ಹೀರೇಕಾಯಿ ಸಿಪ್ಪೆ ಚಟ್ನಿ

ಬೇಕಾಗುವ ಸಾಮಗ್ರಿಗಳು
- ಹೀರೇಕಾಯಿ ಅರ್ಧ ಕಿಲೋ
- ಹಸಿ ಮೆಣಸಿನಕಾಯಿ ಹತ್ತು
- ಉಪ್ಪು ಒಂದು ಟೀ ಚಮಚ
- ಹುಣಸೇ ಹಣ್ಣು ನಿಂಬೆ ಗಾತ್ರ
- ವಗ್ಗರಣೆಗೆ ಸ್ವಲ್ಪ ಎಣ್ಣೆ ಕರಿಬೇವು, ಸಾಸಿವೆ, ಇಂಗು, ಜೀರಿಗೆ
ಮಾಡುವ ವಿಧಾನ
- ಹೆರೆದು ಅಡುಗೆಗೆ ಬಳಿಸಿ ಉಳಿದ ಹೀರೇಕಾಯಿ ಸಿಪ್ಪೆಯನ್ನು ತುಂಡು ಮಾಡಿಕೊಳ್ಳಿ
- ಉಳಿದೆಲ್ಲಾ ಸಾಮಾನಿನ ಜೊತೆ ಸ್ವಲ್ಪ ನೀರು ಬೆರೆಸಿ ರುಬ್ಬಿಕೊಳ್ಳಿ
- ಬಾಣಲೆಯಲ್ಲಿ ವಗ್ಗರಣೆ ಹಾಕಿ,ಸಣ್ನಗೆ ಹೆಚ್ಚಿದ ಹೀರೇಕಾಯಿ ಸಿಪ್ಪೆಯನ್ನು ಬಾಡಿಸಿ
- ರುಬ್ಬಿದ ಮಿಶ್ರಣವನ್ನೂ ಅದಕ್ಕೆ ಬೆರೆಸಿ ಎರಡು ನಿಮಿಷ ಬಾಡಿಸಿ