ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ದಾಸರಪದ (ಅ)

                  ಅಕ್ಕೋರಂಗ ನೋಡೆ ಇಕ್ಕೋ ಕ್ರಷ್ಣನೋಡೆ 

 

ಅಕ್ಕೋರಂಗ ನೋಡೆ ಇಕ್ಕೋ ಕ್ರಷ್ಣನೋಡೆ । ತಕ್ಕಥ್ಯೆ ಎಂದೀಗೆ ಸಿಕ್ಕಿದ ನಮ್ಮ ಕ್ಯೆಗೆ ।।ಪ।।

 

ಕುರುಳು ಕುಂತಳದಿಂದ ಕಸ್ತುರಿ ತಿಳುಕ ಚಂದ । 

ಪರಮ ಪುರುಷ ಬಂದ ನೇಲ ವರ್ಣ ನಂದ ।।೧।। 

 

ಮೂಗುಳು ನಗೆಯ ಕಾಂತಿ ಚಂದ್ರನುದಯ ಭ್ರಾಂತಿ । 

ಸೊಗಸು ನೋಡಲೆ ಕಾಂತ ಸಳೆವ ಮನವ ಶಾಂತೆ  ।।೨।।

 

ವಾರೋ ಬಾ ಗೋಪಾಲಕೃಷ್ಣವಿಠಲ ಚಾಲ । ತೋರುವ 

ನೋಡ ಬಾಲೆ ಸೀರೋಣ ಬಾ ಸುಶೀಲೆ ।।೩।।

     

 

                       ಆಭಯ ಪ್ರಧಾನ ಮಾಡೂ ಇಭಗಿರಿವಾಸ 

 

ಆಭಯ ಪ್ರಧಾನ ಮಾಡೂ ಇಭಗಿರಿವಾಸ ।।ಪ।। 

 

ಮಂಗಳ ಮಹಿಮನೇ ರಂಗನಾತನೆ 

ಕೃಷ್ಣಾ । ತುಂಗ ವಿಕ್ರಮ ನರಸಿಂಗ ಲಕ್ಸ್ಮೀಕಾಂತ ।।೧।। 

 

ಮೃತ್ಯು ಬೆನ್ಹತ್ತಿರೆ ಕತ್ತರಿಸುವ ಮಹ ।

ಶಕ್ತ ನೀನಿರುತಿರೆ ಮತ್ತಾರ ಚೇಡಲಿ ।।೨।। 

 

ನಿನ್ನ ಕಿಂಕರಳಾಗಿ ನಿನ್ನ ಸೀವೆಯ ಮೂಳ್ವ ।

ಉನ್ನಂತ ಅಭಿಲಾಷಯನ್ನು ಸಲ್ಲಿಸು ದೇವ ।।೩।। 

 

ಹಿಂದಿನ ಎಡಿರುಗಳೊಂದೊಂದರಲಿ 

ಕಾಯ್ದೆ। ಇಂದು ಮುಂದೂ ಕಾಯೋ ಮಂದಹಾಸನ ಸ್ವಾಮಿ ।।೪।। 

 

ಹರಿಗುರು ಕಾರ್ಯಕಲ್ಲವೆ ಎನ್ನ ಈ ದೇಹಾ । 

ಸಿರಿವರ ಗೊಪಾಲಕ್ಲಷ್ಣವಿಠಲ ಸ್ವಾಮಿ ।।೫।।

 

                     

 

                     ಅಮ್ಮಾ ಬಾ ನಮ್ಮಮ್ಮನೆ ।।ಧ್ರುವ।। 

 

ಅಮ್ಮಾ ಬಾ ನಮ್ಮಮ್ಮನೆ ಅಮ್ಮ ನೇಡಮ್ಮನೆ । 

ಬೊಮ್ಮನಾ ಪಡೆದ ಶ್ರೇ ಹರಿ ಪರಬ್ರಹ್ಮನೆ 

 

ಬೇಡುವೆ ನಿಮ್ಮನೆ ಕಾಡುವೆ ಸುಮ್ಮನೆ । 

ಓಡ್ಯಾಡಿ ಬಂದು ಅಂದಲಿವೆ ನಾ  ತಮ್ಮನೆ ।।೧।। 

 

ಬಯಸಿ ಬಂದೊಡೆ ನಾ ಕಾಯಬೇಕನ್ನನಾ। 

ತಾಯಿ ತಂಧ್ಯೊಬ್ಬಳೆ ನೀನೆ ಸನಾತನಾ ।।೨।। 

 

ಉಣಿಸೆ ನಾಮಮೃತ ದಣೆಸೆ ಮನೋರಥಾ । 

ದೀನಮಾಹಿಪತಿ ಜೀವ ಪ್ರಾಣಕ ಸನಾಥಾ ।।೩।।

 

 

                       ಅಂಬುಜಾಕ್ಷನ ಬಂಟ

ಅಂಬುಜಾಕ್ಷನ ಬಂಟ ನೆನೆವರಿಗೆ ನಂಟ|ನಿಂಬರಿಗೆ ನೆಲೆವಂತ ವರದ ಹನುಮಂತ ||ಪ||

 

