ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಸರ್ವಜ್ಞ (ಒ, ಓ)

ಒಂದರ ಮೊದಲೊಳಗೆ | ಬಂದಿಹುದು ಜಗವೆಲ್ಲ |

ಒಂದರ ಮೊದಲನರಿದರೆ ಜಗ ಕಣ್ಣ |

ಮುಂದೆ ಬಂದಿಹುದು ಸರ್ವಜ್ಞ |

 

"ಒಮ್ಮೆಯುಂಡವ ತ್ಯಾಗಿ ಇಮ್ಮೆಯುಂಡವ ಭೋಗಿ |

ಬಿಮ್ಮಗುಂಡರವ ರೋಗಿ, ಯೋಗಿ ತಾ |

ಸುಮ್ಮನಿರುತಿಹನು ಸರ್ವಜ್ಞ ||"

 

"ಒಳಗಣ ಜ್ಯೋತಿಯ | ಬೆಳಗ ಅರಿದಾತಂಗೆ |

ಬೆಳಗಾದುದೇಳು ಬೇಹಾರಕೆಂದೆಂಬಾ |

ಕಳವಳವದೇಕೆ ? ಸರ್ವಜ್ಞ |"

 

"ಒಡಲಿಡಲು ಗಳಿಸಿದ | ಒಡವೆಗಳು  à²’ಡನಿರಲು |

ಕೊಡದುಣ್ಣದಿಟ್ಟು ಮಡಿದರೆ  à²’ಡವೆಯ |

ನೊಡನೆ ಹೂಳುವರೆ ಸರ್ವಜ್ಞ |"

 

"ಒಬ್ಬನರಿದರೆ ಸ್ವಾಂತ | ಇಬ್ಬರರಿದರೆ ಏಕಾಂತ |

ಇಬ್ಬರಿಂದನೊಬ್ಬನರಿದು ಬೇರೊಬ್ಬನಿಂ |

ಹಬ್ಬಿ ಲೋಕಾಂತ ಸರ್ವಜ್ಞ |"

 

"ಒಬ್ಬನಲ್ಲದೆ ಜಗಕೆ | ಇಬ್ಬರುಂಟೇ ? ಮತ್ತೆ |

ಒಬ್ಬ ಸರ್ವಜ್ಞ ಕರ್ತ ನೀ ಜಗಕೆಲ್ಲ |

ಒಬ್ಬನೆ ದೈವ ಸರ್ವಜ್ಞ |"

 

ಒಲ್ಲದ ಹೆಣ್ಣಿಂದ | ಗೆಲ್ಲದ ಜೂಜಿಂದ |

ಸಲ್ಲದೋಲಗದ  à²¬à²¦à³à²•ಿಂದ ಅರಿಯಿರಿದು |

ಕೊಲ್ಲ ಲೇಸೆಂದ ಸರ್ವಜ್ಞ |

 

"ಓದಿದ ಓದು ತಾ | ಮೇದ ಕಬ್ಬಿನ ಸಿಪ್ಪೆ |

ಓದಿನ ಒಡಲನರಿದಿಹರೆ ಸಿಪ್ಪೆ ಕ |

ಬ್ಬಾದಂತೆ ಕಾಣೊ ! ಸರ್ವಜ್ಞ |"

 

ಓಕಾರ ಮುಖವಲ್ಲ | ಆಕಾರವದಕಿಲ್ಲ |

ಆಕಾಶದಂತೆ ಅಡಗಿಹುದು ಪರಬೊಮ್ಮ |

ತಾ ಕಾಣದಯ್ಯ ಸರ್ವಜ್ಞ |

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2025