ತಿಮ್ಮ-ಗುಂಡ-ಪಾಂಡು

ಡಾಕ್ಟರ್: ನೋಡು ತಿಮ್ಮ ನಿನಗೆ ಎರಡು ನ್ಯೂಸ್ ಇದೆ, ಒಂದು ಗುಡ್ ನ್ಯೂಸ್ ಮತ್ತೊಂದು ಬ್ಯಾಡ್.
ತಿಮ್ಮ :ಹಾ! ಮೊದಲು ಬ್ಯಾಡ್ ನ್ಯೂಸ್ ಹೇಳ್ಬಿಡಿ
ಡಾ:ನಿನಗೆ ರೋಗ ಬಂದಿದ್ದ ಕಾಲಿಗೆ ಬದಲಾಗಿ ಮತ್ತೊಂದು ಕಾಲು ಕತ್ತರಿಸಿಬಿಟ್ಟಿದ್ದೇವೆ,ಸಾರಿ!
ತಿಮ್ಮ:ಅಯ್ಯೋ ಹೋಯ್ತೇ ನನ್ ಕಾಲು, ಹಾಳಾಗೋಯ್ತು ಹೋಗ್ಲಿ ಗುಡ್ ನ್ಯೂಸ್ ಏನ್ ಹೇಳಿ
ಡಾ:ನಿನ್ನ ಇನ್ನೊಂದು ಕಾಲು ಈಗ ವಾಸಿ ಆಗ್ತಾ ಇದೆ.
****
ತಿಮ್ಮನ ತಂದೆ ಗೊಟಕ್ ಅಂದಿದ್ದ, ಸ್ವಲ್ಪವೂ ಬೇಸರವಿಲ್ಲದೆ ತಿರುಗಾಡುತ್ತಿದ್ದ ಅವನನ್ನು ಕಂಡು ಗುಂಡ”ಅಲ್ಲವೋ ಅಪ್ಪ ಸತ್ತಿದ್ದಾರೆ ಅಂತ ಸ್ವಲ್ಪಾನೂ ಶೋಕಾನೇ ಇಲ್ವಲ್ಲೋ ನಿನಗೆ, ಕಡೇ ಪಕ್ಷ ಪೇಪರ್ನಲ್ಲಿ ಒಂದು ಶ್ರದ್ಧಾಂಜಲೀ ನಾದ್ರೂ ಹಾಕಿಸೋ”ಅಂದ. ಅದಕ್ಕೆ ತಿಮ್ಮ ಪೆಪರ್ ನಲ್ಲಿ ಆಫರ್ ಇತ್ತು ಏಳು ಪದಗಳಿಗೆ ಏಳು ಡಾಲರ್ ಅಂತ.ಕಡೆಗೆ ಯೋಚನೆ ಮಾಡಿ ಒಂದು ಜಾಹಿರಾತು ಕೊಟ್ಟ ಅದು ಹೀಗಿತ್ತು “Dad died Toyota Corolla 1995 for sale” !!!!!
****
ಗುಂಡ: ನಿನ್ನ ಹೆಂಡತಿ ಯಾವಾಗ್ಲೂ ಯಾಕೆ ಕೋಪ ಮಾಡ್ಕೊಂಡ್ ಇರ್ತಾಳೆ?
ತಿಮ್ಮ :ಒಂದು ದಿನ ನಾನು ಅವ್ಳಿಗೆ “ನೀನು ಕೋಪ ಮಾಡ್ಕೊಂಡಾಗ ಸುಂದರವಾಗಿ ಕಾಣ್ತೀಯಾ” ಅಂದೆ ಅದಕ್ಕೆ ಯಾವಾಗ್ಲೂ ಊ
****
ತಿಮ್ಮ:ಜೀವನದಲ್ಲಿ ಏನು ಆಗ್ಬೇಕು ಅಂದ್ಕೋಂಡಿದ್ದೀಯಾ?
ಗುಂಡ: ನಾನೂ ನನ್ನ ತಂದೆಯಂತೆ ಡಾಕ್ಟರ್ ಆಗ್ಬೇಕೂ ಅಂದ್ಕೋಂಡಿದ್ದೀನಿ.
ತಿಮ್ಮ:ಹಾಗಾದ್ರೆ ನಿನ್ನ ತಂದೆ ಡಾಕ್ಟರಾ?
ಗುಂಡ:ಇಲ್ಲಾ ಅವರೂ ಡಾಕ್ಟರ್ ಆಗ್ಬೇಕೂ ಅಂದ್ಕೋಂಡಿದ್ರಂತೆ.
****
ತಿಮ್ಮನ ಹೆಂಡತಿ: ನಿನ್ನಗಂಡ ದಿನಾ ಕುಡ್ಕೊಂಡು ಬರ್ತಾನಲ್ಲಾ ನೀನು ಕೇಳಲ್ವಾ?
ಗುಂಡನ ಹೆಂಡತಿ: ಕೇಳ್ದೆ.........ಕೊಡಲ್ಲಾ ಅಂದ್ರು
****
ಗುಂಡಣ್ಣ;ಏನಂತ ಮದುವೆ ಮಾಡ್ಸಿದ್ಯಯ್ಯಾ ನನ್ನ ಸೊಸೆ ಮದುವೆಯ ಮಾರನೆ ದಿನಾನೇ ವಾಂತಿ ಮಾಡಿದ್ಳು?
ಬ್ರೋಕರ್:ಅದೇ ನಾನು ಹೇಳ್ಳಿಲ್ವಾ ಹುಡ್ಗೀಗೆ 21 ವರ್ಷ, 3 ತಿಂಗಳು ಅಂತ.
****
ಪೋಲೀಸ್: ಈ ರಸ್ತೆ ದುರಸ್ತಿಯಲ್ಲಿದೆ,ಅಪಘಾತ ವಲಯ, ನಿಧಾನವಾಗಿ ಚಲಿಸಿ ಅಂತ ಬೋರ್ಡ್ ಇತ್ತಲ್ಲ ಏನಾಯ್ತು?
ಗುಂಡ:ಬೋರ್ಡ್ ಹಾಕಿದಮೇಲೆ ಯಾವ್ದೂ ಅಪಘಾತ ಅಗಲಿಲ್ಲ ಇನ್ನ್ಯಾಕೆ ಸುಮ್ನೆ ವೇಸ್ಟ್ ಅಂತ ಕಿತ್ತಾಕಿಬಿಟ್ಟ
****
ಗುಂಡ:ಅಪ್ಪಾ ಗುಲಾಬಿ ಗಿಡ ನೆಟ್ಟು ಒಂದು ತಿಂಗಳಾದ್ರೂ ಬೇರು ಬಿಟ್ಟೇ ಇಲ್ಲ?
ಅಪ್ಪ:ಅದು ನಿಂಗೆ ಹೇಗೆ ಗೊತ್ತು?
ಗುಂಡ:ಹೌದಪ್ಪಾ ನಾನು ದಿನಾ ಕಿತ್ತು ನೋಡ್ತಿದ್ದೀನಿ!
****
ಅಜ್ಜ: ಲೋ ಗುಂಡ ನಿಮ್ಮ ಮೇಷ್ಟ್ರು ಬರ್ತಿದ್ದಾರೆ ಬಚ್ಚಿಟ್ಕೋ
ಗುಂಡ:ಮೊದಲು ನೀನು ಬಚ್ಚಿಟ್ಕೋ ಮೊನ್ನೆ ನೀನು ಸತ್ತೆ ಅಂತ ಶಾಲೆಗೆ ಚಕ್ಕರ್ ಹಾಕಿದ್ದೆ.
****
ಗುಂಡ:ಏನಯ್ಯ ಪಾಂಡು ನಿಮ್ಮ ಮನೇಲಿ 25 ಜನ,ಫಾಮಿಲಿ ಪ್ಲಾನಿಂಗ್ ನವರು ಬರಲೆ ಇಲ್ವಾ?
ಪಾಂಡು;ಬಂದಿದ್ರು,ಸ್ಕೂಲು ಅಂದ್ಕೊಂಡು ವಾಪಸ್ ಹೋದ್ರು.
****
ಸೇಲ್ಸ್ ಮ್ಯಾನ್:ಸಾರ್ ನಿಮಗೆ ಪೌಡರ್ ಬೇಕಾ?
ಗುಂಡ:ಯಾರಿಗೆ ಇದು?
