ಪಿಸ್ತ ಕುಲ್ಫಿ

ಬೇಕಾಗುವ ಸಾಮಗ್ರಿಗಳು
- ಹಾಲಿನ ಪುಡಿ 50ಗ್ರಾಂ
- ನೀರು ಅರ್ಧ ಲೀಟರ್
- ಜೋಳದಹಿಟ್ಟು 1 ಚಮಚ
- ಖೋವಾ 50 ಗ್ರಾಂ
- ಪಿಸ್ತ ಎಸೆನ್ಸ್ ಅರ್ಧ ಚಮಚ
- ಪಿಸ್ತ ಚೂರು 30 ಗ್ರಾಂ
- ಸಕ್ಕರೆ 75 ಗ್ರಾಂ
- ಐಸ್ ಕ್ರೀಮ್ ಎರಡು ಕಪ್
ಮಾಡುವ ವಿಧಾನ
- ನೀರಿನೊಂದಿಗೆ ಹಾಲಿನ ಪುಡಿ ಬೆರೆಸಿ,ಸಕ್ಕರೆ ಎಸೆನ್ಸ್ ಸೇರಿಸಿ ಹತ್ತು ನಿಮಿಷ ಕುದಿಸಿ.
- ಖೋವಾ ಮತ್ತು ಪಿಸ್ತ ಹಾಕಿ ಮತ್ತೆ ಹತ್ತು ನಿಮಿಷ ಕುದಿಸಿ.
- ಜೋಳದ ಹಿಟ್ಟನ್ನು ಮೂರು ಚಮಚ ನೀರಿನಲ್ಲಿ ಬೆರೆಸಿ,ಐಸ್ ಕ್ರೀಮ್ ಅನ್ನೂ ಮಿಶ್ರಣಕ್ಕೆ ಸೇರಿಸಿ ಮತ್ತೆ ಹತ್ತು ನಿಮಿಷ ಕುದಿಸಿ.
- ಒಲೆಯ ಮೇಲಿಂದ ಇಳಿಸಿ ತಣ್ಣಗಾಗಲು ಬಿಡಿ.
- ಅಗಲವಾದ ಪಾತ್ರೆಗೆ ಹಾಕಿ ಫ್ರಿಡ್ಜ್ ನಲ್ಲಿ ಅರ್ಧಗಂಟೆ ಇಟ್ಟು ಬೇಕಾದ ಅಕಾರಕ್ಕೆ ಕತ್ತರಿಸಿ ಕಡ್ಡಿ ಚುಚ್ಚಿಡಿ
- ಮತ್ತೆ ಒಂದು ಗಂಟೆ ಫ್ರಿಡ್ಜ್ ನಲ್ಲಿಟ್ಟು ತಿನ್ನಲು ಕೊಡಿ