ನಿಂಬೆಕಾಯಿ ಸಾರು

ನಿಂಬೆಕಾಯಿ ಸಾರು
- ಮೂರು ನಿಂಬೆಹಣ್ಣು
- ಒಂದು ಬಟ್ಟಲು ತೊಗರಿಬೇಳೆ
- ಎರಡು ಮಾಗಿದ ಟೊಮಾಟೋ ಹಣ್ಣು
- ಎರಡು ಹಸಿ ಮೆಣಸಿನ ಕಾಯಿ
- ಮೂರು ಕೆಂಪು ಮೆಣಸಿನ ಕಾಯಿ
- ಕಡ್ಲೇ ಬೇಳೆ ಕೊತ್ತಂಬರಿ ಬೀಜ ತಲಾ ಒಂದು ಚಮಚ
- ಜೀರಿಗೆ,ಮೆಣಸು,ಅರಿಶಿನ,ಸಾಸಿವೆ ತಲಾ ಅರ್ಧ ಚಮಚ
- ಒಗ್ಗರಣೆಗೆ ಚಿಟಿಕೆ ಇಂಗು,ಎಣ್ಣೆ,ಕರಿಬೇವು
- ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
- ಬೇಳೆಯನ್ನು ಅರಿಶಿನ ಬೆರೆಸಿ ಬೇಯಿಸಿ ಚೆನ್ನಾಗಿ ತಿರುವಿ ಇಡಿ
- ಹುರಿದ ಒಣ ಮೆಣಸಿನ ಕಾಯಿ,ಕೊತ್ತಮ್ಬರಿ ಬೀಜ,ಕಡ್ಲೇ ಬೇಳೆ,ಮೆಣಸು,ಜೀರಿಗೆ,ಇಂಗು ಎಲ್ಲಾ ಒಣಗಿಸಿ ಕುಟ್ಟಿ ಅಥವಾ ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ
- ಎರಡು ಬಟ್ಟಲು ನೀರು ಕುದಿಸಿ ಅರಿಶಿನ ಹೆಚ್ಚಿದ ಟೊಮಾಟೋ,ಕತ್ತರಿಸಿದ ಹಸಿ ಮೆಣಸಿನ ಕಾಯಿ ಉಪ್ಪು ಹಾಕಿ ಬೇಯಿಸಿ
- ನೀರು ಕುದಿಯುವಾಗ ಬೇಳೆ ಬೆರೆಸಿ ಎರಡು ಬಾರಿ ತಿರುವಿ ರುಬ್ಬಿದ ಪುಡಿ ಬೆರೆಸಿ ಕುದಿಸಿ
- ನಿಂಬೆ ರಸವನ್ನು ಬೆರೆಸಿದ ನಂತರ ಸಾಸಿವೆ ಕರಿಬೇವು ಒಗ್ಗರಣೆ ಹಾಕಿ ಒಲೆಯಿಂದಿಳಿಸಿ