ಸೇಲ್ಸ್ ಮ್ಯಾನ್:ಇಲಿಗಳಿಗೆ ಸಾರ್
ಗುಂಡ:ಬೇಡ ಇವತ್ತು ಪೌಡರ್ ಕೊಟ್ರೆ ನಾಳೆ ಲಿಪ್ ಸ್ಟಿಕ್ ಕೇಳಬಹುದು....
****
ಗುಂಡ:ನಿನಗೆ ಎಷ್ಟು ಮಾರ್ಕ್ಸ್ ಬಂತು?
ತಿಮ್ಮ: 99%
ಗುಂಡ:ಅಬ್ಬ ಅಷ್ಟರಲ್ಲಿ ಮೂರುಜನ ಪಾಸ್ ಆಗಬಹುದಿತ್ತು
****
ಗುಂಡ ಕೆಲಸಕ್ಕೆ ಅರ್ಜಿ ಹಾಕುತ್ತಿದ್ದ ಹೆಸರು...ಗುಂಡ....ವಿಳಾಸ.....ವಯಸ್ಸ್ಸು......ವಿದ್ಯೆ.....ಅನುಭವ....ಎಲ್ಲಾ ಭರ್ತಿ ಮಾಡಿದ ಕಡೆಯಲ್ಲಿ salary expected....ಅಂತಿತ್ತು.ಅಲ್ಲಿ ಏನೂ ಬರೆಯಲು ತೋಚದೆ Yes ಎಂದು ಬರೆದ
****
ಗುಂಡ ಡಾಕ್ಟರಿಗೆ ಫೋನ್ ಮಾಡಿ"ಡಾಕ್ಟರೇ ಹೆಂಡತಿ ತುಂಬು ಗರ್ಭಿಣಿ ಹೊಟ್ಟೆ ತುಂಬಾ ನೋಯ್ತಾ ಇದೆ, ಕಾನ್ಟ್ರಾಕ್ಷನ್ ಪ್ರತಿ ಎರಡು ನಿಮಿಶಕ್ಕೊಮ್ಮೆ ಆಗ್ತಿದೆ"ಅಂದ. ಅದಕ್ಕೆ ಡಾಕ್ಟರ್ ‘ಇದು ಅವರ ಮೊದಲ ಮಗೂನಾ?’ ಎಂದ. ಗುಂಡ ರೇಗಿದ "ಸ್ವಾಮೀ ನಾನು ಆಕೆ ಗಂಡ ನನ್ನನ್ನೇ ಹಿಂಗೆ ಕೇಳ್ತೀರಾ"
****
ಅಪ್ಪ: ಲೋ ತಿಮ್ಮ ನಾಯಿ ಬಾಲಕ್ಕೆ ಯಾಕೋ ಪೈಪ್ ಹಾಕ್ತಾ ಇದ್ದೀಯಾ,ಅದು ಯಾವತ್ತೂ ನೆಟ್ಟಗೆ ಆಗೋಲ್ಲ
ತಿಮ್ಮ:ಅದಕ್ಕೇ ಅಪ್ಪ ಪೈಪ್ ಸೊಟ್ಟ ಮಾಡ್ತಾ ಇದ್ದೀನಿ
****
ಗುಂಡ: ನಮ್ಮ ಅಜ್ಜ ಸಾಯೋವಾಗ ತುಂಬ ಆಸ್ತಿ ಬಿಟ್ಟು ಹೋದ,ನಿನ್ನಜ್ಜ?
ತಿಮ್ಮ: ನನ್ನಜ್ಜ ಸಾಯೋವಾಗ ಲೋಕಾನೇ ಬಿಟ್ಟು ಹೋದ
****
ಪ್ರೀತಿ:ಯಾಕೆ ಗುಂಡ ನನ್ನ ಹತ್ರ ಮಾತೇ ಆಡ್ತಾ ಇಲ್ಲ
ಗುಂಡ: ನೀನೇ ಹೇಳಿದ್ಯಲ್ಲ?ಪ್ರೀತಿಗಿಂತ ಸ್ನೇಹಾನೇ ಶಾಶ್ವತ ಅಂತ.....ಅದಕ್ಕೆ ನಿನ್ನ ಬಿಟ್ಟು ಸ್ನೇಹಾನ ಲವ್ ಮಾಡ್ತಿದ್ದೀನಿ
****
ಗುಂಡ ಮಧ್ಯ ರಾತ್ರಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ,ಪೋಲೀಸ್ ಅವನನ್ನು ತಡೆದು”ಏನಯ್ಯಾ ರಾತ್ರಿ 12ಘಂಟೆ ಆಯ್ತು ಈಗ ಇಲ್ಲೇಕೆ ಓಡಾಡ್ತಾ ಇದ್ದೀಯಾ?ಏರೋಪ್ಲೈನ್ ಹತ್ತಿಸಬೇಕಾ?
ಗುಂಡ: ಅಯ್ಯೋ ಬೇಡಾ ಸಾರ್ ಯಾವುದಾದ್ರೂ ಒಂದು ಆಟೋ ಹತ್ತಿಸಿಬಿಡಿ ದಮ್ಮಯ್ಯಾ ಅಂತೀನಿ
****
ನ್ಯಾಯಾಧೀಶ: ಈತನಿಗೆ ಎರಡೂ ಕಿವಿಗಳನ್ನು ಕತ್ತರಿಸಿ
ಗುಂಡ:ಅಯ್ಯೋ ಬೇಡಾ ಸ್ವಾಮಿ ನಾನು ಕುರುಡ ಆಗೋಗ್ತೀನಿ
ನ್ಯಾಯಾಧೀಶ:ಮೂರ್ಖ ಕಿವಿ ಕತ್ತರಿಸಿದರೆ ಕುರುಡು ಹೇಗೆ ಆಗ್ತಾರೆ?
ಗುಂಡ:ಆಮೇಲೆ ಕನ್ನಡಕ ಎಲ್ಲಿ ಹಾಕಲಿ?
****
ಗುಂಡ ಪೋಲೀಸ್ ಸ್ಟೇಷನ್ ಮುಂದೆ ನಿಂತು ಸುಸು ಮಾಡ್ತಿದ್ದ
ಪೋಲೀಸ್:ಏ ಗುಂಡ ಸ್ಟೇಷನ್ ಮುಂದೆ ಹೀಗೆ ಸುಸು ಮಾಡಿದ್ರೆ ಹಿಡ್ಕೊಂದ್ ಬಿಡ್ತೀನಿ ಹುಷಾರ್
ಗುಂಡ: ಹಿಡ್ಕೊಂಡ್ ಹೋಗಿ ಸಾರ್ ಸುಮ್ಮನೆ ವೇಸ್ಟ್ ಆಗ್ತಿದೆ
****
ಗುಂಡ ಮತ್ತು ತಿಮ್ಮ ಕಾಡಿನಲ್ಲಿ ಹೋಗುತ್ತಿದ್ದರು.ಎದುರಿಗೆ ಒಂದು ಹುಲಿ ಬಂದಿತು.ಗುಂಡ ಅದರ ಕಣ್ನಿಗೆ ಮಣ್ಣು ಎರಚಿ ಓಡಲು ಶುರುಮಾಡಿದ.ಅಲ್ಲೇ ನಿಂತಿದ್ದ ತಿಮ್ಮನನ್ನು "ಏ ತಿಮ್ಮ ಬೇಗ ಓಡು" ಅಂದ.ಅದಕ್ಕೆ ತಿಮ್ಮ"ನಾನೇಕೆ ಓಡಲಿ ಮಣ್ಣು ಎರಚಿದ್ದು ನೀನು ಅಲ್ವಾ?
****
ಅಪ್ಪ: ಲೋ ಗುಂಡ ಪರೀಕ್ಷೆ ಯಾಕೋ ಬರೀಲಿಲ್ಲ?
ಗುಂಡ:ಪೇಪರ್ ತುಂಬಾ ಟಫ್ ಆಗಿತ್ತು ಅಪ್ಪ.
ಅಪ್ಪ:ಪರೀಕ್ಷೆನೇ ಬರೀಲಿಲ್ಲ ಟಫ್ ಅಂತ ಅದು ಹೇಗೆ ಗೊತ್ತಾಯ್ತು?
