ಪೂರೀ ಪಾಯಸ

ಬೇಕಾಗುವ ಸಾಮಗ್ರಿಗಳು
- ಒಂದು ಲೋಟ ಮೈದಾ
- ಅಥವಾ ಗೊಧಿ ಹಿಟ್ಟು ಅಥವಾ ಸಣ್ಣ ರವೆ
- ಅರ್ಧ ಲೀ ಹಾಲು
- 300ಗ್ರಾಂ ಸಕ್ಕರೆ
- 50 ಗ್ರಾಂ ಗೋಡಂಬಿ
- ಏಳೆಂಟು ಏಲಕ್ಕಿ
- ಪಚ್ಚ ಕರ್ಪೂರ
- ಕೇಸರಿ ದಳ
- 100 ಗ್ರಾಂ ತುಪ್ಪ
ಮಾಡುವ ವಿಧಾನ
- ರವೆಯಾದರೆ ನೀರು ಬೆರೆಸಿ ತುಪ್ಪ ಸವರಿ ಎತ್ತಿಡಿ/ಮೈದಾ ಅಥವಾ ಗೊಧಿ ಹಿಟ್ಟಾದರೆ ನೀರು ಬೆರೆಸಿ ಕಲಸಿ ಎರಡು ಚಮಚ ತುಪ್ಪ ಬೆರೆಸಿ ಮತ್ತೆ ಕಲಸಿ
- ಕಲಸಿಟ್ಟ ಹಿಟ್ಟನ್ನು ದೊಡ್ಡ ರೊಟ್ಟಿಯಂತೆ ತಟಿ,ಪುಟ್ಟ ಡೈಮಂಡ್ ಆಕಾರಗಳಲ್ಲಿ ಕತ್ತರಿಸಿಕೊಳ್ಳಿ*ಇವನ್ನು ಪೂರಿಯಂತೆ ಎಣ್ಣೆಯಲ್ಲಿ ಕರೆದಿಡಿ
- ಮತ್ತೊಂದು ಪಾತ್ರೆಯಲ್ಲಿ ಹಾಲು ನೀರುಬೆರೆಸಿ, ಕುದಿಸಿ, ಹುರಿದ ತುಂಡುಗಳನ್ನು ಹಾಕಿ ಬೇಯಿಸಿ
- ಬೇಯುವಾಗ ಏಲಕ್ಕಿ ಪುಡಿ,ಪಚ್ಚಕರ್ಪೂರ,ಹುರಿದಿಟ್ಟ ಗೋಡಂಬಿ ಬೆರೆಸಿ.ಪೂರಿ ಪಾಯಸ ಸಿದ್ಧ