ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಸರ್ವಜ್ಞ (ಅ)

"ಅರಸನೊಡ್ಡೋಲಗದಿ | ಸರಿಸವನು ಅಗಲದಿರು |

ಸರಸ ನಿಂದೆಯಲಿ ಇರದಿರು, ಆರಿಗೂ |

ಬಿರಿಸು ಬೇಡೆಂದ ಸರ್ವಜ್ಞ || "

 

"ಅರಿಯದೀಯದ ದಾನ | ತೆರದು ನೋಡದ ಕಣ್ಣು |

ತಿರುಗಿ ಬಯಸದನ ಶಿವಪೂಜೆ ಶಿವನಿಂದ |

ಹಿರಿದೆಂದು ಅರಿಗು ಸರ್ವಜ್ಞ |"

 

"ಅಲ್ಲಿಪ್ಪನಿಲ್ಲಿಪ್ಪ | ನೆಲ್ಲಿಪ್ಪನೆನಬೇಡ |

ಕಲ್ಲಿನಂತಿಪ್ಪ ಮಾನವನ ಮನ ಕರಗೆ |

ಅಲ್ಲಿಪ್ಪ ನೋಡ! ಸರ್ವಜ್ಞ |"

 

ಅರಸನ ಸಭೆಯೊಳಗೆ | ಕುರಿತು ಆಡಲು ಬೇಡ |

ಸರಸನಿಂದೆಯಲಿ ಇರಬೇಡ, ಒರ್ವದಲಿ |

ಭರವಸವು ಬೇಡ ಸರ್ವಜ್ಞ ||"

 

ಅರಿಕೆ ಹೀನರ ಕೂಡಿ | ಮೆರೆದಾಡುವುದರಿಂದ  |

ಅರಿಕೆಯುಳ್ಳವರ  ಒಡನಾಡಿ  ಆವಗಂ |

ಸೊರಗಿಹುದೆ ಲೇಸು ಸರ್ವಜ್ಞ | 

 

ಅರಿಯದೆಸಗಿದ ಪಾಪ | ಅರಿತರದು ತನಗೊಳಿತು |

ಅರಿತರಿತು ಮಾಡಿ ಮರೆತರದು ನಯನವನು |

ಇರಿದು ಕೊಂಡಂತೆ ಸರ್ವಜ್ಞ |

 

"ಅರಿವಿನ ಅರಿವು ತಾ | ಧರೆಯೊಳಗೆ ಮೆರದಿಹುದು |

ಅರಿವಿನ ಅರಿವ ಹರಿ ಹರ ಬೊಮ್ಮರು |

ಅರಿಯರೈ ಕಾಣ ಸರ್ವಜ್ಞ |"

 

"ಅಷ್ಟ ವಿಧದರ್ಚನೆಯ | ನೆಷ್ಟು ಮಾಡಿದಡೇನು |

ನಿಷ್ಠೆನೆಲೆಗೊಳದೆ ಭಜಿಸುವ ಪೂಜೆಯದು | 

ನಷ್ಟ ಕಾಣಯ್ಯ ಸರ್ವಜ್ಞ |"

 

"ಅನ್ನವನು ಇಕ್ಕುವ | ಅನ್ಯ ಜಾತನೆ ಕುಲಜ |

ಅನ್ನವನು ಇಕ್ಕುದುಣುತಿಪ್ಪ ಕುಲಜಾತ |

ಅನ್ಯನೆಂದರಿಗು ಸರ್ವಜ್ಞ |"

 

ಅರಿಯದವರೊಡನಾಡಿ | ಸರಿಯಾಳುವದಕಿಂದ |

ಅರಿಕೆಯುಳ್ಳವರ ಒಡನಾಡಿ ಆಗಲು |

ಸೆರೆಯಿಹುದೆ ಲೇಸು ಸರ್ವಜ್ಞ | 

 

ಅರಿತು ಮಾಡಿದ ಪಾಪ | ಮರೆತರದು ಪೋಪುದೇ ?|

ಮರೆತರೆ ಮರೆವ ಬಿಡಿಸುವದು, ಕೊರೆತೆಯದು |

ಅರಿತು ನೋಡೆಂದ ಸರ್ವಜ್ಞ |  

 

ಅಸಗನತಿ ಗರ್ವಿಸಲು | ಹಸು ಕಾಡಿ ಕರೆಯಲು |

ಉಸುರಿಲ್ಲದರಸು ಪ್ರಭುವಾಗೆ, ಪ್ರಜೆಯಲ್ಲ |

ಮಸಿವಣ್ಣವಕ್ಕು ! ಸರ್ವಜ್ಞ |

 

ಆಡಿ ನಳ ಕೆಟ್ಟ , | ಮತ್ತಾಡಿ ಧರ್ಮಜ ಕೆಟ್ಟ |

ನೋಡಿದ ನಾಲ್ವರು ತಿರಿದುಣಲು ನೆತ್ತವನು |

ಆಡಬೇಡೆಂದ ಸರ್ವಜ್ಞ | 

 

"ಅಂಜದಲೆ ಕೊಂಡಿಹರೆ | ನಂಜು ಅಮೃತವಕ್ಕು |

ಅಂಜಿ ಅಳುಕುತಲಿ ಕೊಂಡಿಹರೆ ಅಮೃತವು |

ನಂಜಿನಂತಕ್ಕು ! ಸರ್ವಜ್ಞ |"

 

"ಅನ್ನವನು ಇಕ್ಕುವ | ಅನ್ಯ ಜಾತನೆ ಕುಲಜ |

ಅನ್ನವನು ಇಕ್ಕುದುಣುತಿಪ್ಪ ಕುಲಜಾತ |

ಅನ್ಯನೆಂದರಿಗು ಸರ್ವಜ್ಞ |"

 

"ಅರಿತು ಮಾಡುವ ದಾನ | ತೆರದು ನೋಡುವ ಕಣ್ಣು |

ತಿರುಗಿ ಬಯಸುವನ ಶಿವಪೂಜೆ ಮದದಾನೆ |

ಜರಿದು ಬಿದ್ದಂತೆ ಸರ್ವಜ್ಞ |"

 

"ಅನ್ನವನು ಇಕ್ಕುವುದು | ನನ್ನಿಯನು ನುಡಿಯುವುದು |

ತನ್ನಂತೆ ಪರರ ಬಗೆದಡೆ ಕೈಲಾಸ |

ಬಿನ್ನಾಣವಕ್ಕು ಸರ್ವಜ್ಞ ||"

 

"ಅನ್ನದೇವರ ಮುಂದೆ | ಇನ್ನು ದೇವರು ಉಂಟೆ |

ಅನ್ನವುಂಟಾದರುಣಲುಂಟು ಜಗಕೆಲ್ಲ |

ಅನ್ನವೇ ಪ್ರಾಣ ಸರ್ವಜ್ಞ || "

 

"ಅನ್ನದಾನಗಳಿಂದ | ಮುನ್ನ ದಾನಗಳಿಲ್ಲ |

ಅನ್ನಕ್ಕೆ ಮಿಗಿಲು ಇನ್ನಿಲ್ಲ, ಜಗದೊಳಗೆ |

ಅನ್ನವೇ ಪ್ರಾಣ ! ಸರ್ವಜ್ಞ |"

 

ಅಪಮಾನದೂಟದಿಂ | ದುಪವಾಸವಿರ ಲೇಸು |

ನೃಪನಯ್ದೆ ಬಡಿವ ಒಡ್ಡೋಲಗದಿಂದವೆ |

ತಪವು ಲೇಸೆಂದ ಸರ್ವಜ್ಞ |

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2022