ಗುಂಡ:ನೆನ್ನೇನೇ ಪೇಪರ್ ಲೀಕ್ ಆಗಿತ್ತು ಅಪ್ಪಾ...
****
ತಿಮ್ಮ :ಊರಲ್ಲಿ ರಜದಲ್ಲಿ ಏನು ಮಾಡ್ತಿದ್ದೆ?
ಗುಂಡ:ನಮ್ಮಪ್ಪಂಗೆ ಸಹಾಯ ಮಾಡ್ತಿದ್ದ
ತಿಮ್ಮ: ನಿಮ್ಮಪ್ಪ ಏನ್ ಮಾಡ್ತಿದ್ರು?
ಗುಂಡ:ಏನೂ ಕೆಲಸ ಇರೋಲ್ಲ ಸುಮ್ಮನೆ ಇರ್ತಿದ್ರು..
****
ಗುಂಡ:ಟ್ರೈನ್ ನಲ್ಲಿ ನಿದ್ದೇನೇ ಮಾಡಕ್ಕಾಗಲಿಲ್ಲ,ಯಾಕೇಂದ್ರೆ ಅಪ್ಪರ್ ಬರ್ತ್ ಸಿಕ್ಕಿತ್ತು
ತಿಮ್ಮ:ಆದ್ರೆ ನೀನು ಯಾಕೆ ಬದಲಾಯಿಸಿಕೊಳ್ಳಲಿಲ್ಲ?
ಗುಂಡ:ಬದಲಾಯಿಸಿಕೊಳ್ಳಕ್ಕೆ ಕೇಳೋಣಾ ಅಂದ್ರೆ ಅಲ್ಲಿ ಯಾರೂ ಇರಲಿಲ್ಲ.
****
ಗುಂಡ:ನಾನು ಮದುವೆಯಾಗಿ ಸುಖವಾಗಿರೋಣಾ ಅಂತಿದ್ದೀನಿ
ತಿಮ್ಮ;ನೀನು ತುಂಬಾ ತಮಾಷೆಯಾಗಿ ಮಾತಾಡ್ತೀಯಪ್ಪ....
****
ಗುಂಡ: ಅಪ್ಪಾ ನೀನು ಈಜಿಪ್ಟ್ ಗೆ ಹೋಗಿದ್ಯಾ?
ಅಪ್ಪ: ಇಲ್ಲಾ ಕಣೋ,ಯಾಕೆ?
ಗುಂಡ:ಹಾಗಿದ್ರೆ ಈ ಮಮ್ಮಿ ನಿನ್ನಹತ್ರ ಹ್ಯಾಗೆ ಬಂದಳು?
****
ಪಾಂಡು:ಸ್ವಾಮೀ ನನ್ನ ಹೆಂಡತಿ ಕಾಣೆಯಾಗಿದ್ದಾಳೆ
ಸ್ಟೇಷನ್ ಮಾಸ್ಟರ್: ಇದು ರೈಲ್ವೇ ಸ್ಟೇಷನ್ ಪೋಲೀಸ್ ಸ್ಟೇಷನ್ ಅಲ್ಲ
ಪಾಂಡು:ಏನು ಮಾಡ್ಲೀ ಸ್ವಾಮೀ ನನಗೆ ಬಹಳ ಸಂತೋಷ ಆಗ್ತಿದೆ ಏಲ್ಲಿ ಹೋಗ್ಬೇಕು ಅನ್ನೋದೇ ಗೊತ್ತಾಗ್ತಾ ಇಲ್ಲ.
****
ತಿಮ್ಮ: ನೀನು ಕೋಪ ಕಂಟ್ರೋಲ್ ಮಾದಲು ಕಲ್ತಿದ್ದೀಯಾ?
ಗುಂಡ:ಓಹೋ ಕಲ್ತಿದ್ದೀನಿ
ತಿಮ್ಮ:ನನ್ನ ಮೇಲೆ ನಿನಗೆ ತುಂಬಾ ಕೋಪ ಬಂದರೆ ಏನು ಮಾಡ್ತೀಯಾ?
ಗುಂಡ:ಟಾಯ್ಲೆಟ್ ಕ್ಲೀನ್ ಮಾಡ್ತೀನಿ
ತಿಮ್ಮ:ಅದರಿಂದ ನಿನಗೇನು ತೃಪ್ತಿ ಸಿಗತ್ತೆ?
ಗುಂಡ:ನಾನು ಟಾಯ್ಲೆಟ್ ಕ್ಲೀನ್ ಮಾಡೋದು ನಿನ್ನ ಟೂತ್ ಬ್ರಶ್ ನಿಂದ!!!!!
****
ತಿಮ್ಮ:ನಮ್ಮ PWD ಗುಮಾಸ್ತ ಸುಳ್ಳು ಲೆಕ್ಕ ಬರೆದಿದ್ದಾನೆ, ಕಡಿಮೆ ಅಂದ್ರೆ ಐದು ಸಾವಿನ ನುಂಗಿದ್ದಾನೆ
ಗುಂಡ:ನಿಂಗೆ ಹೇಗೆ ಗೊತ್ತಾಯ್ತು?
ತಿಮ್ಮ:ಆ ಭೂಪಾ ರೋಡ್ ರೋಲರ್ ಪಂಚರ್ ಗೆ ಲೆಕ್ಕ ಬರೆದಿದ್ದನೆ ನೋಡು
****
ಕನ್ನಡದ ಮೊದಲ ಮೂಕೀ ಚಿತ್ರ ಯಾವುದು?
ಗುಂಡ: ಚಿತ್ರ ಮೂಕಿಯಾಗಿದ್ದರೆ ಕನ್ನಡ ಅಂತ ಹೇಗೆ ಗೊತ್ತಾಗತ್ತೆ ಸಾರ್ ?
****
ಗುಂಡ:ಕವಿತಗೂ-ಪ್ರಬಂಧಕ್ಕೂ ವ್ಯತ್ಯಾಸವೇನು?
ತಿಮ್ಮ:ಗೆಳತಿಯರ ಬಗ್ಗೆ ಮಾತನಾಡಿದರೆ ಕವಿತೆ ಅಂತಾರೆ.ಹೆಂಡತಿ ಬಗ್ಗೆ ಮಾತನಾಡಿದರೆ ಅದು ಪ್ರಬಂಧವಾಗಬಹುದೇನೋ
****
ತಿಮ್ಮ: ಎನೋ.... ಗುಂಡ ಮನೆ ಖಾಲಿ ಮಾಡಿ ಹೋಗ್ತಿದ್ದೀಯಂತೆ?
ಗುಂಡ : ಹೌದು ತಿಮ್ಮ
ತಿಮ್ಮ : ಸರಿ ಬಿಡು ನಾನೂ ಬಹಳ ದಿನದಿಂದ ಖಾಲಿ ಮಾಡ್ಬೇಕೂ ಅಂದ್ಕೊಂಡಿದ್ದೆ
ಗುಂಡ : ಮತ್ತೆ ನೀನು ಯಾವಾಗ ಖಾಲಿ ಮಾಡೋದು?
ತಿಮ್ಮ : ಇಲ್ಲ ಬಿಡು ನೀನು ಖಾಲಿ ಮಾಡಿಯಾಯ್ತಲ್ಲ, ಇನ್ನು ನಾನ್ಯಾಕೆ ಮಾಡಲಿ
****
ಬಾಸ್ - ನಮಗೆ ಒಬ್ಬ ಜವಾಬ್ದಾರಿಯುತ ನೌಕರ ಬೇಕಾಗಿದೆ
ಗುಂಡ - ಹಾಗಿದ್ರೆ ನಾನೇ ಅದಕ್ಕೆ ಲಾಯಕ್ಕು ಸ್ವಾಮಿ, ನನ್ನ ಹಿಂದಿನ ಕೆಲಸದಲ್ಲಿ ಎಲ್ಲಾ ತಪ್ಪಿಗೂ ನಾನೆ ಜವಾಬ್ದಾರಿ ಅಂತಿದ್ರು....ಊ..
****
ಬಾಸ್ - ಕೆಲಸ ಅರಸಿ ಬಂದವನನ್ನು ಒಂದು ಹಕ್ಕಿಯ ಕಾಲಿನ ಚಿತ್ರ ತೋರಿಸುತ್ತಾ'ಅದರ ಹೆಸರು ಏನು'' ಎಂದು ಕೇಳಿದ
ಗುಂಡ - ನನಗೆ ಗೊತ್ತಿಲ್ಲ ಸಾರ್
ಬಾಸ್ - ನೀನು ರಿಜೆಕ್ಟ್ , ನಿನ್ನ ಹೆಸರೇನು?
