ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಮೇಷ್ಟ್ರು-ಮಕ್ಳು

picture

ಕಂಠಪೂರ್ತಿ ಕುಡಿದು ಚರಂಡಿಯಲ್ಲಿ ಬಿದ್ದ ಕುಡುಕ,ಮಳೆ ಗುಡುಗು ಮಿಂಚು ಎಲ್ಲಾ ಬಡಿದರೂ ನಿಶೆ ಇಳಿಯದ ಕುಡುಕ ಹೇಳಿದ "ದೇವರೇ ಏನಪ್ಪ ನಿನ್ನ ಲೀಲೆ,ಮಳೆ ಬರಸೋನೂ ನೀನೆ, ಮೋರೀಲ್ ಬೀಳ್ಸೋನೂ ನೀನೆ,ಫೋಟೋ ತೆಗೆಸೋನೂ ನೀನೆ"

****

ಟೀಚರ್: ಗುಂಡಾ ನೀರು ಮತ್ತು ನೆಲದಮೇಲೆ ಎರಡೂ ಕಡೆ ಬದುಕಬಲ್ಲ ಪ್ರಾಣಿ ಯಾವುದು?

ಗುಂಡ: ಕಪ್ಪೆ ಸಾರ್

ಟೀಚರ್: ಗುಡ್ ಇನ್ನೂ ಎರಡು ಉದಾಹರಣೆ ಕೊಡು

ಗುಂಡ: ಕಪ್ಪೆಯ ಆಪ್ಪ ಮತ್ತು ಅದರ ಅಮ್ಮ ಸಾರ್

****

ಮೇಷ್ಟ್ರು: "ಯಾವ ದ್ರವ್ಯವು ಕಾಯಿಸಿದಾಗ ಘನ ವಸ್ತು ಆಗುತ್ತದೆ?"

ಗುಂಡ:"ಇಡ್ಲಿ ಹಿಟ್ಟು ಸಾರ್"

ಹೆಂಡತಿ: ಏನ್ರಿ ಈ ಥರ ಅಡುಗೆ ಮಾಡಿದ್ರೆ ನನಗೇನ್ ಸಿಗತ್ತೆ?

ಗಂಡ: LIC  à²‡à²¨à³à²¶à³à²°à²¨à³à²¸à³ ಹಣ ಸಿಗತ್ತೆ

****

ಪ್ರಿನ್ಸಿಪಾಲ್;ಕಾಲೇಜಿಗೆ ಯಾಕೋ ಲೇಟಾಗಿ ಬಂದೆ? 

ವಿದ್ಯಾರ್ಥಿ:ಬೈಕ್ ಪಂಚರ್ ಆಗೋಯ್ತು ಸಾರ್.. 

ಪ್ರಿನ್ಸಿಪಾಲ್; ಅದ್ಯಾಕೋ ಬೈಕಲ್ಲೇ ಬರಬೇಕು? ಬಸ್ ಇತ್ತಲ್ಲಾ 

ವಿದ್ಯಾರ್ಥಿ:ಇತ್ತೂ ಸಾರ್ ಅದ್ರೆ ನಿಮ್ಮ ಮಗಳು ಕೇಳ್ಬೇಕಲ್ಲ 

****

ವಿದ್ಯಾರ್ಥಿ ಕೇಳಿದ “ಏನ್ಸಾರ್ ಇದು” ಟೀಚರ್ “ಪ್ರಶ್ನೆ ಪತ್ರಿಕೆ” .....ಇದು .....ಉತ್ತರ ಪತ್ರಿಕೆ .....ಇದೇನ್ ಸಾರ್ ಅನ್ಯಾಯ?......ಯಾಕಪ್ಪಾ?.......ಪ್ರಶ್ನೆ ಪತ್ರಿಕೆಯಲ್ಲಿ ಎಲ್ಲಾ ಬರೆದಿದೆ, ಆದ್ರೆ ಉತ್ತರ ಪತ್ರಿಕೆಯಲ್ಲಿ ಏನು ಇಲ್ವಲ್ಲಾ! 