ಜಲಧಿಯನು ದಂಟ ಚಾನಕಿಗೆ ತಲೆವಾಗಿ ನೇ । ನಲಿದಕ್ಷಯ ನಿಶಾಟಾದ್ಯರರಿದೆ ಸತಿ ರಫು ।

ಕುಲೆಂದ್ರನಂ ಕಂಡು ಅಸಹಾಯದಿ । ಹಲವು ಸಾಹಸ ಮಾಡಿದಖಿಳ ಕಪಿನಾಥ ।।೧।। 

 

ಕಿರ್ಮೀರ  ಬಕ ಹಿಡಿಮಬಕ ಕೀಚಕಾದಿ  ಖಳ । ದುರ್ಮತಿ  ಕದಳಿವನಕೆ ಮತ್ತ ಕರಿಯೆ ।

ನಿರ್ಮಳಾನನೆ ದ್ರೌಪದಿಯ ಭಂಗಪಡಿಸಿದ ಕು । ಕರ್ಮಿ ಕೌರವರಿಗಶನೆಯೆ ।।೨।। 

 

ಶ್ರೀ ಬಾದರಾಯಣಾಜ್ಞದಿ ತತ್ವಸರಾರ್ಥ । ನೀ ಬೋಧಿಸಿದೆ ನಿಜ ವ್ಯೆಷ್ಣವ ಜನಕೆ । 

ಈ ಭುವಿಗೆ ಕಶ್ಮಲ ಕುವಾದಿಗಳ ಗೆದ್ದಬ್ಜ । ನಾಭಿ ಪ್ರಸನ್ನವೆಂಕಟೀಶಗರ್ಪಿಸಿದೆ ।।೩।।

 

 

                                 ಅವನೆ ಧನ್ಯನೆಲಾ ಜಗದೊಳು   

 

ಅವನೆ ಧನ್ಯನೆಲಾ ಜಗದೊಳು । ಇವನೇ ಮಾನ್ಯನೆಲಾ ।।ಪ।। 

 

ಆವ ಪರಿಯಲಿಂದಾದರು ತನ್ನಯ । ಭಾವ ಶುದ್ಧಿಯಲಿ ಭಗವತ್ವರನಾದವನೆ ಧನ್ಯ ।।೧।। 

ಆತ್ಮೀಂತರ ಸಂಸ್ಕ್ರತಿಯೊಳಿದ್ದು ।ಸ್ವಾತ್ಮಲಾಭ ಸಿದ್ದಿಯ ಸಾಧಿಸಿಕೊಂಡವನೆ ।।೨।। 

ಶ್ರೀದವಿಠಲನ ಸಾಕ್ಷಾತ್ಕಾರಿಸಿ । ಸಾಧು ಸೇವ್ಯ ಚೆತ್ಸುಖವಯವಾದುದವನೇ ಧನ್ಯನೆಲಾ ।।೩।।

 

                         ಅಗಚೆ ನೆನ್ನೊಗತನಕೆ ಜಗ ನಗುವುದೇ  

 

ಅಗಚೆ ನೆನ್ನೊಗತನಕೆ ಜಗ ನಗುವುದೇ । 

ನಗರಾಜ ಮನೆಯ ಹೊಗಿಸಿದನೆ ಅಕಟಕಟ ।।ಪ।। 

 

ಹೊಟ್ಟೆಗಿಲ್ಲದೆ ಹೋಗಿ ಹಾಲಾಹಾಲವನುಂಡ । ತೊಟ್ಟ ತೊಗಲುಡುಗೆ ತಳೆಯೋಡು

ಕೈಯ । ಸುಟ್ಟ ಸುಡಗಾಡ ಮನೆ ಅಖಿಲ ಭೊತೇಶ ಬಲು । ಸಿಟ್ಟಿನವನಂಗಸಂಗ ಬಯಸಬಹುದೆ ।।೧।।

 

ಆರುಮೊಗದವನೊಬ್ಬ ಆರ್ಥಜನು ಮೂಲೆಪಾಲು । ಕಾರಿ ಕಡುಮುನಿದು ಕಂಡರೆ ಸೀರರು ।

ಊರಿಗುಪಕಾರಿ ಒಡಲಹರಕ ಗಜಮುಖನು । ನಾರಿ ಮೇನಕೆ ಮಗಳು ಕಂಡು ಹಿಗ್ಗುವಳಯ್ಯ ।।೨।।

 

ಶಿವಶಕ್ತಿ ನಿನ್ನಂಥ ಸೌಭಾಗ್ಯವಂತೆಯಳ । ಭುವನಬದೊಳಗಾವಲ್ಲಿ ಕಾಣೆನಿನ್ನು ।

ಕವಿಜನಗಳೇನೆಂದು ಬಣ್ಣೆಸಿದರೊ ತಿಳಿಯೆ । ಭವದೂರ ಶ್ರೀದವಿಠಲರಾಯ ಬಲ್ಲ ।।೩।।

 

