ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಸರ್ವಜ್ಞ (ಕ)

ಕಲ್ಲಮೇಲಿನ ನೀರು | ಮೆಲ್ಲನೆಯೆ ಸರಿದಂತೆ |

ಸೊಲ್ಲನಾರೈದು ನುಡಿವನ ಜಾಣ್ಮೆಯು |

ಎಲ್ಲಕ್ಕು ಮಿಗಿಲು ಸರ್ವಜ್ಞ | 

 

ಕಲ್ಲುಕಲ್ಲನೆ ಒಟ್ಟಿ | ಕಲ್ಲಿನಲಿ ಮನೆ ಕಟ್ಟಿ |

ಕಲ್ಲ ಮೇಲ್ಕಲ್ಲ ಕೊಳುವ ಮಾನವರೆಲ್ಲ |

ಕಲ್ಲಿನಂತಹವರು ಸರ್ವಜ್ಞ |

 

"ಕಲ್ಲು ಕಲ್ಲೆಂಬುವಿರಿ | ಕಲ್ಲೊಳಿಪ್ಪುದೆ ದೈವ ? |

ಕಲ್ಲಲ್ಲಿ ಕಳೆಯನಿಲಿಸಿದ ಗುರುವಿನ |

ಸೊಲ್ಲಲ್ಲೆ ದೈವ ಸರ್ವಜ್ಞ |"

 

ಕಲ್ಲುಪ್ಪು ಕರ್ಪೂರವು | ಸೊಲ್ಲೆರಡು ದಾತೊಂದು |

ಖುಲ್ಲನೊಳ್ಳಿದನ ರೂಪೊಂದು ಗುಣದೊಳಗೆ |

ಎಲ್ಲ ಅಂತರವು ಸರ್ವಜ್ಞ | 

 

ಕಪ್ಪೆಗಳು ಮೀನುಗಳು | ಇಪ್ಪುದದು  à²¤à³€à²°à³à²¥à²µà³‡ ? |

ತುಪ್ಪ ಓಗರಕೆ ಸಲುವದು, ಸತ್ಪುರುಷ |

ರಿಪ್ಪುದೇ ತೀರ್ಥ  ? ಸರ್ವಜ್ಞ | 

 

"ಕತ್ತಿ ಖಂಡುಗ ಭಾರ | ಹೊತ್ತು ತಿರುಗಿದರೇನು ? |

ಹೊತ್ತು ಬಂದಾಗ ಹಿರಿಯದ ಕತ್ತಿಯನು |

ಎತ್ತಿ ಮಾರೆಂದ ಸರ್ವಜ್ಞ |"

 

"ಕತ್ತಿಯನು ಪಿಡಿಯುವಡೆ | ಶಕ್ತಿ ತುಂಬಿರಬೇಕು |

ಶತ್ರು ತಾ ಸುತ್ತಮುತ್ತ ಬರೆ ಕತ್ತಿಯಿಂ | 

ನೆತ್ತಿ ಹೋಯ್ಯೆಂದ ಸರ್ವಜ್ಞ |"

 

"ಕಂಡವರ ದಂಡಿಸುತ | ಕೊಂಡವರ ಒಡವೆಗಳ |

ನುಂಡುಂಡಿ ಮಲಗಿ ಮಡಿದ  à²®à³‡à²²à²µà²—ೆ ಯಮ |

ದಂಡ ತಪ್ಪುವದೆ ಸರ್ವಜ್ಞ |"

 

"ಕುಡಿವ ನೀರನು ತಂದು | ಅಡಿಗೆ ಮಾಡಿದ ಮೇಲೆ |

ಒಡನುಣ್ಣಲಾಗದಿಂತೆಂಬ ಮನುಜರ |

ಒಡನಾಟವೇಕೆ ? ಸರ್ವಜ್ಞ ||"

 

ಕೂಳಿಂದ ಕುಲ ಬೆಳದು | ಬಾಳಿಂದ ಬಲ ಬೆಳದು |

ಕೂಳು ನೀರುಗಳು ಅಳಿದಿಹರೆ ಕುಲಜಾತಿ |

ಕೇಳ ಬೇಡೆಂದು ಸರ್ವಜ್ಞ ||"

 

