ಹೋಳನ್ನು ಡಬರಿಯಲ್ಲಿ ಹಾಕಿ ಒಲೆಯ ಮೇಲಿಟ್ಟು ಹಾಲು ಹಾಕಿ ಹದವಾಗಿ ಬೇಯಿಸಿ.
- ಹೋಳು ಬೆಂದಮೇಲೆ ಸಕ್ಕರೆ ಹಾಕಿ ಕೆದಕುತ್ತಿರಿ.
- ನೀರು ಕಡಿಮೆಯಾಗಿ ಗಟ್ಟಿ ಪಾಕವಾಗುತ್ತಿದ್ದಂತೆ ಏಲಕ್ಕಿ ಪುಡಿ ಬೆರೆಸಿ,ಒಲೆಯ ಮೇಲಿಂದ ಇಳಿಸಿ