ಪಾಲಕ್ ಸಬ್ಜಿ

ಬೇಕಾಗುವ ಸಾಮಗ್ರಿಗಳು
- ಪಾಲಕ್ ಸೊಪ್ಪು ೧ ಕಂತೆ
- ಮೂಲಂಗಿ ಸೊಪ್ಪು ನೂರು ಗ್ರಾಂ
- ಹೆಚ್ಚಿದ 2 ಈರೂಳ್ಳಿ
- 2 ಟೊಮಾಟೋ
- ಗೋಲಿ ಗಾತ್ರದ ಜಜ್ಜಿದ ಶುಂಠಿ
- ಬೆಳ್ಳುಳ್ಳಿ ಮೂರು ದಳ ಜಜ್ಜಿದ್ದು
- ಗರಂ ಮಸಾಲ 1 ಟೀ ಚಮಚ
- ಹೆಚ್ಚಿದ ಹಸಿ ಮೆ.ಕಾಯಿ 2-3
- ಕೊತ್ತಂಬರಿ ಒಂದು ಹಿಡಿ ಹೆಚ್ಚಿದ್ದು
- ಜಿರಿಗೆ ಅರ್ಧ ಚಮಚ
- ಉಪ್ಪು ಒಂದೂವರೆ ಚಮಚ
- ಧನಿಯಾ ಮತ್ತು ಕೆಂಪು ಮೆನಸಿನ ಪುಡಿ ಎರಡೆರಡು ಚಮಚ
- ಎಣ್ಣೆ ಅರ್ಧ ಸೌಟು
ಮಾಡುವ ವಿಧಾನ
- ಪಾಲಕ್ ಮತ್ತು ಮೂಲಂಗಿ ಸೊಪ್ಪು ತೊಳೆದು ಮೃದುವಾಗುವವರೆಗೂ ಕುಕ್ಕರ್ನನ್ನಿ ಬೇಯಿಸಿ
- ಬಾಣಲೆ ಕಾದ ನಂತರ ಎಣ್ಣೆಗೆ ಜೀರಿಗೆ ಹಾಕಿ
- ಜೀರಿಗೆ ಸಿಡಿಯುವಾಗ ಈರೂಳ್ಳಿ,ಶುಂಠಿ,ಬೆಲ್ಳುಳ್ಳಿ,ಹ.ಮೆ.ಕಾಯಿ ಸೇರಿಸಿ ಕೆಂಪಗೆ ಹುರಿಯಿರಿ
- ಧನಿಯಾ ಮೆನಸಿನ ಪುಡಿ,ಗರಂ ಮ.ಪುಡಿ,ಸೊಪ್ಪು ಹಾಕಿ ಸಣ್ಣ ಉರಿಯಲ್ಲಿ ೨-೩ ನಿಮಿಶ ಬೇಯಿಸಿ
- ರೊಟ್ಟಿಜೊತೆ ತಿನ್ನಲು ಚೆನ್ನ