ಬದನೆ ಕಾಯಿ ಎಣ್ಣೆಗಾಯಿ

ಬೇಕಾಗುವ ಸಾಮಗ್ರಿಗಳು
- ಅರ್ಧ ಕಿಲೋ ಗುಂಡು ಬದನೇ ಕಾಯಿ
- ಎಣ್ಣೆ ಒಂದು ಬಟ್ಟಲು
- ಒಂದು ನಿಂಬೆ ಹಣ್ಣು
- ಹತ್ತು ಒಣ ಮೆಣಸಿನ ಕಾಯಿ
- ಕಡ್ಲೇ ಬೇಳೆ ಮತ್ತು ಉದ್ದಿನ ಬೇಳೆ ಎರೆಡೆರೆಡು ಚಮಚ
- ಓಣ ಕೊಬ್ಬರಿ ತುರಿ ಎರಡು ಚಮಚ
- ಒಂದು ಚಮಚ ಕೊತ್ತಂಬರಿ ಬೀಜ
- ಚಕ್ಕೆ,ಮೊಗ್ಗು
- ಲವಂಗ ಸ್ವಲ್ಪ
- ಒಂದು ಚಮಚ ಆರಿಶಿನ್ ಮತ್ತು ಸಾಸಿವೆ
ಮಾಡುವ ವಿಧಾನ
- ಒಣ ಮೆಣಸಿನ ಕಾಯಿ,ಕಡ್ಲೇ ಬೇಳೆ ಮತ್ತು ಉದ್ದಿನ ಬೇಳೆ ,ಓಣ ಕೊಬ್ಬರಿ , ಕೊತ್ತಂಬರಿ ಬೀಜ,ಚಕ್ಕೆ,ಮೊಗ್ಗು,ಲವಂಗ ಎಲ್ಲವನ್ನೂ ಪ್ರತ್ಯೇಕ ಹುರಿದು ಪುಡಿ ಮಾಡಿಕೊಳ್ಳಿ
- ಪುಡಿಗೆ ಉಪ್ಪು, ಅರಿಸಿನ ಸೇರಿಸಿ ಕಲಸಿ
- ಪ್ರತಿಯೊಂದು ಬದನೆ ಕಾಯಿಯನ್ನೂ ತುಂಡಾಗದಂತೆ ನಾಲ್ಕು ಭಾಗ ಸೀಳಿ
- ನಡುವೆ ಒಂದೊಂದು ಚಮಚ ಮಸಾಲೆಯನ್ನು ತುಂಬಿಡಿ
- ಕಾದ ಎಣ್ಣೆಗೆ ಸಾಸಿವೆ,ಕರಿಬೇವು ಹಾಕಿ ಕಾಯಿಗಳನ್ನು ಅದರಲ್ಲಿ ಸುರಿದು ಎಣ್ಣೆಯಲ್ಲೇ ಬೇಯಿಸಿ
- ಹತ್ತು ನಿಮಿಷಗಳ ನಂತರ (ಮೃದುವಾಗಿ ಬೆಂದ ನಂತರ) ಎಣ್ಣೆಗಾಯಿ ಕೆಳಗಿಳಿಸಿ