ಹೆಸರು ಕಾಳು ಪಾನಕ

ಬೇಕಾಗುವ ಸಾಮಗ್ರಿಗಳು
- ಹೆಸರು ಕಾಳು ಎರಡು ಚಮಚ
- ತೆಂಗಿನಕಾಯಿ ತುರಿ ಅರ್ಧ ಚಮಚ
- ಉಪ್ಪು ಚಿಟಿಕೆ
- ಬೆಲ್ಲ ನಾಲ್ಕು ಚಮಚ
- ಏಲಕ್ಕಿ ಪುಡಿ ಚಿಟಿಕೆ
ಮಾಡುವ ವಿಧಾನ
- ಹೆಸರುಕಾಳನ್ನು ರಾತ್ರಿ ನೀರಿನಲ್ಲಿ ನೆನೆಸಿ, ಮರುದಿನ ತೊಳೆದು,ನೀರು ತೆಗೆದು ರುಬ್ಬಿಡಿ
- ತೆಂಗಿನಕಾಯಿತುರಿ, ಬೆಲ್ಲ,ಉಪ್ಪು, ಸೇರಿಸಿ ಸಣ್ಣಗೆ ರುಬ್ಬಿ
- ಎರಡು ಮೂರು ಲೋಟ ನೀರು ಬೆರೆಸಿ ಕುಡಿಯಿರಿ
**ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಪಿತ್ತಕ್ಕೆ ಒಳ್ಳೆಯ ಶಮನ