""ಕೊಟ್ಟು ಕುದಿಯಲಿ ಬೇಡ | ಕೊಟ್ಟಾಡಿ ಕೊಳಬೇಡ |

ಕೊಟ್ಟು ನಾ ಕೆಟ್ಟೆ ನೆನಬೇಡ ! ಶಿವನಲ್ಲಿ |

ಕಟ್ಟಿಹುದು ಬುತ್ತಿ- ಸರ್ವಜ್ಞ ||"

 

"ಕೊಟ್ಟದ್ದು ತನಗೆ ಬ|ಚ್ಚಿಟ್ಟಿದ್ದು ಪರರಿಂಗೆ |

ಕೊಟ್ಟದ್ದು ಕೆಟ್ಟಿತೆನ್ನಬೇಡ | ಶಿವನಲ್ಲಿ |

ಕಟ್ಟಿಹುದು ಬುತ್ತಿ | ಸರ್ವಜ್ಞ ||"

 

"ಕೋಟಿ ವಿದ್ಯಗಳಲ್ಲಿ | ಮೇಟಿ ವಿದ್ಯವೆ ಮೇಲು |

ಮೇಟಿಯಿಂ ರಾಟಿ ನಡೆದುದಲ್ಲದೆ ದೇಶ |

ದಾಟವೇ ಕೆಡಗು ಸರ್ವಜ್ಞ ||"

 

"ಕೋತಿಂಗೆ ಗುಣವಿಲ್ಲ | ಮಾತಿಂಗೆ ಕೊನೆಯಿಲ್ಲ |

ಸೋತು ಹೋದವಗೆ ಜಗವಿಲ್ಲ, ಅರಿದಂಗೆ |

ಜಾತಿಯೆ ಇಲ್ಲ ಸರ್ವಜ್ಞ | "

 

ಕಾದ ಕಬ್ಬಿಣವು ತಾ | ಹೊಯ್ದೊಡನೆ ಕೂಡುವದು |

ಹೋದಲ್ಲಿ ಮಾತ ಮರೆದಡೆ ಕಬ್ಬಿಣವು

ಕಾದಾರಿದಂತೆ ಸರ್ವಜ್ಞ |

 

"ಕಾಯಕವು ಉಳ್ಳನಕ | ನಾಯಕನು ಎನಿಸಿಪ್ಪ |

ಕಾಯಕವು ತೀರ್ದ ಮರುದಿನವೆ ಸುಡುಗಾಡ |

ನಾಯಕನು ಎನಿಪ ! ಸರ್ವಜ್ಞ |"

 

"ಕಾಗೆಯಗುಳನು ಕಂಡು | ಕೂಗುವುದು ಬಳಗವನು |

ಕಾಗೆ ಕೋಳಿಗಳ ತೆರೆದುಣ್ಣದವ ನಿರ್ವು |

ಕಾಗೆಗು ಕಷ್ಟ ಸರ್ವಜ್ಞ |"

 

ಕುಟ್ಟಿಕೊಂಡರೆ ಏನಿ | ಇಟ್ಟಿ ಬೂದಿಯಲೇನು |

ಬೆಟ್ಟದಲಿ ಇದ್ದು ಫಲವೇನು ಗುರುತೋರ್ದ |

ಬಟ್ಟೆ ತಪ್ಪಿದರೆ ಸರ್ವಜ್ಞ |

 

ಕುದಿಯದ ಕೂಳಿಂದ | ಹದುಳದಂಬಲಿ ಲೇಸು |

ಹೃದಯಶೂನ್ಯರು ಗಳೊಲವಿಂದ ಅರಿದರಲಿ |

ಕದನವೇ ಲೇಸು  à²¸à²°à³à²µà²œà³à²ž | 

 

ಕುಲವಿಲ್ಲ ಯೋಗಿಗೆ | ಛಲವಿಲ್ಲ ಜ್ಞಾನಿಗೆ |

ತೊಲೆ ಕಂಬವಿಲ್ಲ ಗಗನಕ್ಕೆ, ಸ್ವರ್ಗದಲಿ |

ಹೊಲಗೇರಿಯಿಲ್ಲ ಸರ್ವಜ್ಞ |

 

