ಗೋಡಂಬಿ ಟಾಫಿ

ಬೇಕಾಗುವ ಸಾಮಗ್ರಿಗಳು
- ಅರ್ಧ ಕೇಜಿ ಗೋಡಂಬಿ
- ಸಕ್ಕರೆ ಒಂದೂವರೆ ಕೇಜಿ
- ಏಲಕ್ಕಿ ಹತ್ತು
- ನಾಲ್ಕು ಚಮಚ ತುಪ್ಪ
ಮಾಡುವ ವಿಧಾನ
- ಗೋಡಂಬಿಯನ್ನು ಸಣ್ಣ ಚೂರುಗಳನ್ನಾಗಿ ಮಾಡಿ ಬಾಣಲೆಯಲ್ಲಿ ಎರಡು ಚಮಚ ತುಪ್ಪ ಹಾಕಿ ಹುರಿದಿಟ್ಟುಕೊಳ್ಳಿ
- ಮತ್ತೊಂದು ಪಾತ್ರೆಯಲ್ಲಿ ಕಾಲು ಲೋಟ ನೀರು ಬೆರೆಸಿ ಸಕ್ಕರೆಯ ಉಂಡೆಪಾಕ(ಗಟ್ಟಿ) ಮಾಡಿಕೊಂಡು ಕೆಳಗಿಳಿಸಿ.
- ಪಾಕಕ್ಕೆ ಗೋಡಂಬಿ,ಏಲಕ್ಕಿ ಪುಡಿ ಹಾಕಿ ಹದವಾಗಿ ಮೊಗಚಿ, ತಟ್ಟಿ.
- ಆರಿದಮೇಲೆ ಬಿಲ್ಲೆಗಳಾಗಿ ಕತ್ತರಿಸಿ ಬಡಿಸಿ.(ಆಡುವ ಮಕ್ಕಳಿಗಿದು ಶಕ್ತಿದಾಯಕ)