ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಕೋರ್ಟ್-ಲಾಯರ್ರು

picture

ನ್ಯಾಯಾಧೀಶ: ಈತನಿಗೆ ಎರಡೂ ಕಿವಿಗಳನ್ನು ಕತ್ತರಿಸಿ

ಗುಂಡ:ಅಯ್ಯೋ ಬೇಡಾ ಸ್ವಾಮಿ ನಾನು ಕುರುಡ ಆಗೋಗ್ತೀನಿ

ನ್ಯಾಯಾಧೀಶ:ಮೂರ್ಖ ಕಿವಿ ಕತ್ತರಿಸಿದರೆ ಕುರುಡು ಹೇಗೆ ಆಗ್ತಾರೆ? 

ಗುಂಡ:ಆಮೇಲೆ ಕನ್ನಡಕ ಎಲ್ಲಿ ಹಾಕಲಿ? 

****

ಇಬ್ಬರು ವಕೀಲರು ಒಂದು ಹೋಟೆಲಿಗೆ ಹೋಗಿ ಬೈಟು ಕಾಫಿ ಆರ್ಡರ್ ಮಾಡಿ ತಾವು ತಂದಿದ್ದ ತಿಂಡಿಯ ಪೊಟ್ಟಣ ಬಿಚ್ಚಿದರು.ಅಷ್ಟರಲ್ಲಿ ಹೋಟೆಲ್ ಮಾಲೀಕ ಬಂದು"ಸ್ವಾಮಿ ಅಲ್ಲಿ ಬೋರ್ಡ್ ಓದಿ "you cannot bring your own food and eat in" ಮೊದಲೇ ಹೇಳಿ ಕೇಳಿ ವಕೀಲರು ಅವರು ತಕ್ಷಣ ತಾವು ತಂದಿದ್ದ ಪೊಟ್ಟಣ ಬದಲಾಯಿಸಿಕೊಂಡು ತಿನ್ನಲು ಶುರು ಮಾಡಿದರು.ಮಾಲೀಕ ತಲೆ ಕೆರೆದುಕೊಂಡು ಹೊರಟು ಹೋದ.

****

ಕಟಕಟೆಯಲ್ಲಿ ನಿಂತಿದ್ದ ತಪ್ಪಿತಸ್ತನನ್ನು ಕೇಳಲಾಯಿತು ”ನೀನು ಏನು ತಪ್ಪು ಮಾಡಿದೆ? ನ್ಯಾಯಾಲಯಕ್ಕೆ ಬರಲು ಕಾರಣವೇನು?” ಎಂದರು ನ್ಯಾಯಾಧೀಶರು.ಏನಿಲ್ಲಾ ಸ್ವಾಮಿ ಶಾಪಿಂಗ್ ಮಾಡಿದೆ”ಅಂದ,,,,,, ”ಅರೆ ಬರೆ ಶಾಪಿಂಗ್ ಮಾಡಿದ್ದಕ್ಕೆ ನಿನ್ನನ್ನು ಹಿಡಿದು ತಂದರಾ?”ಅದಕ್ಕೆ ಗುಂಡ ”ಕ್ಷಮಿಸಿ ಸ್ವಾಮಿ ”ಅದೂ....ಅಂಗಡಿ ಬಾಗಿಲು ಹಾಕಿದ ಮೇಲೆ” ಎಂದಾಗ ನ್ಯಾಯಾಧೀಶರ ಹುಬ್ಬೇರಿತು..

****

ಪದೇ ಪದೇ ಕಳ್ಳತನ ಮಾಡಿ ಸಿಕ್ಕಿಬಿದ್ದ ಕಳ್ಳನ್ನನ್ನು ನ್ಯಾಯಾಧೀಶರು ”ಮತ್ತೆ ಮತ್ತೆ ಇಲ್ಲಿಗೆ ಬರಲು ನಾಚಿಕೆ ಆಗಲ್ವಾ” ಎಂದರು.ಅದಕ್ಕೆ ಆ ಕಳ್ಳ ”ನೀವು ದಿನಾ ಬರ್ತೀರಾ" ಅನ್ಬೇಕೇ.....

****

ಇಬ್ಬರು ಲಾಯರ್ಗಳು ಕೋರ್ಟಿನ ಊಟದ ಕೋಣೆಯಲ್ಲಿ ಮದ್ಯಾಹ್ನ ಭೋಜನ ಮಾಡುತ್ತಿರಲು ತಟ್ಟನೆ ಒಬ್ಬ ಮೇಲೆದ್ದು” ಅಯ್ಯೋ ನನ್ನ ಲಾಕರ್ ಬೀಗ ಹಾಕುವುದನ್ನೇ ಮರೆತಿದ್ದೇನೆ” ಎಂದ.ಅದಕ್ಕೆ ಮತ್ತೊಬ್ಬ ಅದಕ್ಕೇಕೆ ಗಾಬರಿ ನಾನಿಬ್ಬರೂ ಇಲ್ಲೇ ಇದ್ದೀವಿ ಇನ್ನೇಕೆ ಭಯ”ಎನ್ನಲು ಸಮಾಧಾನವಾಗಿ ಊಟ ಮಾಡಲು ಕುಳಿತ.