****

ಟೀಚರ್:ನೀನು ಶಾಲೆಗೆ ಯಾಕೆ ಬರ್ತೀಯಾ? 

ತಿಮ್ಮ:ವಿದ್ಯಾ ಗೋಸ್ಕರ ಸಾರ್

ಟೀಚರ್:ಹಾಗಾದ್ರೆ ನಿದ್ದೆ ಯಾಕ ಮಾಡ್ತಿದ್ದೀಯಾ? 

ತಿಮ್ಮ:ಇವತ್ತು ವಿದ್ಯಾ ಬಂದಿಲ್ಲವಲ್ಲಾ ಅದಕ್ಕೆ ಸಾರ್

****

ಮಕ್ಕಳೇ ನೀವು ಆರೋಗ್ಯಾವಾಗಿರಬೇಕೂಂದ್ರೆ ಕಡಿಮೆ ಅಂದ್ರೂ ಎಂಟು ಗಂಟೆ ಮಲಗಬೇಕು. 

ತಿಮ್ಮ ಕೇಳಿದ ”ಅದ್ ಹೇಗೆ ಸಾಧ್ಯ ಸಾರ್? ಶಾಲೆ 7ಕ್ಕೇ ಶುರು ಆಗತ್ತೆ?” 

****

ಟೀಚರ್ :ತಿಮ್ಮಾ ನಿನ್ನ ಹಾಗೂ ಗುಂಡನ answer ಪೇಪರ್ ಒಂದೇ ಥರಾ ಇದ್ಯಲ್ಲಾ ಯಾಕೆ? 

ತಿಮ್ಮ: ಯಾಕೇಂದ್ರೆ ನಮ್ಮಿಬ್ಬರ Qestion ಪೇಪರ್ರೂ ಒಂದೇ ಇತ್ತಲ್ಲಾ!! 

****

ಒಬ್ಬ ಹುಡುಗಿ ಶಾಲೆಗೆ ಲೇಟಾಗಿ ಬಂದಳು.ಟೀಚರ್ ಯಾಕೆಂದು ಕೇಳಲು ’ಒಬ್ಬ ನನ್ನ ಹಿಂದೇನೇ ಬರುತ್ತಿದ್ದ ” ಟೀಚರ್:ಅದಕ್ಕೆ ನೀನೇಕೆ ಲೇಟಾಗಿ ಬಂದೆ? 

ಹುಡುಗಿ:ಸಾರ್ ಅವನು ಬಹಳ ನಿಧಾನವಾಗಿ ನಡೀತಿದ್ದ

****

ಬಾಲಕಿ ಒಬ್ಬಳು ಚರ್ಚ್ನಲ್ಲಿ ಕಣ್ಮುಚ್ಚಿ "ದೇವರೇ ಮಾಸ್ಕೋನಾ ಚೈನಾ ದೇಶದ ರಾಜಧಾನಿಯನ್ನಾಗಿ ಮಾಡಪ್ಪಾ"ಎಂದು ಪದೇ ಪದೇ ಜೋರಾಗಿ ಬೇಡುತ್ತಿದ್ದಳು.ಆಕೆಯ ಅಕ್ಕ ಕಾರಣ ಕೇಳಲು "ನೆನ್ನೆ ಪರೀಕ್ಷೆಯಲ್ಲಿ ಮಾಸ್ಕೋ ಚೈನಾದ ರಾಜಧಾನಿ ಎಂದು ಬರೆದಿರುವೆ"ಎಂದಳು

****

ಸಂಗೀತ ಪಾಠಕ್ಕೆ ತಪ್ಪಿಸಿಕೊಳ್ಳಲು ಗುಂಡ ಮೇಡಂ ಗೆ ಫೋನ್ ಹಚ್ಚಿದ”ಹಲೋ,ನನ್ನ ಮಗನಿಗೆ ಈವತ್ತು ಮೈ ಸರೀಇಲ್ಲ ಅವನು ಸಂಗೀತಕ್ಕೆ ಬರಕ್ಕಾಗಲ್ಲ”.....”ಯಾರು? ಯಾರು ಮಾತಾಡ್ತಿರೋದು?......ಗಾಬರಿಯಿಂದ ಗುಂಡ ”ನಾನು ಮೇಡಂ,ಅಲ್ಲ ಅಲ್ಲ ನಮ್ಮಪ್ಪ”ಎಂದು ಸಿಕ್ಕಿ ಬಿದ್ದ.

