ರವೆ ಹುಗ್ಗಿ (ಪೊಂಗಲ್)

ಬೇಕಾಗುವ ಸಾಮಗ್ರಿಗಳು
- ಒಂದು(ಲೋಟ) ಅಳತೆ ರವೆಗೆ ಮುಕ್ಕಾಲು ಅಳತೆ ಹೆಸರು ಬೇಳೆ
- ಎರಡು ಚಮಚ ಉಪ್ಪು
- ಒಂದು ಚಮಚ ಮೆಣಸು
- ಒಂದು ತುಂಡು ಹಸಿ ಶುಂಠಿ
- ಮೂರು ಚಮಚ ಗೋಡಂಬಿ
- ಅರ್ಧಲೋಟ ತುಪ್ಪ
ಮಾಡುವ ವಿಧಾನ
- ರವೆ ಮತ್ತು ಹೆಸರುಬೇಳೆಯನ್ನು ಬೇರೆ ಬೇರೆಯಾಗಿ ತುಪ್ಪದಲ್ಲಿ ಹುರಿದುಕೊಳ್ಳಿ
- ಉಳಿದ ತುಪ್ಪ ಬಾಣಲೆಗೆ ಹಾಕಿ ಕಾದ ನಂತರ ಗೋಡಂಬಿ,ಮೆಣಸು,ಜೀರಿಗೆ ಶುಂಠಿ ಹಾಕಿ
- ಅದು ಸೀದು ಹೋಗುವ ಮೊದಲೇ ನಾಲ್ಕು ಲೋಟ ನೀರು ಸುರಿಯಿರಿ
- ಕುದಿಯಲು ಆರಂಭವಾದಾಗ ಉಪ್ಪು ಹಾಕಿ ನಂತರ ಹುರಿದ ರವೆ ಮತ್ತು ಹೆಸರು ಬೇಳೆ ಬೆರೆಸಿ
- ಗಟ್ಟಿ ಎನಿಸಿದಲ್ಲಿ ಮತ್ತೊಂದು ಲೋಟ ಬಿಸಿನೀರು ಬೆರೆಸಿ