ಗುಂಡ -ನನ್ನ ಕಾಲುಗಳನ್ನು ನೋಡಿ ತಿಳ್ಕೊಳ್ಳಿ
****
ಗುಂಡ: ಈವತ್ತು ನಾನು ನಿದ್ದೆ ಮಾಡಲ್ಲ ಕಣೋ........ಪುಂಡ: ಯಾಕೇ?......ಗುಂಡ: ನೆನ್ನೆ ನನ್ನ ವೈರಿ ಜೊತೆ ಜಗಳ ಆಡಿದೆ.....ಪುಂಡ: ಅದಕ್ಕೆ ?........ಗುಂಡ: ಇವತ್ತು ಮತ್ತೆ ಅವನು ಅವನ ಕಡೆ ಗ್ಯಾಂಗ್ ಕರ್ಕೊಂಡು ಬಂದ್ರೆ?
****
ಗುಂಡ: ಲೇ ಪುಂಡ I‘m going ಅಂದ್ರೆ ಏನೋ......ಪುಂಡ:ನಾನು ಹೊಗ್ತೀನಿ..........ಗುಂಡ: ಎಲ್ಲಿಗೆ ಹೋಗ್ತೀಯ ನಿಲ್ಲೋ,ಒಂದು ಪ್ರೆಶ್ನೆ ಕೇಳಿದ್ರೆ ತಕ್ಷಣ ಹೀಗೆ ಹೋಗೋದಾ?
****
ಗುಂಡ ಕೆಲಸಕ್ಕೆ ಅರ್ಜಿ ಹಾಕುತ್ತಿದ್ದ. ಹೆಸರು - ಗುಂಡ,....ವಿಳಾಸ.....,ವಯಸ್ಸ್ಸು......,ವಿದ್ಯೆ.....,ಅನುಭವ......,ಎಲ್ಲಾ ಭರ್ತಿ ಮಾಡಿದ. ಕಡೆಯಲ್ಲಿ salary expected....ಅಂತಿತ್ತು.ಅಲ್ಲಿ ಏನೂ ಬರೆಯಲು ತೋಚದೆ Yes ಎಂದು ಬರೆದ
****
ಗುಂಡ ಡಾಕ್ಟರಿಗೆ ಫೋನ್ ಮಾಡಿ"ಡಾಕ್ಟರೇ ಹೆಂಡತಿ ತುಂಬು ಗರ್ಭಿಣಿ ಹೊಟ್ಟೆ ತುಂಬಾ ನೋಯ್ತಾ ಇದೆ, ಕಾನ್ಟ್ರಾಕ್ಷನ್ ಪ್ರತಿ ಎರಡು ನಿಮಿಶಕ್ಕೊಮ್ಮೆ ಆಗ್ತಿದೆ"ಅಂದ. ಅದಕ್ಕೆ ಡಾಕ್ಟರ್ "ಇದು ಅವರ ಮೊದಲ ಮಗೂನಾ?" ಎಂದ. ಗುಂಡ ರೇಗಿದ "ಸ್ವಾಮೀ ನಾನು ಆಕೆ ಗಂಡ ನನ್ನನ್ನೇ ಹಿಂಗೆ ಕೇಯ್ತೀರಾ"
****
ಗುಂಡನಿಗೆ ತನ್ನನ್ನು ಯಾರೋ ಕೊಲೆ ಮಾಡುವ ಕನಸು ಬಿತ್ತು.ಮುಂದಿನ ದಿನವೇ ಬ್ಯಾಂಕ್ ಗೆ ಹೋಗಿ ತನ್ನ ಖಾತೆ ಮುಚ್ಚಿದ. ಕ್ಲರ್ಕ್ ಕಾರಣ ಕೇಳಲು ಗುಂಡ ಬ್ಯಾಂಕ್ ನಲ್ಲಿದ್ದ ಬೋರ್ಡ್ ತೋರಿಸಿದ. ಅಲ್ಲಿ ” ನಿಮ್ಮ ಕನಸು ನನಸಾಗುವ ಕಾಲ ಬಂದಿದೆ” ಎಂದಿತ್ತು.
****
ರಂಗ ಫೋನ್ನಲ್ಲಿ ಮಾತನಾಡುತ್ತಿದ್ದ.. .
ಗುಂಡ: ಯಾರೊಂದಿಗೆ ಮಾತಾಡ್ತಿದ್ದೆ?
ರಂಗ: ಹೆಂಡತಿ ಜತೆ.
ಗುಂಡ: ಅಷ್ಟೊಂದು ಪ್ರೀತಿಯಿಂದ...?
ರಂಗ: ನಿನ್ನ ಹೆಂಡತಿ..!
****
ಸತ್ತು ದೇವಲೋಕಕ್ಕೆ ಹೋದ ಗುಂಡ ಬ್ರಹ್ಮನನ್ನು ಪ್ರಶ್ನಿಸಿದ ”ಮಹಿಳೆಯರನ್ನೇಕೆ ಸುಂದರವಾಗಿ ಮಾಡಿದೆ ಪ್ರಭು?” ಅದಕ್ಕೆ ಬ್ರಹ್ಮನು” ನಿನ್ನಂಥವರು ಮದುವೆಯಾಗೆಂದು” ಗುಂಡ”ಆದ್ರೆ ಅವರನ್ನು ಮೂರ್ಖರನ್ನಾಗೇಕೆ ಮಾಡಿದೆ?” ಅದಕ್ಕುತ್ತರವಾಗಿ ಬ್ರಹ್ಮ”ನಿನ್ನಂಥವರನ್ನು ಪ್ರೀತಿಸಬೇಕಲ್ಲಾ ಅದಕ್ಕೆ” ಅಂದ.
****
ತಿಮ್ಮ ಬೇಸಿಗೆಯ ಉರಿ ಬಿಸಿಲಿನಲ್ಲಿ ದಾರಿಯಲ್ಲಿ ನಡೆದು ಹೋಗುತ್ತಿರಲು,ಪಕ್ಕದಲ್ಲಿದ್ದ ಸ್ಮಶಾನದಮಧ್ಯೆ ಒಂದು ಶಾರ್ಟ್ ಕಟ್ ಕಾಣಿಸಿತು.ಸರಿ ಬೆಳಗಿನ ಹೊತ್ತು ಏನೂ ಆಗದು,ಬಿಸಿಲು ಬೇನೆ ಬೇರೆ ತಾಳಲಾರದೆ ಸ್ಮಶಾನದ ಮಧ್ಯೆ ಅಡ್ಡದಾರಿ ಹಿಡಿದ.ನಿರ್ಜನ ಪ್ರದೇಶ,ಬೀಸುತ್ತಿದ್ದ ಗಾಳಿ,ನೆತ್ತಿ ಸುಡುವ ಸೂರ್ಯ ಎಲ್ಲಾದರೂ ಸ್ವಲ್ಪ ರೆಸ್ಟ್ ತಗೊಂಡು ಮುಂದೆ ಸಾಗುವ ಎಂದು ಒಂದು ಮರದಡಿಯಲ್ಲಿದ್ದ ಕಟ್ಟೆಯ ಮೇಲೆ ಮುದುಗನೊಬ್ಬ ಕುಳಿತಿದ್ದುದನ್ನು ಕಂಡು ಅವನ ಪಕ್ಕದಲ್ಲಿ ಕುಳಿತ.ಸುಮ್ಮನೆ ಮೂಕನಂತೆ ಕೂಡುವುದಾದರೂ ಹೇಗೆ”ಏನ್ ಸೆಕೆನಪ್ಪಾ” ಅಂದ,ಅದಕ್ಕೆ ಆಮುದುಕ ಹೌದು ಒಳಗೆ ಇನ್ನೂ ಧಗೆ ಅದಕ್ಕೆ ಸ್ವಲ್ಪ ಹೊತ್ತು ಹೊರಗೆ ಬಂದೆ” ತಕ್ಷಣ ತಿಮ್ಮ ಪರಾರಿ!
