ಮೊಳಕೆ ಕಟ್ಟಿದ ಹುರಳಿ ಕಾಳು ಸಾರು

ಬೇಕಾಗುವ ಸಾಮಗ್ರಿಗಳು
- ಹುರಳಿಕಾಳು1 ಲೋಟ
- ಹೆಸರುಕಾಳು 1ಲೋಟ
- ತೊಗರಿಬೇಳೆ 1ಲೋಟ
- ಹುಣಸೇಹಣ್ಣು ನಿಂಬೆ ಗಾತ್ರ
- ಬೆಲ್ಲ ಅರ್ಧ ನಿಂಬೆ ಹಣ್ಣೀನ ಗಾತ್ರ
- ಮೆಣಸಿನ ಪುಡಿ(ಸಾರಿನ ಪುಡಿ)-4ಚಮಚ
- ತೆಂಗಿನ ತುರಿ ಒಂದು ಹೋಳು
- 2ಚಮಚ ತುಪ್ಪ
- ಒಗ್ಗರಣೆಗೆ ಸಾಸಿವೆ ಜೀರಿಗೆ
- ಇಂಗು
ಮಾಡುವ ವಿಧಾನ
- ಹುರಳಿಕಾಳು ಮತ್ತು ಹೆಸರುಕಾಳನ್ನು 1ರಾತ್ರಿ ನೆನೆಹಾಕಿ,ಚೆನ್ನಾಗಿ ತೊಳೆದು,ಬಟ್ಟೆಯಲ್ಲಿ ಕಟ್ಟಿ ಒಂದು ದಿನ ಇಟ್ಟರೆ ಮೊಳಕೆ ಬರುತ್ತದೆ
- ಮೊಳಕೆ ಬಂದ ಕಾಳಿಗೆ 1ಚಮಚ ತುಪ್ಪ ಹಾಗೂ ತೊಗರಿಬೇಳೆ ಸೇರಿಸಿ ಕುಕ್ಕರ್ನಲ್ಲಿ ಬೇಯಿಸಿ
- ಮಿಕ್ಕ ಮೆಣಸಿನಪುಡಿ,ತೆಂಗಿನತುರಿ,ಉಪ್ಪುಹುಣಸೇಹಣ್ಣು ಜೊತೆಗೆ1 ಸೌಟು ಬೆಂದ ಕಾಳು ಬೇಳೆಯನ್ನು ಸೇರಿಸಿ ರುಬ್ಬಿಕೊಳ್ಳಿ
- ರುಬ್ಬಿದ ಸಾಮಗ್ರಿಯನ್ನೂ ಮತ್ತು ಬೆಲ್ಲವನ್ನುಮಿಶ್ರಣಕ್ಕೆ ಹಾಕಿ ಕುದಿಸಿ
- ಚೆನ್ನಾಗಿ ಕುದ್ದ ನಂತರ ತುಪ್ಪ ಇಂಗು ಜೀರಿಗೆ,ಸಾಸಿವೆ ಒಗ್ಗರಣೆ ಕೊಡಿ