ಖರ್ಜೂರ ಸುಕುನುಂಡೆ

ಬೇಕಾಗುವ ಸಾಮಗ್ರಿಗಳು
- ಖರ್ಜೂರ ಅರ್ಧ ಕಿಲೋ
- ಸಕ್ಕರೆ ಒಂದು ಲೋಟ
- ಅಕ್ಕಿ ಒಂದು ಲೋಟ
- ತುಪ್ಪ ಕಾಲು ಲೋಟ
- ಉಪ್ಪು ಕಾಲು ಚಮಚ
ಮಾಡುವ ವಿಧಾನ
- ಬೀಜ ತೆಗೆದ ಖರ್ಜೂರದ ತಿರುಳನ್ನು 15 ನಿಮಿಷ ಹಬೆಯಲ್ಲಿ ಬೇಯಿಸಿ
- ಇದಕ್ಕೆ ಸಕ್ಕರೆ ಹಾಕಿ ರುಬ್ಬಿ,ತುಪ್ಪ ಬೆರೆಸಿ ಕಲಸಿಡಿ
- ನಂತರ ಒಂದು ಘಂಟೆ ನೆನೆದ ಅಕ್ಕಿಯನ್ನು ಉಪ್ಪು ಬೆರೆಸಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ,
- ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಉಂಡೆಗಳನ್ನು ಹಿಟ್ಟಿನಲ್ಲಿ ಅದ್ದಿ ತಿಳಿ ಕೆಂಪಗೆ ಕರೆಯಿರಿ