ರಾಜ್ಮಾ ರೈಸ್ ಭಾತ್

ಬೇಕಾಗುವ ಸಾಮಗ್ರಿಗಳು
- ಎಣ್ಣೆ ಅರ್ಧ ಸೌಟು
- ಉದ್ದುದ್ದ ಸೀಳಿದ ಟೊಮಾಟೋ ಮತ್ತು ಈರುಳ್ಳಿ
- ಶುಂಟಿ ಬೆಳ್ಳುಳ್ಳಿ(ಪೇಸ್ಟ್) 1 ಚಮಚ
- ಮೆಣಸು ಕಾಳಿನ ಪುಡಿಅರ್ಧ ಚಮಚ
- ನೆನೆಸಿ ಉಪ್ಪುಹಾಕಿ ಬೇಯಿಸಿದ ರಾಜ್ಮಾ ಕಾಳು ಅರ್ಧ ಲೋಟ
- ಬಾಸುಮತಿಅನ್ನ ಒಂದು ಲೋಟ ಅಕ್ಕಿಯದು
- ಉಪ್ಪು ನಿಂಬೆರಸ ಕೊತ್ತಂಬರಿ ರುಚಿಗೆ ತಕ್ಕಷ್ಟು
ಮಾಡುವ ವಿಧಾನ
- ಬಾಣಲೆಯಲ್ಲಿ ಕಾದ ಎಣ್ಣೆಗೆ ಶುಂಟಿ ಬೆಳ್ಳುಳ್ಳಿ ಪೇಸ್ಟ್,ಟೊಮಾಟೋ ಮತ್ತು ಈರುಳ್ಳಿಹಾಕಿ ಎರಡು ನಿಮಿಷ ಬಾಡಿಸಿ
- ರಾಜ್ಮಾ ಕಾಳು ಉಪ್ಪು ನಿಂಬೆ ರಸ ಸೇರಿಸಿ ಮತ್ತೆ 3-4 ನಿಮಿಷ ಬಾಡಿಸಿ
- ಕೊತ್ತಂಬರಿ ಸೇರಿಸಿ ಅನ್ನಕ್ಕೆ ಮಿಶ್ರಣವನ್ನು ಬೆರೆಸಿ ತಿನ್ನಲು ಕೊಡಿ