****
ಮನೆಕೆಲಸದ ಆಳಾದ ತಿಮ್ಮ ಒಮ್ಮೆ ಮನೆ ಯಜಮಾನಿ ಸೀರೆ ಉಡುತ್ತಿರುವಾಗ ಬಾಗಿಲುತಟ್ಟದೇ ಒಳಗೆ ನುಗ್ಗಿದ.ಆಕೆಯ ಅದೃಷ್ಟಕ್ಕೆ ಆಗಷ್ಟೇ ಸೀರೆ ಉಟ್ಟಿದ್ದು ಮುಗಿದಿತ್ತು.ಹೇಗಾದರೂ ಇರಲಿ ಮುಂದೆ ಎಂದೂ ಹೀಗಾಗರೆ ಇರಲಿ ಎಂದು ಆಕೆ ”ಏನೋ ತಿಮ್ಮಾ, ಸ್ವಲ್ಪ ನೋಡ್ಕೊಂಡು ತಾನೆ ಒಳಗೆ ಬರಬೇಕೂ?”ಎನ್ನುವಷ್ಟರಲ್ಲಿ ತಿಮ್ಮ”ಊ ಅಮ್ಮಾರೇ ಎಲ್ಲಾ ನೋಡ್ದೆ ನೀವು ಸೀರೆ ಪೂರ್ತಿ ಉಟ್ಟಾದಮೇಲೆ ಬಾಗಿಲು ತೆಗೆದು ಒಳಗೆ ಬಂದೆ ಅಮ್ಮಾರೆ” ಅನ್ಬೇಕಾ !
****
ಸಿಕ್ಕವರಿಗೆಲ್ಲ್ಲಾ ಕೆಲಸ ಕೊಡಿಸ್ತೀನಿ ಅಂತ ಹೇಳಿ ಲಂಚ ಪಡೆದು ಮೋಸಮಾಡುತ್ತಿದ್ದ ಪುಡಾರಿಯೊಬ್ಬ.ಕಾಲ್ ಮೇಲೆ ಕಾಲ್ ಹಾಕಿಕೊಂಡು ಕುಳಿತಿದ್ದ ಪುಡಾರಿ ತಿಮ್ಮ ತನ್ನ ಆಫೀಸಿನೊಳಗೆ ಬಂದದ್ದನ್ನು ಕಂಡು ನಾಟಕ ಮಾಡುವ ಸಲುವಾಗಿ ಫೋನ್ ಹಿಡಿದು”ಸರಿ ಬನ್ನಿ ನಿಮಗೆ ಯಾವ ಕೆಲಸ ಬೇಕು ಎಲ್ಲಿ ಬೇಕು ಅಂತ ಹೇಳಿ ಕೆಲಸ ಗ್ಯಾರಂಟಿ ಸರ್ಕಾರಿ ಅಫೀಸ್ ಕೆಲಸಕ್ಕೆ 1ಲಕ್ಷ ,ಬೇರೆ ಬೇರೆ ಕೆಲಸಕ್ಕೆ....”ಅನ್ನುವಷ್ಟರಲ್ಲಿ ತಿಮ್ಮ ಮಧ್ಯೆ ತಲೆ ಹಾಕಿ”ಸಾರ್ ಅದೂ...” ಪುಡಾರಿ ”ಏ ತಾಳಯ್ಯ ಸಾಹೇಬರ ಹತ್ರ ಮಾತಡ್ತಿದ್ದೇನೆ”ಎಂದು ಬಾಯಿ ಮುಚ್ಚಿಸಿದ,ಹೀಗೇ ನಾಲ್ಕಾರು ಬಾರಿ ತಿಮ್ಮ ಮಧ್ಯೆ ಸಾರ್ ಸಾರ್ ಎನ್ನುತಿರಲು ಪುಡಾರಿ ರೇಗಿ ಕೇಳಿದ”ಏನಯ್ಯಾ? ಏನು ಬಂದದ್ದು?” ಅಂದ.ಅದಕ್ಕೆ ತಿಮ್ಮ ”ನಾನು ನಿಮ್ಮ ಫೋನ್ ರಿಪೇರಿ ಮಾಡಲು ಬಂದವ”ಎನ್ನಬೇಕೆ.
****
ಮೊದಲಬಾರಿ ವಿಮಾನದಲ್ಲಿ ಕುಳಿತ ತಿಮ್ಮ ಕಿಟಯಿಯಿಂದ ಹೊರಗೇ ನೋಡುತ್ತಿದ್ದ.ವಿಮಾನ ಯಂತ್ರಗಳು ಶುರುವಾಗುತ್ತಲೇ ಮೈ ಜುಂ ಎಂದಿತು ಗುಂಡನಿಗೆ,ಮೊದಲ ಅನುಭವ ಹೇಗಿರಬಹುದೆಂಬ ಕುತೂಹಲ ಆತಂಕ,”ವಾವ್, ಗೆಳೆಯ ಹೇಳಿದ್ದು ನಿಜ ಜನರೆಲ್ಲಾ ಇರುವೆ ಕಂಡ ಹಾಗೆ ಕಾಣ್ತಿದ್ದರೆ ನಿಜ”ಎಂದ ತಕ್ಷಣ ಪಕ್ಕದಲ್ಲಿದ್ದವ ”ಅದು ನಿಜವಾಗಲೂ ಇರುವೇನೇ ವಿಮಾನ ಇನ್ನೂ ಹಾರೇ ಇಲ್ಲ” ಎಂದ.
****
ಪ್ರವಾಸಕ್ಕೆಂದು ಒಂದು ಸ್ಥಳಕ್ಕೆ ಹೋಗಿದ್ದ ತಿಮ್ಮ ಮತ್ತವನ ಹೆಂಡತಿ ತಿಮ್ಮಿ ಬೆಳಿಗ್ಗೆ ಕಾಫಿ ಕುಡಿಯಲು ಹೋಟೆಲ್ ಗೆ ಹೋದರು.ಹೋಟೆಲಿನವರನ್ನು ವಿಚಾರಿಸಲೆಂದು ತಿಮ್ಮ ” ನಿಮ್ಮ ಹೋಟೆಲ್ನಲ್ಲಿ ಏನೇನಿದೆ” ಅಂದ.ಅದಕ್ಕೆ ಮಾಣಿ” ನೋಡಿ ಸ್ವಾಮಿ ಬೆಳಿಗ್ಗೆ 6-11ತಿಂಡಿ,ಮಧ್ಯಾಹ್ನ11-4 ಊಟ,ಸಂಜೆ4-7 ತಿಂಡಿ, ರಾತ್ರಿ 7-10 ಘಂಟೆ ವರೆಗೆ ಊಟ ಸಿಗ್ತದೆ” ಎಂದ.ತಕ್ಷಣ ತಿಮ್ಮಿ ”ಅಯ್ಯೋ ಹಾಗಾದ್ರೆ ನಾವು ಊರು ನೋಡೋದ್ ಯಾವಾಗಾ?”ಎಂದಳು.
****
ಗುಂಡ ತನ್ನಹೆಂಡತಿಗೆ ಕಿವುಡಾಗಿದೆ ಎಂದು ಡಾಕ್ಟರ್ ಬಳಿ ಹೇಳಿದ.ಡಾಕ್ಟರ್ ಹಾಗಿದ್ದರೆ ಮೊದಲು ಖಚಿತಮಾಡಿಕೊಳ್ಳಲು ಉಪಾಯ ಹೇಳಿದ. ಅದರಂತೆ ಮನೆಗೆ ಬಂದ ಕೂಡಲೇ ಗುಂಡ "ಲೇ ಇವತ್ತು ಏನು ಅಡಿಗೆ?"ಎಂದು ಕೂಗಿದ,ಉತ್ತರವಿಲ್ಲ.ಮತ್ತೆ ಒಂದೆರೆಡು ಹೆಜ್ಜೆ ಮುಂದೆ ಸಾಗಿ "ಇವತ್ತು ಏನೇ ಅಡಿಗೆ ?"ಎಂದ,ಊ ಹೂ ಉತ್ತರ ಬರಲಿಲ್ಲ. ಮನೆಯ ಒಳಗೆ ಹೋದ,ಅಡುಗೆ ಮನೆಗೂ ಹೋದ,ಕಡೆಗೆ ಹತ್ತಿರಕ್ಕೆ ಹೋಗಿ ಕೂಗಿದ ಹೆಂಡತಿ ಜೋರಾಗಿ ಕೂಗಿ ಹೇಳಿದಳು "ಬದನೇಕಾಯಿ ವಾಂಗೀಭಾತ್ ಅಂತ 9ಸಲ ಹೇಳಾಯ್ತು ನೀವು ಮೊದಲು ಯಾವ್ದಾದ್ರೂ ಡಾಕ್ಟ್ರತ್ರ ಕಿವಿ ತೋರಿಸಿ" ಅದಕ್ಕೆ ಗುಂಡ"ಆ ಏನಂದೆ?"
