ಬಾಳೆಹಣ್ಣಿನ ಹಲ್ವ

ಬೇಕಾಗುವ ಸಾಮಗ್ರಿಗಳು
- 10-12 ಬಾಳೇಹಣ್ಣು
- ಒಂದು ಬಟ್ಟಲು ಶುದ್ಧ ತುಪ್ಪ
- ಟೀ ಚಮಚ ಏಲಕ್ಕಿ ಪುಡಿ
- ಅರ್ಧ ತೆಂಗಿನ ಕಾಯಿ
- ಒಂದು ಬಟ್ಟಲು ಸಕ್ಕರೆ
ಮಾಡುವ ವಿಧಾನ
- ಬಾಳೇಹಣ್ಣು ಸಿಪ್ಪೆ ಸುಲಿದು ಚೆನ್ನಾಗಿ ಹಿಸುಕಿರಿ
- ಬಾಣಲೆಯಲ್ಲಿ 3ಚಮಚ ತುಪ್ಪ ಕಾಯಿಸಿ ಬಾಳೆಹಣ್ಣನ್ನು ಹಾಕಿ ಗರಿಗರಿಯಾಗುವ ವರೆಗೂ ಬೇಯಿಸಿ
- ತೆಂಗಿನ ಕಾಯಿತುರಿ,ಸಕ್ಕರೆ ಸೇರಿಸಿ,ತುಪ್ಪವನ್ನು ಸ್ವಲ್ಪಸ್ವಲ್ಪವಾಗಿ ಸೇರಿಸಿ
- ಎಲ್ಲವನ್ನೂ ಕಂದು ಬಣ್ಣ ಬರುವವರೆಗೂ ತಿರುವುತ್ತಿದ್ದು ಸುವಾಸನೆ ಬಂದಮೇಲೆ ಏಲಕ್ಕಿಪುಡಿ ಸೇರಿಸಿ ಒಲೆ ಆರಿಸಿ
- ಬಿಸಿ ಇರುವಾಗಲೇ ತಿನ್ನಲು ಕೊಡಿ