ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಕಗ್ಗ ( ಕ )

ಕತ್ತಲೆಯೊಳೇನನೊ ಕಂಡು ಬೆದರಿದ ನಾಯಿ ।

ಎತ್ತಲೋ ಸಖನೋರ್ವನಿಹನೆಂದು ನಂಬಿ ।।

ಕತ್ತೆತ್ತಿ ಮೋಳಿಡುತ ಬೊಗಳಿ ಹಾರಾಡುವುದು ।

ಭಕ್ತಿಯಂತೆಯೆ ನಮದು ಮಂಕುತಿಮ್ಮ ।।

 

ಕಣ್ಗೆರಡದೇಕೆರಡುಮೊಂದೆ ಪಕ್ಕದೊಳೇಕೆ ।

ಬೆನ್ನೊಳೊಂದೆದೆಯೊಳೊಂದಿರಲು ಸುಕರವಲ ।।

ಅನ್ಯಾಯ ವಿಕಟಂಗಳೆನಿತೊ ಸೃಷ್ಟಿಕ್ರಮದಿ ।

ಸೊನ್ನೆ ಜನವಾಕ್ಕಲ್ಲಿ ಮಂಕುತಿಮ್ಮ ।।

 

ಕ್ಷಮೆ ದೋಷಿಗಳಲಿ ಕೆಚ್ಚೆದೆ ವಿಧಿಯ ಬಿರುಬಿನಲಿ ।

ಸಮತೆ ನಿರ್ಮತ್ಸರತೆ ಸೋಲ್ಗೆಲುವುಗಳಲಿ ।।

ಶಮವ ನೀಂ ಗಳಿಸಲೀ ನಾಲ್ಕು ತಪಗಳೆ ಸಾಕು ।

ಭ್ರಮೆಯೊ ಮಿಕ್ಕೆಲ್ಲ ತಪ ಮಂಕುತಿಮ್ಮ ।।

 

ಕ್ಷನವೊಂದೆ ಅನಂತಕಾಲ ತನಗುವುದು

ಅನುಭಾವಕೆ ಸತ್ತ್ವ ಶಿವ ಸುಂದರಗಳಮರೆ |

ಮನ ತುಮ್ಬುಶಶಿಯಾಗಿ , ನೆನಪಮ್ರುತವಗುವುದು

ಕ್ಷನದೊಳಕ್ಶಯ ಕಣೋ – ಮಂಕುತಿಮ್ಮ ||

 

ಕ್ಲೇಶ ನೂರಾಗಿರೆಯುಮಾಶೆಗಳ ಪುನರುದಯ ।

ಬೇಸರದ ನುಡಿಯೊಳಂ ಲೇಸುಗಳ ನೆನಪು ।।

ಆಶೆ ಸಾಯ್ತೆಂದೊಡಂ ಚೆಲುವೆನಲು ಕಣ್ಣಲೆತ ।

ಮಾಸವೀ ಜೀವಗುಣ ಮಂಕುತಿಮ್ಮ ।।

 

ಕಾಗೆಯುಂ ಕೋಗಿಲೆಯುವೊಂದೆ ಮೇಲ್ನೋಟಕ್ಕೆ ।

ಯೋಗಿಯುಂ ಸಂಸಾರಭೋಗಿಯೇ ಹೊರಕೆ ।।

ಲೋಗರವೊಲಿರುತೆ ಸುಖದುಃಖಸಂಭ್ರಮಗಳಲಿ ।

ತ್ಯಾಗಿಯವನಂತರದಿ ಮಂಕುತಿಮ್ಮ ।।

 

ಕಾರಿರುರೊಳಾಗಸದಿ ತಾರೆ ನೂರಿದ್ದೇನು ।

ದಾರಿಗನ ಕಣ್ಗೆ ಬೇಕೊಂದು ಮನೆಬೆಳಕು ।।

ದೂರದಾ ದೈವವಂತಿರಲಿ ಮಾನುಷಸಖನ ।

ಕೋರುವುದು ಬಡಜೀವ ಮಂಕುತಿಮ್ಮ ।।


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2022