****

ಶಾಲೆ ಇನ್ಸ್ಪೆಕ್ಷನ್ ಗೆ ಬಂದ ಅಧಿಕಾರಿಗಳು ಮಕ್ಕಳನ್ನು ಕುರಿತು ”ಎಂಟ್ ಎಂಟ್ಲ ಎಷ್ಟು” ಅಂದರು,ಅದಕ್ಕೆ ಒಬ್ಬ ಹುಡುಗ”148 ಸಾರ್”ಅಂದ.”ಏನ್ರೀ ಮೇಷ್ಟ್ರೇ ಇದೇನಾ ನೀವು ಹೇಳ್ಕೊಟ್ಟಿರೋದ” ಅಂದ್ರು ಅಧಿಕಾರಿಗಳು.ಅದಕ್ಕೆ ಆ ಮೇಷ್ಟ್ರು” ಅಯ್ಯೋ ಸಾರ್ ನಾನು ಈ ಶಾಲೆಗೆ ಬಂದಾಗ 2468 ಅಂತ ಹೇಳ್ತಿದ್ರೂ, ಚೆನ್ನಾಗಿ ಹೊಡೆದೂ ಬಡಿದು ಈಗ 148 ಇಳಿಸಿದ್ದೀನಿ”ಎಂದು ಜಾರಿಕೊಂಡರು.

****

ಊರಿಂದೂರಿಗೆ ವರ್ಗಾವಣೆ ಆಗುತ್ತಿದ್ದ ಬ್ರಹ್ಮಚಾರಿ ಉಪಾಧ್ಯಾಯನೊಬ್ಬನಿಗೆ ಸಿಹಿತಿಂಡಿ ಎಂದರೆ ಬಹಳ ಇಷ್ಟ. ಆತನು ಹಳ್ಳಿಯಲ್ಲಿ ಹಬ್ಬದ ಮಾರನೇ ದಿನಾ ಮಕ್ಕಳು ಮನೆಯಿಂದ ಸಿಹಿತಿಂಡಿ ತರುವುದನ್ನೇ ಕಾಯ್ದು ಕುಳಿತಿರುತ್ತಿದ್ದನು. ಎಲ್ಲಾ ಮಕ್ಕಳು ತಂದರೂ ಒಮ್ಮೆಯಾದರೂ ಸಿಹಿತಿಂಡಿ ತರದ ತಿಮ್ಮ ಒಮ್ಮೆ ಒಂದು ಹಳೇ ಚೊಂಬಿನಲ್ಲಿ ಪಾಯಸ ಹಿಡಿದು ತಂದನು.ಅದನ್ನು ಕಂಡು ಆಶ್ಚರ್ಯ ಸಂತೋಷಗಳಿಂದ ಮಾಸ್ತರು”ಏನಯ್ಯಾ ಇವತ್ತು ಮಾಸ್ತರಿಗೆ ಪಾಯಸ ತಂದಿದ್ದೀಯಾ,ಏನು ವಿಶೇಷ ಎಂದು ಪ್ರಶ್ನಿಸಲು ತಿಮ್ಮ ಹೇಳಿದ”ಏನಿಲ್ಲ ಮಾಷ್ಟ್ರೆ ನಮ್ಮನೆ ನಾಯಿಗೆ ಇಟ್ವಿ ಅದು ತಿನ್ನಲಿಲ್ಲ ಅದಕ್ಕೇ ತಂದೆ”ಎಂದ.ಮಾಸ್ತರಿಗೆ ರೇಗಿ ಚೊಂಬನ್ನು ನೆಲಕ್ಕೆ ಅಪ್ಪಳಿಸಿದರು.ಚೊಂಬು ಜಜ್ಜಿ ಹೋಯಿತು.ತಿಮ್ಮ ಗೊಳೋ ಎಂದು ಅಳಲಾರಂಭಿಸಿದ.ಮಾಸ್ತರು ”ನಾಯಿಗಿಟ್ಟ ಪಾಯಸ ತಂದು ಈಗ ಅಳ್ತಾ ಇದ್ದೀಯಾ”ಎಂದರು.ಅದಕ್ಕೆ ತಿಮ್ಮ ”ಅದಕ್ಕಲ್ಲಾ ಮೇಷ್ಟ್ರೆ ಆ ಚೊಂಬು ನಮ್ಮಣ್ಣನ ಪಾಯಖಾನೇದು”ಎನ್ನಬೇಕೇ...

