ತೆಂಗಿನ ಹಾಲಿನ ಪಾಯಸ

ಬೇಕಾಗುವ ಸಾಮಗ್ರಿಗಳು
- 2ತೆಂಗಿನ ಕಾಯಿ
- 1ಲೀ ಹಾಲು
- 1/4 ಕಿಲೋ ಬೆಲ್ಲ
- 1ಚಮಚ ಏಲಕ್ಕಿಪುಡಿ
- 1ಬಟ್ಟಲು ಅಕ್ಕಿ
- 1ಬಟ್ಟಲು ತುಪ್ಪ
- 2ಚಮಚ ದ್ರಾಕ್ಷಿ
- 2 ಚಮಚ ಗೋಡಂಬಿ
ಮಾಡುವ ವಿಧಾನ
- ತೆಂಗಿನ ಕಾಯು ತುರಿದು ಅರೆದು ಗಟ್ಟಿ ಹಾಲುಪಡೆಯಿರಿ
- ನೀರು ಬೆರೆಸಿ ಇಣ್ಣು ತೆಳು ಹಾಲನ್ನು ಪಡೆಯಿರಿ,ಇದರಿಂದ ಅಕ್ಕಿ ಬೇಯಿಸಿ
- ಅಕ್ಕಿ ಮುಕ್ಕಾಲುಬೆಂದಾಗ ಸ್ವಲ್ಪ ಹಾಲು ಬೆರೆಸಿ ಪೂರ್ತಿ ಬೇಯಿಸಿ
- ಉಳಿದ ಹಾಲು ಸೇರಿಸಿ ಪಕ್ಕಕ್ಕಿಡಿ,ಪೂರ್ತಿ ಹೀರಿಕೊಂಡ ಬಳಿಕ ಜಜ್ಜಿದ ಬೆಲ್ಲೆ ಬೆರೆಸಿ ಮತ್ತೆ ಒಲೆಯಮೇಲಿಡಿ
- ಹುರಿದ ಗೋಡಂಬಿ,ದ್ರಾಕ್ಷಿ ಮತ್ತು ಏಲಕ್ಕಿ ಪುಡಿ ಸೇರಿಸಿ ಕೆದಕಿ.ತಂಪಾದ ಬಳಿಕ ಸೇವಿಸಿ