****
ಗೆಳೆಯನನ್ನು ಆಸ್ಪತ್ರೆಯಲ್ಲಿ ನೋಡಲು ಹೋದ ಗುಂಡ ನರ್ಸ್ ನನ್ನು ಕರೆದು ಕೇಳಿದ."ಅಲ್ಲಾ ಅದ್ಯಾಕೆ ನೀವು ಎದೆ ಮೇಲೆ ಹಿಂಭಾಗದಲ್ಲಿ ಅಷ್ಟೊಂದು ಪಿನ್ ಗಳನ್ನ ಚುಚ್ಚಿಕೊಂಡಿದ್ದೀರಿ " ಅದಕ್ಕೆ ನರ್ಸ್ ಕೇಳಿದಳು"ಏನಿಲ್ಲಾ ಡಾಕ್ಟರ್ ಗಳನ್ನ ದೂರ ಇಡೋಕೆ"
****
ಗುಂಡ:ನಾನು ಕಾಫಿ ಕುಡಿಯುವಾಗಲೆಲ್ಲಾ ನನ್ನ ಕಣ್ಣಿಗೆ ಏನೋ ಚುಚ್ಚಿದಹಾಗೆ ನೋವಾಗುತ್ತದೆ" ಡಾಕ್ಟರ್:" ಚಮಚವನ್ನು ತೆಗೆದು ಕುಡಿಯಿರಿ ಎಲ್ಲ ಸರಿ ಹೋಗುತ್ತದೆ"
****
ತಿಮ್ಮ : ಯಾಕೆ ಅಳ್ತಿದ್ದೀಯಾ ?
ಗುಂಡ : ನನ್ನ ಒಬ್ಬ ಗೆಳೆಯನ ಮುಖದ ಪ್ಲಾಸ್ಟಿಕ್ ಸರ್ಜರಿಗಾಗಿ ಹತ್ತು ಲಕ್ಷ ರೂಪಾಯಿ ಸಾಲ ಕೊಟ್ಟೆ
ತಿಮ್ಮ : ಏನಾಯಿತು ಈಗ ? ಕೈ ಕೊಟ್ಟು ಓಡಿ ಹೋದ್ನ ?
ಗುಂಡ : ಓಡಿ ಹೋಗಿಲ್ಲ, ಆದ್ರೆ ಸರ್ಜರಿ ಆದ ನಂತರ ಅವನ ಗುರುತೇ ಸಿಕ್ತಾ ಇಲ್ಲ!
****
ಮೈಕೈಯೆಲ್ಲಾ ಗಾಯವಾಗಿ ಊದಿಕೊಂಡಿದ್ದ ಗುಂಡನನ್ನು ಕಂಡು ಗೆಳೆಯ - 'ಗುಂಡ, ಇದೇನೋ ನಿನ್ನ ಅವಸ್ಥೆ'?
ಗು೦ಡ: ಏನು ಹೇಳಲಿ, ಔಷಧ ಬದಲಾಗಿ ಹೋಯ್ತು.
ಗೆಳೆಯ : ಔಷಧ ಬದಲಾದರೆ ಹೀಗೆ ಆಗುತ್ತಾ? ಯಾವ ಔಷಧಿ ಅದು?
ಗುಂಡ: ರಾತ್ರಿ ಶಕ್ತಿ ವರ್ಧನೆಗೇಂತ ಡಾಕ್ಟರ್ ನನಗೆ ಔಷಧ ಕೊಟ್ಟಿದ್ರು. ಆದರೆ ಅದನ್ನು ಕುಡಿದದ್ದು ನನ್ನ ಹೆ೦ಡತಿ!!!
****
ತಿಮ್ಮ:"ಮಹಾತ್ಮಾ ಗಾಂಧಿ ಎಷ್ಟು ಸ್ವಾರ್ಥಿಗಳೂ ಅಂತೀನಿ" ತಮ್ಮ:ಹ್ಯಾಗಪ್ಪಾ? ತಿಮ್ಮ:"ಅವರು ಹೋಗೋವಾಗ ನಮ್ಮ ದೇಶದಲ್ಲಿದ್ದ ಅಹಿಂಸೆ,ತ್ಯಾಗ,ಸತ್ಯದಂತಹ ಎಲ್ಲಾ ಗುಣಗಳನ್ನೂ ತೆಗೆದುಕೊಂಡು ಹೋಗಿಬಿಟ್ಟ್ರಲ್ಲಾ"
****
ಬ್ರೂಸ್ ಲೀ ಸಿನಿಮಾ ಬಂದ ಕಾಲವದು,
ಎಲ್ಲಿ ನೋಡಿದರೂ ಯುವಕರಿಗೆ ಕುಂಗ್ಫೂ ಕರಾಟೆ ಕಲಿಯುವ ಆಸೆ,
ಚಿತ್ರ ನೋಡಿ ಹೊರಗೆ ಬರುತ್ತಿದ್ದಂತೆ ಆ ಗೇಟ್ ಗೇ ಒಂದೇಟ್,ಆ ಕಾಂಪೌಂಡ್ಗೇ ಒಂದೇಟು.
ಅಂಥಾ ಕಾಲದಲ್ಲಿ ಗುಂಡನನ್ನು ಕರಾಟೆ ಕಲೀಬೇಕಮ್ಮಾ ಯಾರದ್ರೂ ಜಗಳಕ್ಕೆ ಬಂದ್ರೆ ?
ಉಪಯೋಗ ಅಲ್ವಾ ಎಂದರು, ಏನೂ ಗೊತ್ತಿಲ್ಲದ ಗುಂಡ ಜಾಣತನದಿಂದ ಹೇಳಿದ
"ಕರಾಟೆ ಬಹಳ ಸುಲಭ ಕಣಮ್ಮಾಮೊದಲು ಹೀಗೆ ಹ್ಹೂ.....ಆಮೇಲೆ ಹೀಗೆ ಹ್ಹ....
ಆಮೇಲೆ ಎಡಗಡೆ ತಿರುಗಿನೋಡು....ಬಲಗಡೆ ತಿರುಗಿ ನೋಡು......ಹಿಂದೆ ನೋಡು......
ಮುಂದೆ ನೋಡು...... ಜಾಗ ಯಾವ್ದು ಖಾಲೀ ಇದೆ ನೋಡು...... ದೌಡ್...."
****
ವಿಪರೀತ ಸಿಗರೇಟು ಸೇದುತ್ತಿದ್ದ ಗುಂಡನಿಗೆ ಡಾಕ್ಟರ್ ಅವನ ಈ ದುಶ್ಚಟ ಬಿಡಿಸಲು”ನೋಡು ಗುಂಡ ಇನ್ಮೇಲೆನೀನು ಊಟ ಆದ್ಮೇಲೆ ಮಾತ್ರ ಸಿಗರೇಟು ಸೇದು”ಅಂದರು.
ಎರಡೇ ದಿನ ಕಳೆದಿದೆ ಗುಂಡ ಓಡೋಡಿ ವಾಪಸ್ ಡಾಕ್ಟರ್ ಬಳಿಗೆ ಬಂದ"ಡಾಕ್ಟರೇ ಸಾಯೋಹಾಗೆ ಆಗ್ತಾ ಇದೆ,ಇನ್ನು ನಾನು ಬದುಕೋದಿಲ್ಲಾ",
"ಏನಾಯ್ತು ಗುಂಡ? ನಾನು ಹೇಳಿದ ಹಾಗೇ ಮಾಡಿದ್ಯಾ?"
