ಹೆಸರುಬೇಳೆ ಸುಕುನುಂಡೆ

ಬೇಕಾಗುವ ಸಾಮಗ್ರಿಗಳು
- ಹುರಿದ ಹೆಸರುಬೇಳೆ ಒಂದು ಲೋಟ
- ಬೆಲ್ಲದಪುಡಿ ಒಂದೂವರೆ ಲೋಟ
- ತೆಂಗಿನ ಕಾಯಿ ತುರಿ ಒಂದು ಲೋಟ
- ಏಲಕ್ಕಿ ನಾಲ್ಕು
- ಉಪ್ಪು ಅರ್ಧಚಮಚ
- ಕರಿಯಲು ಎಣ್ಣೆ
ಮಾಡುವ ವಿಧಾನ
- ಹೆಸರುಬೇಳೆಯನ್ನು ಹದವಾಗಿ ಬೇಯಿಸಿ,ನೀರು ಬಸೆದು ಬೆಲ್ಲದಪುಡಿ ಬೆರೆಸಿ ಮೊಗಚುತ್ತಿರಿ
- ಎಳೆಯ ಪಾಕ ಬಂದ ಕೂಡಲೇ ಕಾಯಿತುರಿ ಬೆರೆಸಿ ಏಲಕ್ಕಿಪುಡಿ ಬೆರೆಸಿ ಉಂಡೆ ಮಾಡಿಡಿ
- ನಂತರ ಎರಡು ಘಂಟೆ ನೆನೆದ ಅಕ್ಕಿಯನ್ನು ಉಪ್ಪು ಬೆರೆಸಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ
- ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಉಂಡೆಗಳನ್ನು ಹಿಟ್ಟಿನಲ್ಲಿ ಅದ್ದಿ ತಿಳಿ ಕೆಂಪಗೆ ಕರೆಯಿರಿ