ಪಂಚಕಜ್ಜಾಯ

ಬೇಕಾಗುವ ಸಾಮಗ್ರಿಗಳು
- ಹುರಿದು ಬೀಸಿದ ಹೆಸರುಬೇಳೆ ಪುಡಿ ಅರ್ಧ ಕೇಜಿ
- ಬೆಲ್ಲ ಅರ್ಧ ಕೇಜಿ
- ಎರಡು ತೆಂಗಿನ ಕಾಯಿ
- ಹುರಿದ ಎಳ್ಳು ನಾಕು ಚಮಚ
- ಐವತ್ತು ಗ್ರಾಂ ಗೋಡಂಬಿ
- ತುಪ್ಪ ನೂರು ಗ್ರಾಂ
- ಜೇನುತುಪ್ಪ ನೂರು ಗ್ರಾಂ
ಮಾಡುವ ವಿಧಾನ
- ತೆಂಗಿನ ಕಾಯಿಯನ್ನು ತುರಿದು ಬಾಣಲೆಯಲ್ಲಿ ಹುರಿದುಕೊಳ್ಳುವುದು.
- ಹುರಿದ ಕಾಯಿ ತುರಿಗೆ ಬೆಲ್ಲ,ಹೆಸರು ಬೇಳೆ ಪುಡಿ ಸೇರಿಸಿ ಒರಳಿನಲ್ಲಿ ಕುಟ್ಟಿಕೊಳ್ಳುವುದು.
- ಕುಟ್ಟಿದ ಮಿಶ್ರಣಕ್ಕೆ ಎಳ್ಳು, ತುಪ್ಪ, ಜೇನುತುಪ್ಪ ಕಲಸುವುದು.
- ಇದನ್ನು ಉದುರುದುರಾಗಿಯೂ ಅಥವಾ ಉಂಡೆಯಾಗಿಯೂ ಮಾಡಿ ತಿನ್ನಬಹುದು,( ಆಡುವ ಮಕ್ಕಳಿಗಿದು ಶಕ್ತಿದಾಯಕ.)