ಹೆಸರು ಬೇಳೆ ಪಕೋಡ (ಉಡುಪಿ ಶೈಲಿ)

ಬೇಕಾಗುವ ಸಾಮಗ್ರಿಗಳು
- ಹೆಸರುಬೇಳೆ ಒಂದು ಲೋಟ
- ಅರ್ಧ ಲೀಟರ್ ಎಣ್ಣೆ ಕೆಂಪಗೆ ಕರಿಯಲು
- ಮೊಸರು ಒಂದು ಲೋಟ
- ಉಪ್ಪು ಮೆಣಸಿನಪುಡಿ ಒಂದೊಂದು ಚಮಚ
ಮಾಡುವ ವಿಧಾನ
- ಬೇಳೆಯನ್ನು ಎರದು ಘಂಟೆ ಕಾಲ ನೀರಿನಲ್ಲಿ ನೆನೆಸಿ.
- ನೀರು ಬಸಿದು ನುಣ್ಣಗೆ ರುಬ್ಬಿ ಉಪ್ಪುಸೇರಿಸಿ.
- ಬಾಣಲೆಯಲ್ಲಿ ಎಣ್ಣೆಹಾಕಿ ಬಿಸಿಮಾಡಿ.(ಸಾಧಾರಣ ಅಥವಾ ಸಣ್ಣ ಉರಿ)
- ಒದ್ದೆಯಾದ ಕೈಗಳಿಂದ ಗೋಲಿ ಗಾತ್ರ ಉಂಡೆ ಮಾಡಿ ಎಣ್ಣೆಯಲ್ಲಿ ಕರೆಯಿರಿ.
- ಕೆಂಪಗೆ ಕರೆದ ಉಂಡೆಗಳನ್ನು ತಟ್ಟೆಯಲ್ಲಿ ಜೋಡಿಸಿ
- ಅದರ ಮೇಲೆ ಮೊಸರು ಸುರಿದು, ಮಸಾಲೆ ಪುಡಿ ಮತ್ತು ಹೆಚ್ಚಿದ ಕೊತ್ತಂಬರಿ ಸಿಂಪಡಿಸಿ ಬಡಿಸಿ.
- ಎರಡು ತೊಟ್ಟು ಟಮೋಟೋ ಸಾಸ್ ಅವುಗಳ ಮೇಲೆ ಹಾಕಿದಲ್ಲಿ ರೆಸ್ಟೋರೆಂಟ್ ಶೈಲಿಯಲ್ಲಿ ತೋರುವಂತಿಡಬಹುದು
(ಮಸಾಲೆಪುಡಿ-ಒಣಶುಂಟಿಪುಡಿ,ಕಾಳುಮೆಣಸಿನಪುಡಿ,ಹುರಿದ ಜೀರಿಗೆ ಪುಡಿ,ಪುಡಿ ಉಪ್ಪು ಎಲ್ಲಾ ಒಂದೊಂದು ಚಮಚ)