ಗಾರ್ಡನ್ ರೈಸ್ ಭಾತ್

ಬೇಕಾಗುವ ಸಾಮಗ್ರಿಗಳು
- ಎಣ್ಣೆ ಒಂದು ಸೌಟು
- ಶುಂಟಿ ಬೆಳ್ಳುಳ್ಳಿ(ಪೇಸ್ಟ್) 1 ಚಮಚ
- ಚಿಲ್ಲಿ ಸಾಸ್/ಹ.ಮೆಣಸಿನ ಕಾಯಿ ಪೇಸ್ಟ್ 3 ಚಮಚ
- ದೊ.ಮೆಣಸಿನಕಾಯಿ,ಈರುಳ್ಳಿ,ಎಲೆಕೋಸು,ಆಲೂಗಡ್ಡೆ,ಕ್ಯಾರೆಟ್,ಹುರಳೀಕಾಯಿ (ಪ್ರತಿಯೊಂದೂ ತೆಳ್ಳಗೆ ಉದ್ದಕ್ಕೆ ಸೀಳಿದ್ದು ಕಾಲು ಲೋಟಗಳು)
- ಹಸಿಬಟಾಣಿ ಕಾಲು ಲೋಟ
- ಸೋಯಾ ಮತ್ತು ಟೊಮಾಟೋ ಸಾಸ್ ಎರಡು ಚಮಚ
- ಬಾಸುಮತಿಅನ್ನ ಒಂದು ಲೋಟ ಅಕ್ಕಿಯದು
- ಉಪ್ಪು ನಿಂಬೆರಸ ಕೊತ್ತಂಬರಿ ರುಚಿಗೆತಕ್ಕಷ್ಟು
ಮಾಡುವ ವಿಧಾನ
- ಬಾಣಲೆಯಲ್ಲಿ ಕಾದ ಎಣ್ಣೆಗೆ ಶುಂಟಿ ಬೆಳ್ಳುಳ್ಳಿ,ಹ.ಮೆಣಸಿನ ಕಾಯಿ ಪೇಸ್ಟ್ ಹಾಕಿ ಒಂದು ನಿಮಿಷ ಬಾಡಿಸಿ
- ದೊ.ಮೆಣಸಿನಕಾಯಿ,ಈರುಳ್ಳಿ,ಎಲೆಕೋಸು,ಆಲೂಗಡ್ಡೆ,ಕ್ಯಾರೆಟ್,ಹುರಳೀಕಾಯಿ,ಹಸಿಬಟಾಣಿ,ಸೋಯಾ ಮತ್ತು ಟೊಮಾಟೋ ಸಾಸ್ ಹಾಕಿ ಮೂರು ನಾಲ್ಕು ನಿಮಿಷ ಬಾಡಿಸಿ
- ಹರವಿದ ಬಾಸುಮತಿ ಅನ್ನಕ್ಕೆ ಕಲಸಿ, ತಿನ್ನಲು ಬಡಿಸಿ