ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಸರ್ವಜ್ಞ (ಎ)

"ಎರೆಯಲ್ಲೊಲ್ಲದ ಲೋಭಿ |ಕರೆಯಲೊಲ್ಲದ  ಆವು |

ಬರೆಗಾಲ ಪಯಣ,  ಇವು ಮೂರು, ತನ್ನ ತಾ |

ನಿರಿದು ಕೊಂಡಂತೆ ಸರ್ವಜ್ಞ |"

 

"ಎಲ್ಲ ಬಲ್ಲವರಿಲ್ಲ | ಬಲ್ಲವರು ಬಹಳಿಲ್ಲ |

ಬಲ್ಲಿದರು ಇದ್ದು ಬಲವಿಲ್ಲ, ಸಾಹಿತ್ಯ |

ವೆಲ್ಲವರಿಗಿಲ್ಲ ಸರ್ವಜ್ಞ ||"

 

"ಎತ್ತಗಿ ತೊತ್ತಾಗಿ | ಹಿತ್ತಲದ ಗಿಡನಾಗಿ |

ಮತ್ತೆ ಪಾದದ ಕೆರನಾಗಿ ಗುರುವಿನ |

ಹತ್ತಲಿರು ಎಂದ ಸರ್ವಜ್ಞ ||"

 

ಎಂತರಸು ಒಲಿದರೂ | ಮಂತ್ರಿಯ ಹಗೆ ಹೊಲ್ಲ ! |

ಎಂತಕ್ಕುಮರಸು ಮುನಿದಿಹರೆ ? ಆ ಮಂತ್ರಿ |

ಆಂತಕ್ಕ ನಕ್ಕು ! ಸರ್ವಜ್ಞ | 

 

ಎಲ್ಲ ಆಶೆಯ ಬಿಟ್ಟ | ರಿಲ್ಲಿಯೇ ಕೈಲಾಸ |

ಎಲ್ಲವನು ಬಯಸಿ ಭ್ರಮಿಸಿದಡೆ ನರಕ ತಾ |

ನಿಲ್ಲಿಯೇ ನೋಡ ! ಸರ್ವಜ್ಞ |

 

"ಎದ್ದು ಮಾತಾಡಿದಿರು | ಎದ್ದೆದ್ದು ನಿಲ್ಲದಿರು |

ಇದ್ದ ಮಾನಿಸರ ಜರಿಯದಿರು , ಓಲಗದೊ |

ಳಿದ್ದಾಗ ನೀನು ! ಸರ್ವಜ್ಞ |"

 

ಎಲುವಿಲ್ಲ ನಾಲಿಗೆಗೆ | ಬಲವಿಲ್ಲ ಬಡವಂಗೆ |

ತೊಡೆಕಂಬವಿಲ್ಲ ಗಗನಕ್ಕೆ, ದೇವರಲಿ |

ಕುಲಭೇದವಿಲ್ಲ ಸರ್ವಜ್ಞ | 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2022