ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಸರ್ವಜ್ಞ (ಉ, ಊ)

ಉಣ್ಣೆ ಕೆಚ್ಚಲೊಳಿರ್ದು | ಉಣ್ಣದದು ನೊರೆವಾಲ |

ಪುಣ್ಯವ ಮಾಡಿ ಉಣಲೊಲ್ಲ

ದವನಿರವು | ಉಣ್ಣೆಗು ಕಷ್ಟ ಸರ್ವಜ್ಞ |

 

ಉತ್ತಮದ ವರ್ಣಿಗಳೆ | ಉತ್ತಮರು ಎನಬೇಡ |

ಮತ್ತೆ ತನ್ನಂತೆ ಬಗೆವರನೆಲ್ಲವರನು |

ಉತ್ತಮರು ಎನ್ನು ! ಸರ್ವಜ್ಞ | 

 

"ಉಳ್ಳಲ್ಲಿ ಉಣಲಿಲ್ಲ | ಉಳ್ಳಲ್ಲಿ ಉಡಲಿಲ್ಲ |

ಉಳ್ಳಲ್ಲಿ ದಾನ ಕೊಡಲೊಲ್ಲದವ ನೊಡವೆ |

ಕಳ್ಳಗೆ ನೃಪಗೆ ಸರ್ವಜ್ಞ |"

 

"ಉಣ್ಣದೊಡವೆಯ ಗಳಿಸಿ | ಮಣ್ಣಿನೊಳು ತಾನಿರಿಸಿ |

ಸಣ್ಣಿಸಿ ನೆಲನ ಸಾರಿದನ ಬಾಯೊಳಗೆ |

ಮಣ್ಣು ಕಾಣಯ್ಯ ! ಸರ್ವಜ್ಞ |"

 

ಉತ್ತರೆಯು ಬರೆತಿಹರೆ | ಹೆತ್ತ ತಾಯ್ತೊರೆದಿಹರೆ |

ಉತ್ತಮರು ತಪ್ಪಿ ನಡೆದಿಹರೆ ಲೋಕ ತಾ |

ನೆತ್ತ ಸಾರುವುದು ಸರ್ವಜ್ಞ | 

 

"ಉಣಬಂದ ಜಂಗಮಕೆ | ಉಣಬಡಿಸ ಲೊಲ್ಲದಲೆ |

ಉಣದಿಪ್ಪ ಲಿಂಗಕುಣಬಡಿಸಿ ಕೈಮುಗಿವ |

ಬಣಗುಗಳ ನೋಡ ಸರ್ವಜ್ಞ |"

 

"ಉರುಗನ ಹಲ್ಲು ನಂಜು | ಸುರಿಗೆಯ ಮೊನೆ ನಂಜು |

ಕರುಣವಿಲ್ಲದವನ ನುಡಿ ನಂಜು, ದುರ್ಜನರ |

ಇರವೆಲ್ಲ ನಂಜು ಸರ್ವಜ್ಞ |"

 

ಊರಿಂಗೆ ದಾರಿಯನು | ಆರು ತೋರಿದಡೇನು |

ಸಾರಯದ ನಿಜವ ತೋರುವ ಗುರುವು ತಾ |

ನಾರಾದಡೇನು ಸರ್ವಜ್ಞ ||

 

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2022