ಟೊಮೊಟೋ ಬೆಳ್ಳುಳ್ಳಿ ಭಾತ್

ಬೇಕಾಗುವ ಸಾಮಗ್ರಿಗಳು
- ಅಕ್ಕಿ1ಪಾವು
- ಹಸಿಮೆಣಸಿನ ಕಾಯಿ 8
- ಬೆಳ್ಳುಳ್ಳಿ 3 ಗಡ್ಡೆಗಳು
- ಟೊಮೊಟೋ 5
- ಗೋಡಂಬಿ 6-8
- ತುಪ್ಪ 1ಚಮಚ
- ಉಪ್ಪು 1-2 ಚಮಚ
- ಒಗ್ಗರಣೆಗೆ-ಎಣ್ಣೆ 50ಗ್ರಾಂ,ಅರಿಶಿನ 1ಚಿಟಿಕೆ,ಇಂಗು 1ಚಿಟಿಕೆ, ಸಾಸಿವೆ 1ಚಮಚ,ಉದ್ದಿನಬೇಳೆ 1ಚಮಚ,ಕಡಲೇ ಬೇಳೆ1ಚಮಚ,ಕರಿಬೇವು 3 ಎಳಸು
ಮಾಡುವ ವಿಧಾನ
- ಅಕ್ಕಿಯನ್ನು ತೊಳೆದು ಉದುರುದುರಾಗಿ (ತುಪ್ಪ ಬೆರೆಸಿ) ಅನ್ನ ಮಾಡಿಕೊಳ್ಳಿ, ತಣ್ಣಗಾಗಲು ಬಿಡಿ
- ಬೆಳ್ಳುಳ್ಳಿ ಸಿಪ್ಪೆಬಿಡಿಸಿ,ಮೆಣಸಿನಕಾಯಿ ಸೀಳಿ,ಟೊಮೊಟೋ ಬಿಲ್ಲೆಗಳಾಗಿ ಕತ್ತರಿಸಿಕೊಳ್ಳಿ
- ದಪ್ಪ ತಲದ ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ ಒಗ್ಗರಣೆ ಮಾಡಿಕೊಳ್ಳಿ
- ಅದಕ್ಕೆ ಮೊದಲು ಮೆಣಸಿನಕಾಯಿ ನಂತರ ಗೋಡಂಬಿ,ಟೊಮೊಟೋ ಹಾಕಿ ಹಿರಿಯಿರಿ
- ಬೆಂದ ನಂತರ ಅರಿಶಿನ ಹಾಕಿ,ಉಪ್ಪು ಸೇರಿಸಿ
- ಮಿಶ್ರಣ ತಣ್ಣ ನಂತರ ಅನ್ನವನ್ನು ಸೇರಿಸಿ ಕಲಸಿ,ಅಲಂಕಾರಕ್ಕೆ ಕೊತ್ತಂಬರಿ ಸಿಂಪಡಿಸಿ ಬಡಿಸಿ