ಬದನೆ ಟಿಕ್ಕಾ

ಬೇಕಾಗುವ ಸಾಮಗ್ರಿಗಳು
- ನಾಲ್ಕು ಬದನೆ
- ಕ್ಯಾರೆಟ್ ಒಂದು
- ಬೇಯಿಸಿದ ಆಲೂಗಡ್ಡೆ 2
- ಬಿಡಿಸಿದ ಬಟಾಣಿ
- ಹುರಳಿ ಕಾಯಿ 50ಗ್ರಾಂ
- ಹೆಚ್ಚಿದ 2 ಈರೂಳ್ಳಿ
- 1 ಟೊಮಾಟೋ
- ಗೋಲಿ ಗಾತ್ರದ ಜಜ್ಜಿದ ಶುಂಠಿ
- ಬೆಳ್ಳುಳ್ಳಿ ಮೂರು ದಳ ಜಜ್ಜಿದ್ದು
- ಗರಂ ಮಸಾಲ 1 ಟೀ ಚಮಚ
- ಹೆಚ್ಚಿದ ಹಸಿ ಮೆ.ಕಾಯಿ 2-3
- ಕೊತ್ತಂಬರಿ ಒಂದು ಹಿಡಿ ಹೆಚ್ಚಿದ್ದು
- ಪುದೀನಾ ಹೆಚ್ಚಿದ್ದು ಅರ್ಧ ಕಂತೆ
- ಜೀರಿಗೆ ಅರ್ಧ ಚಮಚ
- ಉಪ್ಪು ಒಂದೂವರೆ ಚಮಚ
- ಧನಿಯಾ ಮತ್ತು ಕೆಂಪು ಮೆನಸಿನ ಪುಡಿ ಎರಡೆರಡು ಚಮಚ
- ಎಣ್ಣೆ ಅರ್ಧ ಸೌಟು
- 2 ಚಮಚ ನಿಂಬೆ ರಸ
ಮಾಡುವ ವಿಧಾನ
- ಬದನೆಯನ್ನು ಅರ್ಧ ಸೀಳಿ ಉರಿಯಲ್ಲಿ ಅರ್ಧ ಬೇಯಿಸಿ,ತಿರುಳನ್ನು ತೆಗೆದು ಸಿಪ್ಪೆ ಬೆರೆಡೆ ಇಡಿ
- ಕ್ಯಾರೆಟ್ ಸಣ್ಣ ತುಂಡು ಮಾಡಿ,ಆಲೂಗಡ್ಡೆ ಸಿಪ್ಪೆ ತೆಗೆದು ನಾದಿಕೊಳ್ಳಿ
- ಕೊತ್ತಂಬರಿ ಪುದಿನಾ ಅರೆದು ಸ್ವಲ್ಪ ಉಪ್ಪು ಬೆರೆಸಿ
- ಬಾಣಲೆ ಕಾದ ನಂತರ ಎಣ್ಣೆಗೆ ಜೀರಿಗೆ ಹಾಕಿ
- ಜೀರಿಗೆ ಸಿಡಿಯುವಾಗ ಈರೂಳ್ಳಿ,ಶುಂಠಿ,ಬೆಳ್ಳುಳ್ಳಿ,ಹ.ಮೆ.ಕಾಯಿ ಸೇರಿಸಿ ಕೆಂಪಗೆ ಹುರಿಯಿರಿ
- ಅರಿಶಿನ,ಧನಿಯಾ ಪುದಿ,ಗರಂ.ಮ.ಪುಡಿ ಉಪ್ಪು ಸೇರಿಸಿ ಹುರಿಯಿರಿ
- ಆಲೂಗಡ್ಡೆ,ಹುರಳಿಕಾಯಿ,ಕ್ಯಾರೆಟ್,ಬದನೆ ಸಿಪ್ಪೆ ಸೇರಿಸಿ ಚೆನ್ನಾಗಿ ಹುರಿಯಿರಿ
- ನಿಂಬೆರಸ ಸೇರಿಸಿ ಉರಿ ಆರಿಸಿ ಕೆಳಗಿಳಿಸಿ
- ಪ್ರತಿ ಬದನೆಯಲ್ಲಿ ಮಸಾಲೆ ಸೇರಿಸಿ ಉರಿಯಲ್ಲಿ ಗ್ರಿಲ್ ಮಾಡಿ