ಅವರೇಕಾಳು ಸಾರು

ಬೇಕಾಗುವ ಸಾಮಗ್ರಿಗಳು
- ಅರ್ಧ ಕಿಲೋ ಅವರೇಕಾಳು
- ತೊಗರಿ ಬೇಳೆ ಕಾಲು ಕಿಲೋ
- ಸಾರು ಅಥವಾ ಮೆಣಸಿನ ಪುಡಿ ಎರಡು ಚಮಚ
- ಕೊತ್ತಂಬರಿ ಸೊಪ್ಪು ಅರ್ಧ ಕಟ್ಟು
- ಕರಿಬೇವು
- ನಿಂಬೆ ಗಾತ್ರ ಹುಣಸೇ ಹಣ್ಣು
- ತುಪ್ಪ ಅಥವಾ ಎಣ್ಣೆ ಒಂದು ಚಮಚ, ಸಾಸಿವೆ,ಇಂಗು
ಮಾಡುವ ವಿಧಾನ
- ಸಿಪ್ಪೆ ಸುಲಿದ ಅವರೇಕಾಳು, ತೊಗರಿ ಬೇಳೆಯನ್ನು ಪಾತ್ರೆಯೊಂದರಲ್ಲಿ ಅಥವಾ ಕುಕ್ಕರ್ನಲ್ಲಿ ಬೇಯಿಸಿಕೊಳ್ಳಿ
- ಕುದಿಯುವ ಬೇಳೆಗೆ ಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು,ಕರಿಬೇವು ಬಿಡಿಸಿ ಹಾಕಿ
- ಹುಣಸೇ ರಸ ಬೆರೆಸುವ ಮುನ್ನ ಉಪ್ಪು ಹಾಕಿ
- ಒಗ್ಗರಣೆ ಸುರಿದು ತಿನ್ನಲು ಬಳಸಿ