****

ಒಬ್ಬ ಲಾಯರ್ ಮನೆಯ ನಾಯಿ ಒಂದು ಮಾಂಸದಂಗಡಿಗೆ ನುಗ್ಗಿ ತುಂಡು ಮಾಂಸವನ್ನು ಕಸಿದು ತಿಂದಿತು.ಆ ವ್ಯಾಪಾರಿ ಲಾಯರ್ ಬಳಿ ಬಂದು”ಸ್ವಾಮೀ ಒಬ್ಬರ ಮನೆ ನಾಯಿ ಅಂಗಡಿಗೆ ನುಗ್ಗಿ ಮಾಂಸ ಕದ್ದು ತಿಂದರೆ ಆ ನಾಯಿಯ ಯಜಮಾನರು ದಂಡ ಕೊಡಬೇಕಾಗುತ್ತದೆ,ಹೌದೋ ಅಲ್ಲವೋ?”ಎಂದ ಪ್ರಶ್ನಿಸಿದ.ಅದಕ್ಕೆ ಲಾಯರ್ ”ಖಂಡಿತವಾಗಿ ಹೌದು” ಎಂದ.ಅದಕ್ಕೆ ಆ ಮಾಂಸದ ವ್ಯಾಪಾರಿ ”ಹಾಗಾದರೆ ನಿಮ್ಮ ಮನೆ ನಾಯಿ ನಮ್ಮ ಅಂಗಡಿಗೆ ಬಂದು ಹಾಗೆ ಮಾಡಿದೆ,ನೀವು ಇಪ್ಪತು ರೂಪಾಯಿ ಕೊಡಿ” ಎಂದ.ಲಾಯರ್ ಮರು ಮಾತಾಡದೆ ಹಣ ಕೊಟ್ಟ. ಎರಡು ವಾರಗಳ ನಂತರ ವ್ಯಾಪಾರಿಗೆ ಇಂದು ಬಿಲ್ ಬಂದಿತ್ತು"ಲಾಯರ್ ಕನ್ಸಲ್ಟೇಶನ್ ಗಾಗಿ 100 ರೂ” ಎಂದು.

****

ಲಾಯರ್ ಒಬ್ಬನು ತನ್ನ ಗಿರಾಕಿಯನ್ನು ಕರೆದು ಹೇಳಿದನು" ನೋಡಯ್ಯಾ ನೀನು ಮುಂದಿನ ತಿಂಗಳಿನಿಂದ 318 ಡಾಲರ್ 28 ಸೆಂಟ್ ಕಟ್ಟಬೇಕು"ಎಂದ.ಅದಕ್ಕೆ ಆ ಬಡವ "ಇದೇನ್ ಸಾರ್ ಇದು ಒಳ್ಳೆ ಕಾರ್ ಪೇಮೆಂಟ್ ಥರ ಇದೆ" ಎಂದ.ಅದಕ್ಕೆ ಲಾಯರ್ "ಹೌದಯ್ಯ ಈಗ ಆ ಕಾರ್ ನಂದು" ಅನ್ನಬೇಕೇ..

****

ಆರೋಪಿಯೊಬ್ಬನನ್ನು ಕೋರ್ಟಿನಲ್ಲಿ ತೀರ್ಪಾಗಿ ಸರಪಳಿ ಹಾಕಿ ದರದರ ಎಳೆದು ಸೆರೆಮನೆಗೆ ಒಯ್ಯುತಿದ್ದರು,ಗುಂಡ ಪೋಲೀಸರನ್ನು "ಯಾರಿವನು? ಎಲ್ಲಿಗೆ ಎಳ್ಕೊಂಡು ಹೋಗ್ತಿದ್ದೀರಿ?"ಅಂದ. ಅದಕ್ಕೆ ಪೋಲೀಸ್ "ಇವನೊಬ್ಬ ಕೊಲೆಗಡುಕ ಜೈಲಿಗೆ ಒಯ್ಯುತ್ತಿದ್ದೇವೆ" ಅಂದ."ಅಯ್ಯೋ ಜೈಲಿಗಾ ನಾನೆಲ್ಲೋ ಪ್ರೈಮರೀ ಸ್ಕೂಲ್ಗೇನೋ ಅಂತಿದ್ದೆ"

****

ಜುಜುಬಿ ರೌಡಿಯೊಬ್ಬ ಕಳ್ಳತನ ಮಾಡಿ ಸಿಕ್ಕಿಬಿದ್ದ, ಕೋರ್ಟು-ಕೇಸು-ಲಾಯರ್ರು-ವಾದ ರೌಡಿಯ ಕಡೆ ಕ್ರಿಮಿನಲ್ ಲಾಯರ್ ಭಲೇ ಬುದ್ಧಿವಂತ,ವಾದದಲ್ಲಿ ಗೆದ್ದ. ತೀರ್ಪು:”ಈತ ಯಾವ ಆಭರಣವನ್ನೂ ಕದ್ದಿಲ್ಲ,ನಿರ್ದೋಷಿ,ಬಿಡುಗಡೆ ಮಾಡಿ" ಎಂದರು ರೌಡಿ:(ಸುಮ್ಮನಿರಲಾರದೆ) ಹಾಗಾದರೆ ಕದ್ದ ಚಿನ್ನಾಭರಣ ಎಲ್ಲಾ ನಂದೇನಾ?...

****

ನ್ಯಾಯಾಧೀಶ: ಹೋಗೀ ಹೋಗೀ ದೇವಸ್ಥಾನಕ್ಕೇ ಕನ್ನ ಹಾಕಿದ್ಯಲ್ಲಯ್ಯಾ? ಕಳ್ಳ: ಅಂಗಲ್ಲ ಸಾಮೀ, ಯಾವ್ದಾದ್ರೂ ಕೆಲ್ಸ ಸುರು ಮಾಡೋವಾಗ ದೇವ್ರಿಂದಾ ತಾನೇ ಸುರು ಅಚ್ಕೋಬೇಕೂ?

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2022