ಕಡಲೇಕಾಯಿ ಚಟ್ನಿ

ಬೇಕಾಗುವ ಸಾಮಗ್ರಿಗಳು
- ಎರಡು ಬಟ್ತಲು ಹಿರಿದು ಸಿಪ್ಪೆ ತೆಗೆದ ಕಡಲೇಬೀಜ
- ಒಣ ಮೆಣಸಿನಕಾಯಿ ಹತ್ತು
- ತುರಿದ ಒಣ ಕೊಬ್ಬರಿ ಅರ್ಧ ಬಟ್ಟಲು
- ಉಪ್ಪು - ಸಕ್ಕರೆ ಒಂದು ಟೀ ಚಮಚ
- ವಗ್ಗರಣೆಗೆ ಸ್ವಲ್ಪ ಎಣ್ಣೆ ಕರಿಬೇವು,ಸಾಸಿವೆ,ಇಂಗು
ಮಾಡುವ ವಿಧಾನ
- ಎಣ್ಣೆ ಕಾಯಿಸಿ ಒಣ ಮೆಣಸಿನ ಕಾಯಿ, ಕಡಲೇಬೀಜ ಇಂಗು ಬೆರೆಸಿ ಹುರಿಯಿರಿ.
- ಹುಣಸೇಹಣ್ಣು,ಕೊಬ್ಬರಿ,ಸಕ್ಕರೆ, ಉಪ್ಪು, ಇವುಗಳೊಂದಿಗೆ ಹಿರಿದ ಪದಾರ್ಥಗಳನ್ನು ನೀರಿಲ್ಲದೆ ರುಬ್ಬಿಕೊಳ್ಳಿ
- ಒಂದು ಜಾಡಿಯಲ್ಲಿ ಶೇಖರಿಸಿಡಿ.
(ಚಪಾತಿ, ದೋಸೆ, ಬ್ರೆಡ್ ಜೊತೆ ಸವಿಯಲು ಬಲು ರುಚಿ)