ದೇವರೆಲ್ಲಿದ್ದಾನೆ ?

ಅಣ್ಣ ತಮ್ಮಂದಿರಾದ ಶಾಮ ರಾಮ ಬಹಳ ತುಂಟ ಬಾಲಕರು . ಊರಲ್ಲೆಲ್ಲಾ ಇವರದ್ದೇ ದೂರು. ಏನಾದರೂ ಅನಾಹುತ ಮಾಡುವುದು ಓಡಿ ಮನೆ ಸೇರುವುದು. ತಾಯಿ ಈ ರಗಳೆಗೆ ರೋಸಿಹೋಗಿ ಒಬ್ಬ ಬ್ರಾಹ್ಮಣ ಗುರುವಿನ ಬಳಿಗೆ ವೇದ ಪಾಠಕ್ಕೆಂದು ಸೇರಿಸಿದಳು.ಮೊದಲ ದಿನ , ಮೊದಲ ಪ್ರಶ್ನೆ, ಅಣ್ಣ ರಾಮನಿಗೆ ಗುರು ಕೇಳಿದ " ದೇವರು ಎಲ್ಲಿದ್ದಾನೆ ? ಹೇಳು".......ಉತ್ತರ ಬರಲಿಲ್ಲ , ಗುರುಗಳು ಇನ್ನೂ ಸ್ವಲ್ಪ ರೇಗಿ ಕೇಳಿದರು "ದೇವರು ಎಲ್ಲಿದ್ದಾನೆ ? " ಊಹು, ಉತ್ತರವಿಲ್ಲ , ಗುರುಗಳು ಇನ್ನೂ ಸ್ವಲ್ಪ ಗಟ್ಟಿ ಧ್ವನಿಯಲ್ಲಿ ಕೇಳಿದರು....ತಕ್ಷಣ ರಾಮ ಭಯದಿಂದ ಆ ಜಾಗದಿಂದ ತಪ್ಪಿಸಿಕೊಂಡು ಓಡಿ ಹೊರಗೆಬಂದು ತಮ್ಮನಾದ ಶಾಮನನ್ನೂ ಎಳೆದುಕೊಂಡು ಊರ ಹೊರಗೆ ಓಡಿದ.ತಮ್ಮ ಕೇಳಿದ " ಯಾಕಣ್ಣಾ ಹೀಗೆ ಹೆದರಿ ಓಡಿಬಂದದ್ದು ?" ಅದಕ್ಕೆ ರಾಮ"ನಾವು ಮತ್ತೆ ಪೀಕಲಾಟಕ್ಕೆ ಸಿಕ್ಕಿದ್ದೇವೆ".... " ಏನಂತೆ?"....... " ನೋಡು ದೇವರು ಕಳೆದು ಹೋಗಿದ್ದಾನಂತೆ ನಾವೇ ಅದಕ್ಕೆ ಕಾರಣ ಅಂತೆ ? ! ? ! " ಎಂದ.