ಬದನೆಕಾಯಿ ಬಜ್ಜಿ(ರಾಯತ)

ಬೇಕಾಗುವ ಸಾಮಗ್ರಿಗಳು
- ಒಂದು ದೊಡ್ಡ ಬದನೆ ಕಾಯಿ
- ಒಂದು ಕಟ್ಟು ಪುದೀನಾ
- ಎರಡು ಲೋಟ ಗಟ್ಟಿ ಮೊಸರು
- ಎಂಟು ಕರಿಮೆಣಸು
- ಅರ್ಧ ಚಮಚ ಜೀರಿಗೆ
- ಅರ್ಧ ಚಮಚ ಅಚ್ಚಮೆಣಸಿನ ಪುಡಿ (ಸಾರಿನ ಪುಡಿಯನ್ನೂ ಉಪಯೋಗಿಸಬಹುದು)
- ಉಪ್ಪು ರುಚಿಗೆ
- ಒಗ್ಗರಣೆಗೆ ಸಾಸಿವೆ, ಜೀರಿಗೆ, ತುಪ್ಪ,ಚಿಟಿಕೆ ಇಂಗು, ಎರಡು ಒಣ ಮೆಣಸಿನಕಾಯಿ
ಮಾಡುವ ವಿಧಾನ
- ಬದನೆಯನ್ನು ತೊಳೆದು ಓವನ್ ಅಥವಾ ಒಲೆಯಮೆಲೆ ಸುಟ್ಟು ತಕ್ಷಣ ಬಾಣಲೆಯಲ್ಲಿ ಬೇಯಿಸಿ
- ಆರಿದ ನಂತರ ಸಿಪ್ಪೆ ಸುಲಿದು ಚೆನ್ನಾಗಿ ಕಿವುಚಿ ಇಡಿ
- ಕರಿಮೆಣಸು, ಜೀರಿಗೆ ಸ್ವಲ್ಪ ಹುರಿದು ಪುಡಿ ಮಾಡಿ
- ಹೆಚ್ಚಿದ ಪುದೀನಾ ಮೊಸರಿಗೆ ಉಪ್ಪು,ಕಿವುಚಿದ ಬದನೆ,ಪುಡಿ ಎಲ್ಲಾ ಸೇರಿಸಿ ಕಲಸಿ
- ಪುಟ್ಟ ಬಾಣಲೆಯಲ್ಲಿ ತುಪ್ಪದ ಒಗ್ಗರಣೆ ಮಾಡಿ ಮಿಶ್ರಣಕ್ಕೆ ಬೆರೆಸಿ, ಉಣಬಡಿಸಿ
- ಇದನ್ನು ಅನ್ನ ಅಥವಾ ಚಪಾತಿ ಜೊತೆಯಲ್ಲೂ ಸೇವಿಸಬಹುದು