****

ಮೇಷ್ಟ್ರು ಪಾಠ ಮುಗಿಸಿ ಮನೆಗೆ ಹೋಗುವಾಗ ಕಾಲುಜಾರಿ ದೊಡ್ಡ ಹಳ್ಳಕ್ಕೆ ಬಿದ್ದು ಸಹಾಯಕ್ಕೆಂದು ಕೂಗುತ್ತಿದ್ದರು.ಮಕ್ಕಳೂ ಸಹ ಅದೇ ದಾರಿಯಲ್ಲಿ ಬರುತ್ತಿರಲು ಆ ಆರ್ಥ ನಾದ ಕೇಳಿ ಹಳ್ಳದಲ್ಲಿ ಇಣುಕಿ ನೋಡಲು ಮೇಷ್ಟ್ರು"ಮಕ್ಕಳಾ ನೀವಾದ್ರೂ ಬಂದ್ರಾಪ್ಪ ಬನ್ನಿ ನನ್ನನ್ನ ಮೇಲೆ ಹತ್ತಲು ಸಹಾಯ ಮಾಡಿ" ಎಂದರು.ತಕ್ಷಣ ತಿಮ್ಮ"ಊಹೂ ಮೇಷ್ಟ್ರೇ ಯಾರನ್ನ ಬೇಕಾದ್ರೂ ಮೇಲೆ ಎತ್ತೀವಿ ಆದರೆ ನಿಮ್ಮನ್ನ ಮಾತ್ರ ಸಾಧ್ಯವಿಲ್ಲ" ಅಂದ.ಮೇಷ್ತ್ರು "ಅಯ್ಯೋ ಯಾಕ್ರಪ್ಪಾ?" ಎಂದರು ಅದಕ್ಕೆ ತಿಮ್ಮ"ಆಹಾ ನೀವು ಹೇಳಿಕೊಟ್ಟ ಪಾಠ ಪ್ರತಿಯೊಬ್ಬನೂ ಸ್ವಪ್ರಯತ್ನದಿಂದಲೇ ಮೇಲಕ್ಕೆ ಬರಬೇಕು,ನಮಗೆ ಚೆನ್ನಾಗಿ ಅರ್ಥವಾಗಿದೆ"ಅನ್ನಬೇಕೆ.

****

ಮೇಷ್ಟ್ರು:"ಘಸ್ನಿ ಮೊಹಮದ್ ನಮ್ಮ ದೇಶಕ್ಕೆ ಮೊದಲ ಹೆಜ್ಜೆ ಇಟ್ಟ ಕೂಡಲೆ ಮಾಡಿದ್ದು ಏನು?" ತಿಮ್ಮ:"ಎರಡನೇ ಹೆಜ್ಜೆ ಇಟ್ಟ ಸಾರ್"

****

 "ಹೋಮ್ ವರ್ಕ್ ಮಾಡಿದ್ದೀಯ ಜಲಜ?"..."ಹೌದೂ ಸಾರ್"....."ಸರಿ ತಗೋಡು ಬಾ"......"ಅದು ಹೇಗೆ ತರಲಿ ಸಾರ್ ಮನೆ ಕೆಲಸ ಪಾತ್ರೆ ತೊಳೆದು,ಬಟ್ಟೆ ಒಗೆದು,ಕಸಗೂಡಿಸಿ,ಮನೆ ವರೆಸಿದ್ದೆಲ್ಲಾ ತರಕ್ಕಾಗಲ್ಲ ಸಾರ್"

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2025