ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಸರ್ವಜ್ಞ (ಗ)

ಗಂಗೆ ಗೋದಾವರಿಯು | ತುಂಗಭದ್ರೆಯು ಕೃಷ್ಣೆ |

ಹಿಂಗದಲೆ ಮುಳುಗಿ ಫಲವೇನು? ತನ್ನಲಿಹ |

ಲಿಂಗವರಿಯದಲೆ! ಸರ್ವಜ್ಞ | 

 

ಗಂಧವನು ತೆವಲ್ಲಿ | ಒಂದು ನೊಣವನು ಕಾಣೆ |

ಸಂಧಿಸಿಹ ಮಲವ ಬಿಡುವಲ್ಲಿ ನೊಣ ಮುತ್ತು |

ವಂದವನು ನೋಡ ಸರ್ವಜ್ಞ |

 

"ಗಾದೆ ಓದುಗಳೇಕೆ ? | ವೇದ ಆಗಮವೇಕೆ ? |

ವೇದಾಂತವಾದ ತನಗೇಕೆ ? ಶರಣರ | 

ಹಾದಿ ಹಿಡಿದವಗೆ ಸರ್ವಜ್ಞ |"

 

"ಗುರುವಿಂದ ಬಂದುಗಳು | ಗುರುವಿಂದ ದೈವಗಳು |

ಗುರುವಿಂದಲಿಹುದು ಪುಣ್ಯವದು, ಜಗಕೆಲ್ಲ |

ಗುರುವಿಂದ ಮುಕ್ತಿ ಸರ್ವಜ್ಞ |"

 

ಗುರಿಯ ತಾಗದ ಬಾಣ | ನೂರಾರನೆಸೆದೇನು ? |

ಬರಿ ಮಾತನಾಡಿ ಫಲವೇನು ? ನಿಜಗುಣದ |

ಅರಿವಿಲ್ಲ್ದಿರಲು ! ಸರ್ವಜ್ಞ |"

 

ಗುಡಿಯ ಬೊದಿಗೆ ಕಲ್ಲು | ನಡುರಂಗ ತಾ ಕಲ್ಲು |

ಕಡೆ ಮೂಲೆ ಸೆರಗು ತಾ ಕಲ್ಲು, ವರವನು |

ಕೊಡುವಾತ ಬೇರೆ ಸರ್ವಜ್ಞ |

 

"ಗುರುವಿಂಗೆ ದೈವಕ್ಕೆ | ಹಿರಿದು ಅಂತರವುಂಟು |

ಗುರುತೋರ್ವ ದೈವದೆಡೆಯನು, ದೈವ ತಾ |

ಗುರುವ ತೋರುವುದೆ ? ಸರ್ವಜ್ಞ || "

 

"ಗುರುವಿನ ವಿಸ್ತರದ | ಪರಿಯ ನಾನೇನೆಂಬೆ ! |

ಮೆರೆವ ಬ್ರಹ್ಮಾಂಡದೊಳಹೊರಗನವಬೆಳಗಿ |

ಪರಿಪೂರ್ಣನಿಪ್ಪ ಸರ್ವಜ್ಞ ||"

 

"ಗುರುವು ನರನೆಂದವಗೆ | ಹರನ ಶಿಲೆಯೆಂದವಗೆ |

ಕರುಣಪ್ರಸಾದ ಎಂಜಲೆಂದವನಿಗೆ |

ನರಕ ತಪ್ಪುವುದೆ ಸರ್ವಜ್ಞ ||"

 

"ಗೊಬ್ಬರದೊಳಿಹ ಕಿಡಿಯು | ಒಬ್ಬರರಿಯದೆ ಹೊತ್ತಿ |

ಗೊಬ್ಬರವು ಬೂದಿಯಪ್ಪಂದ ಜ್ಞಾನದಿಂ |

ಮೊಬ್ಬೆಲ್ಲ ಕೆಡಗು ಸರ್ವಜ್ಞ |"


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2022