"ಹೂ ಡಾಕ್ಟ್ರೇನೀವು ಹೇಳಿದ ಹಾಗೇ ಊಟ ಆದ್ಮೇಲೆ ಮಾತ್ರ ಒಂದು ಸಿಗರೇಟೇ ಸೇದ್ತಾ ಇದ್ದೀನಿ,ಆದರೆ ದಿನಕ್ಕೆ ಹನ್ನೆರಡು ಸಲ ಊಟ ಮಾಡಕ್ಕೆ ಆಗ್ತಾಇಲ್ಲ ಡಾಕ್ಟ್ರೇ,,,,ಕಾಪಾಡಿ"
****
ವಿಪರೀತ ಸಿಗರೇಟು ಸೇದುತ್ತಿದ್ದ ಗುಂಡನಿಗೆ ಡಾಕ್ಟರ್ ಅವನ ಈ ದುಶ್ಚಟ ಬಿಡಿಸಲು”ನೋಡು ಗುಂಡ ಇನ್ಮೇಲೆನೀನು ಊಟ ಆದ್ಮೇಲೆ ಮಾತ್ರ ಸಿಗರೇಟು ಸೇದು”ಅಂದರು.
ಎರಡೇ ದಿನ ಕಳೆದಿದೆ ಗುಂಡ ಓಡೋಡಿ ವಾಪಸ್ ಡಾಕ್ಟರ್ ಬಳಿಗೆ ಬಂದ"ಡಾಕ್ಟರೇ ಸಾಯೋಹಾಗೆ ಆಗ್ತಾ ಇದೆ,ಇನ್ನು ನಾನು ಬದುಕೋದಿಲ್ಲಾ",
"ಏನಾಯ್ತು ಗುಂಡ? ನಾನು ಹೇಳಿದ ಹಾಗೇ ಮಾಡಿದ್ಯಾ?"
"ಹೂ ಡಾಕ್ಟ್ರೇನೀವು ಹೇಳಿದ ಹಾಗೇ ಊಟ ಆದ್ಮೇಲೆ ಮಾತ್ರ ಒಂದು ಸಿಗರೇಟೇ ಸೇದ್ತಾ ಇದ್ದೀನಿ,ಆದರೆ ದಿನಕ್ಕೆ ಹನ್ನೆರಡು ಸಲ ಊಟ ಮಾಡಕ್ಕೆ ಆಗ್ತಾಇಲ್ಲ ಡಾಕ್ಟ್ರೇ,,,,ಕಾಪಾಡಿ"
****
ತಿಮ್ಮಡಾಕ್ಟರ್ ಬಳಿಗೆ ಓಡೋಡಿ ಬಂದ" ಡಾಕ್ಟರೇ ನಾನು ಪತ್ರ ಬರೆಯೋವಾಗ ನನ್ನ ಮಗ .... ನನ್ನ ಮಗ.....ಇಂಕ್ ಬಾಟಲ್ ಇಟ್ಟಿದ್ರೆ ಎತ್ಕೊಂಡ್ ಗಟ ಗಟ ಅಂತ ಕುಡುದ್ಬುಟ್ಟಾ ಡಾಕ್ಟ್ರೇ,,ಏನ್ ಮಾಡ್ಲೀ ಡಾಕ್ಟ್ರೇ ಬೇಗ ಬನ್ನೀ ಡಾಕ್ಟ್ರೇ "ಎಂದು ಗೋಗರೆದ.
ಆ ಡಾಕ್ಟರೋ ಬಹಳ ಬಿಜಿ, "ನೋಡಪ್ಪಾ ತಿಮ್ಮ ಇಲ್ಲಿ ತುಂಬಾ ಜನ ಇದ್ದಾರೇ ನಾನು ಇನ್ನು ಹತ್ತು-ಹದಿನೈದು ನಿಮಿಶದಲ್ಲಿ ಅಲ್ಲಿರ್ತೀನಿ ಅಲ್ಲೀವರೆಗೂ ನೀನು,,,,,,"ತಿಮ್ಮ ತಕ್ಷಣ ಹೇಳಿದ”ಅಲ್ಲೀವರೆಗೂ ಏನ್ ಮಾಡೋದ್ ಡಾಕ್ಟ್ರೇ, ಪೆನ್ಸಿಲ್ ನಲ್ಲೇ ಬರೀತಿರ್ತೀನಿ"
****
ಗುಂಡ ಊರ ಪಟೇಲರ ಮಗನಿಗೆ ಚೆನ್ನಗಿ ಬಾರಿಸಿ ಓಡಿ ಬಂದು ಮನೆ ಸೇರಿಕೊಂಡ. ಸರಿ ಪಟೇಲರು ಗುಂಡನ ಅಪ್ಪನಿಗೆ ದೂರು ಹೇಳಿದರು,ಮಗನನ್ನು ಕರೆದು ವಿಚಾರಿಸಿದರು ಅಪ್ಪ:ಯಾಕೋ ಪಟೇಲರ ಮಗನಿಗೆ ಹಾಗಿ ಬಾರಿಸಿದ್ದೀ? ಗು:ಮತ್ತೆ ಅವ ನನ್ನನ್ನ ಚಿಕ್ಕವನಾಗಿದ್ದಾಗ ಘೇಂಡಾಮೃಗ ಅಂತ ಕರೀತಿದ್ದ? ಅಪ್ಪ: ಏನೋ ಚಿಕ್ಕವನಾಗಿದ್ದಾಗ ಹಾಗೆ ಕರೆದಾಂತ ಈಗ.ಯಾಕೋ ಹೊಡೆದೇ? ಗು: ನಾನು ಮೊನ್ನೆ ತಾನೆ ಮೈಸೂರಿಗೆ ಹೋಗಿದ್ದಾಗ ಘೇಂಡಾಮೃಗ ನೋಡಿದೆ.....
****
ಗುಂಡ ಖಾಯಿಲೆಯಿಂದ ಹೊರಗೆ ಬರಲಾಗದೆ, ಡಾಕ್ಟರ್ ಅವನನ್ನು ಕುರಿತು"ನೋಡಪ್ಪಾ ಗುಂಡಾ ನಿನಗೆ ಜೀವನದಲ್ಲಿ ಕಡೇ ಆಸೆ ಏನಾದ್ರೂ ಇದ್ರೆ ಕೇಳು" ಅಂದರು,
ಅದಕ್ಕೆ ಗುಂಡ "ಹೂ ಡಾಕ್ಟ್ರೇ ನನ್ನ ಕಡೇ ಆಸೆ ಎನಪ್ಪಾ ಅತಂತಂದ್ರೆ ಒಬ್ಬ ಒಳ್ಳೆ ಡಾಕ್ಟರನ್ನ ಕಾಣಬೇಕು ಅಂತ" ಅನ್ನಬೇಕೇ
****
ಯುಗಾದಿಗೆ ನಾಕು ದಿನ ಮುಂಚೆ ಗುಂಡ ಪೆಚ್ಚಾಗಿ ಕುಳಿತಿದ್ದ.ಗೆಳೆಯ ಕಾರಣ ಕೇಳಲು "ಯುಗಾದಿಗೆ ನನ್ನ ಚಿಕ್ಕಪ್ಪನಿಕೆ ಸೈಕಲ್ಲು ಕೊಡ್ಲೋ ಅಥವಾ ಹಸು ಕೊಡ್ಲೋ ಅಂತ ಯೋಚಿಸುತ್ತಿದ್ದೇನೆ" ಅಂದ. ಅದಕ್ಕೆ ಗೆಳೆಯ ಕುಚೋದ್ಯ ಮಾಡಲೆಂದು ಹಸು ಮೇಲೆ ಸವಾರಿ ಮಾಡಿದ್ರೆ ಕೆಟ್ಟದಾಗಿರಲ್ವಾ ಅಂದ.ಅದಕ್ಕೆ ಗುಂಡ "ಸೈಕಲ್ಲಿಂದ ಹಾಲು ಕರೆಯಲು ಹೋದ್ರೆ ಇನ್ನೂ ಭಯಂಕರ ಅಲ್ವಾ"ಅಂದ.