ಕೆಟ್ಟೀತು ಎಂಬ ಭಯ | ಬಿಟ್ಟು ನ್ಯಾಯವ ಮರೆತು |

ಪಟ್ಟದ ಅರಸು ಅನ್ಯಾಯದಲಿ ನಡೆಯೆ |

ಸೃಷ್ಟಿಗೆ ಕೇಡು ಸರ್ವಜ್ಞ |

 

ಕೇಳುವವ ರಿದ್ದಿಹರೆ | ಹೇಳುವದು ಬುದ್ದಿಯನು |

ಕೋಳದಲಿ ಬಿದ್ದು ನರಳುವಗೆ ಬುದ್ದಿಯನು |

ಹೇಳಿ ಫಲವೇನು ? ಸರ್ವಜ್ಞ |

 

ಕೂಳಿಂದ ಕುಲಬೆಳದು | ಬಾಳಿಂದ ಬಲಬೆಳದು |

ಕೂಳು ನೀರುಗಳು ಅಳಿದಿಹರೆ ಕುಲಜಾತಿ |

ಕೇಳ ಬೇಡೆಂ ದ ! ಸರ್ವಜ್ಞ || 

 

ಕ್ಷೀರವನು ಮಾನವರು | ಮಾರುವರು ಮನೆಮನೆಗೆ |

ಸಾರಾಯದೆಡೆಗೆ ಹಾರುವರು, ದುರುಳರ |

ದಾರಿ ಇಂತೆಂದ ಸರ್ವಜ್ಞ | 

 

"ಕೆಲವಂ ಬಲ್ಲವರಿಂದ ಕಲ್ತು

ಕೆಲವಂ ಮಾಳ್ಪವರಿಂದ ಕಂಡು ಮತ್ತೆ

ಹಲವಂ ತಾನೆ ಸ್ವತಃ ಮಾಡಿ ತಿಳಿಯೆಂದ ಸರ್ವಜ್ಞ |"

 

ಕೇಡು ತಾ ಬರುವಲ್ಲಿ | ಕೂಡುವುದು ದುರ್ಬುದ್ದಿ |

ಕಾಡಿನಲ್ಲಿ ಕಿಚ್ಚು ಒಗೆದಾಗ ಮಾರುತನು |

ಕೂಡಿ ಕೊಂಡಂತೆ ಸರ್ವಜ್ಞ | 

 

ಕೇಡನೊಬ್ಬಗೆ ಬಗೆದು | ಕೇಡು ತಪ್ಪದು ತನಗೆ |

ನೋಡಿ ಕೆಂಡವನು ಹಿಡಿದೊಗೆಯ ತನ್ನ ಕೈ |

ಕೂಡ ಬೆಂದಂತೆ ಸರ್ವಜ್ಞ | 

 

"ಕೊಲುವ ಕೈಯೊಳು ಪೂಜೆ | ಮೆಲುವ ಬಾಯೊಳು ಮಂತ್ರ |

ಸೆಲೆಪಾಪವರೆದ ಮನದೊಳಗೆ ಪೂಜಿಪನು |

ಹೊಲೆಯ ಕಾಣಯ್ಯ ಸರ್ವಜ್ಞ |"

 

ಕೋಟಿ ವಿದ್ಯೆಗಳಲ್ಲಿ | ಮೇಟಿ ವಿದ್ಯೆವೆ ಮೇಲು |

ಮೇಟಿಯಿಂ ರಾಟಿ ನಡೆದುದಲ್ಲದೆ ದೇಶ |

ದಾಟವೆ ಕೆಡಗು  à²¸à²°à³à²µà²œà³à²ž | 

 

"ಕೊಡುವಾತನೇ ಹರನು ! | ಪಡೆವಾತನೇ ನರನು ! |

ಒಡಲ ಒಡವೆಗಳು ಕೆಡೆದು ಹೋಗದ ಮುನ್ನ |

ಕೊಡು ಪಾತ್ರವರಿದು ! ಸರ್ವಜ್ಞ |"

 

"ಕೊಟ್ಟು ಕುದಿಯಲಿ ಬೇಡ | ಕೊಟ್ಟಾಡಿ ಕೊಳಬೇಡ |

ಕೊಟ್ಟು ನಾ ಕೆಟ್ಟೆ ನೆನಬೇಡ ! ಶಿವನಲ್ಲಿ |

ಕಟ್ಟಿಹುದು ಬುತ್ತಿ ! ಸರ್ವಜ್ಞ ||"

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2025