ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಕಗ್ಗ ( ಮ )

ಮನೆಯ ತೊರೆದೋಡಲೇಂ ವನಗುಹೆಯ ಸಾರಲೇಂ ।

ತನುವನುಗ್ರವ್ರತಗಳಿಂದ ದಂಡಿಸಲೇಂ ।।

ಬಿನದಗಳನರಸಿ ನೀನೂರೂರೊಳಲೆದೊಡೇಂ ।

ಮನವ ತೊರೆದಿರಲಹುದೆ ಮಂಕುತಿಮ್ಮ ।।

 

ಮಕ್ಕಳ ಭವಿಷ್ಯಕ್ಕೆ ಕಕ್ಕುಲಿತಗೊಳಬೇಡ ।

ಪಕ್ಕಾಗುವುದು ಭಾಗ್ಯವೆಂತೆಂತೊ ಜಗದಿ ।।

ದಕ್ಕಿತೇಂ ಕುರುಪಾಂಡುತನಯರ್ಗೆ ರಾಜ್ಯಸುಖ ।

ದಿಕ್ಕವರಿಗವರವರೆ ಮಂಕುತಿಮ್ಮ ।।

 

ಮಾರನಂ ದಂಡಿಸಿರೆ ಗೌರಿಯಿಂ ಭಯವೇನು ।

ಚಾರು ಸಹಕಾರಿಯವಳೆಂದು ಶಿವನೊಲಿದನ್ ।।

ಮೀರೆ ಮೋಹವನು ಸಂಸಾರದಿಂ ಭಯವೇನು ।

ದಾರಿ ಕೆಳೆಯದು ನಿನಗೆ ಮಂಕುತಿಮ್ಮ ।।

 

ಮಿಡಿಚೇಪೆಕಾಯಿಗಳ ತಡಬಡದೆ ನುಂಗುವುದು ।

ಕಡಿಯೆ ಹೊಟ್ಟೆಯಲಿ ಹರಳೆಣ್ಣೆ ಕುಡಿಯುವುದು ।।

ಬಿಡುತಿರಲು ನೋವಾಗ ಸುಖವೀಗಳೆನ್ನುವುದು ।

ಪೊಡವಿಗಿದೆ ಭೋಗವಿಧಿ ಮಂಕುತಿಮ್ಮ ।।

 

ಮೃತನ ಸಂಸಾರಕಥೆ ಶವವಾಹಕರಿಗೇಕೆ ।

ಸತಿಯು ಗೋಳಿಡಲಿ ಸಾಲಿಗನು ಬೊಬ್ಬಿಡಲಿ ।।

ಜಿತಮನದಿ ಚಿತಿಗಟ್ಟಿ ಕೊಂಡೊಯ್ಯುತಿಹರವರು ।

ಧೃತಿಯ ತಳೆ ನೀನಂತು ಮಂಕುತಿಮ್ಮ ।।

 

ಮೌನದೊಳೊ ಮಾತಿನೊಳೊ ಹಾಸ್ಯದೊಳೊ ಹಾಡಿನೊಳೊ ।

ಮಾನವಂ ಪ್ರಣಯದೊಳೊ ವೀರ ವಿಜಯದೊಳೊ ।।

ಏನೋ ಎಂತೋ ಸಮಾಧಾನಗಳನರಸುತಿಹ ।

ನಾನಂದವಾತ್ಮಗುಣ ಮಂಕುತಿಮ್ಮ ।।

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2022