****
ಗುಂಡ ಹೊಸದಾಗಿ ಒಂದು ಹಳೆ ಕಾರ್ ಕೊಂಡ,ಸ್ನೇಹಿತರನ್ನೆಲ್ಲಾ ಒಂದು ರೌಂಡ್ ಕೂಡಿಸಿಕೊಂಡು ಹೋದ,"ತುಂಬಾ ಚೆನ್ನ್ನಾಗಿದೆ,ಇಂಥಾ ಕಾರ್ ಎಲ್ಲೂ ನೋಡಿಲ್ಲ" ಗೆಳೆಯನೊಬ್ಬ ಹೊಗಳಿದ, ಮತ್ತೊಬ್ಬ ಹೇಳಿದ"ಹೌದು ಹಾರ್ನ್ ಒಂದು ಬಿಟ್ಟು ಮಿಕ್ಕೆಲ್ಲಾ ಭಾಗಗಳೂ ಶಬ್ದಮಾಡೋ ಕಾರ್ ಇದೇ ಮೊದಲು ನೋಡ್ತಿರೋದು"
****
ತೀರ್ಥಯಾತ್ರೆಗೆ ಹೊರಟ ತಂದೆ ಮಗನನ್ನು ಕರೆದು"ನೋಡು ತಿಮ್ಮಾ ನಾನು ಉತ್ತರಕ್ಕೆ ಹೊರಟಿದ್ದೇನೆ ವಾಪಸ್ ಬರೋದು ಖಚಿತ ಇಲ್ಲ, ಅಕಸ್ಮಾತ್ ಅನಾಹುತವಾಗಿ ಒಂದು ವರ್ಷವಾದ್ರೂ ಬರದೇ ಹೋದರೆ ಈ ಡಬ್ಬ ತೆಗೆದು ಇದರಲ್ಲಿನ ಹಣ ನೀನೇ ತಗೋ,"ಅಂದು ಕೀಲಿ ಕೈಗಿಟ್ಟು,ರೈಲಿಗೆ ಹೊರಟ, ರೈಲು ಹೊರಟಿದೆ, ಮಗ ಓಡೋಡಿ ಬಂದ "ಅಪ್ಪ ಇದು ಬೇರೆ ಯಾವುದೋ ಬೀಗದ ಕೈ" ಅಂದ
****
ಸೋಮಾರಿ ಸೋಮಣ್ಣ ಮಗೂನ ಎತ್ಕೊಂಡು ವಾಕಿಂಗ್ ಹೊರಟ. ದಾರಿಯಲ್ಲಿ ಗುಂಡ "ಏನ್ ಸೋಮಣ್ಣೋರೆ ಮಗು ನಿಮ್ದೇನೋ ನಿಮ್ಹಾಗೇ ಇದೆ ,ಮುದ್ದಾಗೆದೆ" ಅಂದ, ಸುಮ್ಮನಿರದೆ ಸೋಮಣ್ಣ" ಹೂ! ಇದರ ಬುದ್ಧಿನೂ ಬಹಳ ಚುರುಕು" ಅಂದ." ಓಹೋ ಹಾಗಿದ್ರೆ ಅವರಮ್ಮನ್ನ ಹೋತಿದೆ ಅನ್ಸತ್ತೆ" ಅಂದ.
****
ಗುಂಡ ಗಿಣಿ ಸಾಕುವ ಆಸೆಯಿಂದ ಹಕ್ಕಿ ಮಾರುವ ಅಂಗಡಿಗೆ ಹೋದ,"ಆ ಗಿಣಿಗೆ ಎಷ್ಟು?" ಅಂಗಡಿಯವ "ಒಂದುಲಕ್ಷ", "ಹಾ! ಯಾಕೆ ಅದೇನ್ ಮಾಡತ್ತೆ?" "ಅದು ಐಟಿ ಸಾಫ್ಟ್ ವೇರ್ ಇಂಜಿನಿಯರ್ರು","ಅದರಪಕ್ಕದ್ದು?" "ಎರಡು ಲಕ್ಷ". "ಹಾ! ಯಾಕೆ ಅದೇನ್ ಮಾಡತ್ತೆ?" "ಅದು ನ್ಯೂಕ್ಲಿಯರ್ ವಿಜ್ಞಾನಿ", "ಅದರಪಕ್ಕದ್ದು?" "ಒಂದು ಕೋಟಿ", ಗುಂಡ ಬೆಚ್ಚಿಬಿದ್ದು "ಹಾ! ಯಾಕೆ ಅದೇನ್ ಮಾಡತ್ತೆ?" "ಅದೇನೂ ಮಾಡಲ್ಲ ಸುಮ್ಮನೆ ಕೂತಿರತ್ತೆ". "ಮತ್ತೆ ಅದಕ್ಯಾಕೆ ಕೋಟಿ ರೂ?" "ಏನಿಲ್ಲಾ ಅವೆರಡಕ್ಕೆ ಡೌಟ್ ಬಂದ್ರೆ ಇದನ್ನ ಕೇಳತ್ತೆ."
****
ಐವತ್ತಕ್ಕೇ ನಿವೃತ್ತನಾಗಿ ಮನೆಗೆ ಬಂದ ಗುಂಡನನ್ನು ಒಬ್ಬ ಕೇಳಿದ"ಇಷ್ಟು ಬೇಗ ರಿಟೈರ್ ಆಗಲು ಕಾರಣ ಏನು,ಕೆಲಸ ಬೇಜಾರಾಯ್ತ"ಎಂದು. ಗುಂ:ಹಾಗೇನಿಲ್ಲ ಮಾನಸಿಕರೋಗ,ಆರೋಗ್ಯದಲ್ಲಿ ತೊಂದರೆ,,,, "ಅಂಥದ್ದೇನಾಗಿದೆ ನಿಮಗೆ" ಗುಂ: "ಅರೇ ನನಗಲ್ಲ, ನನ್ನ ನೋಡಿದ್ರೆ ನನ್ನ ಯಜಮಾನರಿಗೇ..."
****
ಪಾರ್ಕ್ ಬಳಿ ಕಾರ್ ನಿಲ್ಲಿಸಿ ಗುಂಡ ಜೇಬಿನಿಂದ ಸಿಗರೇಟ್ ಪ್ಯಾಕ್ ತೆಗೆದು ಉಳಿದಿದ್ದ ಒಂದೇ ಸಿಗರೇಟನ್ನು ಬಾಯಲ್ಲಿಟ್ಟು, ಖಾಲೀ ಪ್ಯಾಕನ್ನು ಅಲ್ಲೇ ಎಸೆದ, ಒಬ್ಬಾಕೆ ಅದನ್ನು ಕಂಡು ”ಯಾಕೆ ಸಾರ್ ನಿಮಗಿದು ಬೇಡವಾ" ಎಂದಳು ಗುಂಡ ಸ್ಟೈಲಾಗಿ "ಉ ಹೂ ಬೇಡ"ಎಂದ ”ಹಾಗಿದ್ರೆ ನಮಗೂ ಬೇಡ" ಎಂದು ಗುಂಡನ ಕಾರಿನೊಳಕ್ಕೇ ಎಸೆದಳು ಆ ಮುನ್ಸಿಪಾಲಿಟಿ ಕೆಲಸದವಳು
****
ಬಹಳ ದಿನದ ನಂತರ ಬಾಲ್ಯ ಸ್ನೇಹಿತ ಗುಂಡನನ್ನು ಭೇಟಿಯಾದ,ಬಾರೋ ಗುಂಡು ಹಾಕೋಣ ಎಂದ” ಗು: ”ಇಲ್ಲಪ್ಪ ನಾನುಕುಡಿಯೋದು ಬಿಟ್ಟು ಯಾವುದೋಕಾಲವಾಯ್ತು”..."ಅರೆ ಸ್ವಲ್ಪ ಕಣೋ”... ಗು: ”ನೋಡೋ ನಾನು ಕುಡಿಯದೇ ಇರಕ್ಕೆ ೩ ಕಾರಣ” ೧.ನಾನು ಬಾಟಲ್ ಮುಟ್ಟಲ್ಲ ಅಂತ ದೇವರ ಮುಂದೆ ಆಣೆ ಮಾಡಿದ್ದೀನಿ ೨. ಯಾವುದೇ ಕೆಲಸಕ್ಕೆ ಹೋಗುವ ಮುನ್ನ ಕುಡಿಯೋದಿಲ್ಲ ಅಂತ ಪ್ರತಿಜ್ಞೆ ಮಾಡಿದ್ದೀನಿ ಇನ್ನು ಮುಖ್ಯವಾಗಿ ಕಡೆದು.....ಏನಪ್ಪಾಂದ್ರೆ.......(ತೇಗುತ್ತಾ) ೩. ನಾನು ಈಗತಾನೇ ಕಂಠಪೂರ್ತಿ ಕುಡಿದು ಬರ್ತಿದ್ದೀನಿ