                          

 

 

 

 

                                            ಅಂಬಾ ಅಚಲಸುತೆ ಅನಲಾಕ್ಷಸತಿ ನಿನ್ನ 

 

ಅಂಬಾ ಅಚಲಸುತೆ ಅನಲಾಕ್ಷಸತಿ ನಿನ್ನ । 

ಅಂಬುಜ ಅಡಿಗಳಿಗೆ ಎರಗಿದೆ ಅಮ್ಮ ।।ಪ।।

 

ಕಾರ್ತಿಕೇಯನ ಮಾತೆ ಕಾತ್ಯಾಯಿನೀ ದೇವಿ । 

ಅತಿದಯದಿ ಪಾಲಿಸೆನ್ನ ಕಲುಷ ಪರಿಹರಿಸೇ ।೧। 

 

 ಗಜಮುಖನಯೆ ನೀ ಗಿರಿರಾಜ ಆತ್ಮಜೆ । 

ವಜ್ರಿ ಮನ್ನಥನುತೆ ಭಜಕಗೇ ಶುಭದೆ ।।೨।।

 

ಉದಕಜಾಸನ ಪಿತ ಪ್ರಸನ್ನ ಶ್ರೀನಿವಾಸನ । 

ಭಕ್ತಾಗ್ರಣೇ ಸದಾಶಿವನ ಅರ್ಧಾಂಗಿ ನಮೋ ।।೩।।

 

 

 

 

 

 

 

 

 

 

                       ಆಭಯ ಪ್ರಧಾನ ಮಾಡೂ ಇಭಗಿರಿವಾಸ 

 

ಆಭಯ ಪ್ರಧಾನ ಮಾಡೂ ಇಭಗಿರಿವಾಸ ।।ಪ।। 

 

ಮಂಗಳ ಮಹಿಮನೇ ರಂಗನಾತನೆ 

ಕೃಷ್ಣಾ । ತುಂಗ ವಿಕ್ರಮ ನರಸಿಂಗ ಲಕ್ಸ್ಮೀಕಾಂತ ।।೧।। 

 

ಮೃತ್ಯು ಬೆನ್ಹತ್ತಿರೆ ಕತ್ತರಿಸುವ ಮಹ ।

ಶಕ್ತ ನೀನಿರುತಿರೆ ಮತ್ತಾರ ಚೇಡಲಿ ।।೨।। 

 

ನಿನ್ನ ಕಿಂಕರಳಾಗಿ ನಿನ್ನ ಸೀವೆಯ ಮೂಳ್ವ ।

ಉನ್ನಂತ ಅಭಿಲಾಷಯನ್ನು ಸಲ್ಲಿಸು ದೇವ ।।೩।। 

 

ಹಿಂದಿನ ಎಡಿರುಗಳೊಂದೊಂದರಲಿ 

ಕಾಯ್ದೆ। ಇಂದು ಮುಂದೂ ಕಾಯೋ ಮಂದಹಾಸನ ಸ್ವಾಮಿ ।।೪।। 

 

ಹರಿಗುರು ಕಾರ್ಯಕಲ್ಲವೆ ಎನ್ನ ಈ ದೇಹಾ । 

ಸಿರಿವರ ಗೊಪಾಲಕ್ಲಷ್ಣವಿಠಲ ಸ್ವಾಮಿ ।।೫।।

 

                      ಅಕ್ಕೋರಂಗ ನೋಡೆ ಇಕ್ಕೋ ಕ್ರಷ್ಣನೋಡೆ 

 

ಅಕ್ಕೋರಂಗ ನೋಡೆ ಇಕ್ಕೋ ಕ್ರಷ್ಣನೋಡೆ । ತಕ್ಕಥ್ಯೆ ಎಂದೀಗೆ ಸಿಕ್ಕಿದ ನಮ್ಮ ಕ್ಯೆಗೆ ।।ಪ।।

 

ಕುರುಳು ಕುಂತಳದಿಂದ ಕಸ್ತುರಿ ತಿಳುಕ ಚಂದ । 

ಪರಮ ಪುರುಷ ಬಂದ ನೇಲ ವರ್ಣ ನಂದ ।।೧।। 

 

ಮೂಗುಳು ನಗೆಯ ಕಾಂತಿ ಚಂದ್ರನುದಯ ಭ್ರಾಂತಿ । 

ಸೊಗಸು ನೋಡಲೆ ಕಾಂತ ಸಳೆವ ಮನವ ಶಾಂತೆ  ।।೨।।

 

ವಾರೋ ಬಾ ಗೋಪಾಲಕೃಷ್ಣಎಠಲ ಚಾಲ । ತೋರುವ 

ನೋಡ ಬಾಲೆ ಸೀರೋಣ ಬಾ ಸುಶೀಲೆ ।।೩।।

 

                     ಅಮ್ಮಾ ಬಾ ನಮ್ಮಮ್ಮನೆ ।।ಧ್ರುವ।। 

 

ಅಮ್ಮಾ ಬಾ ನಮ್ಮಮ್ಮನೆ ಅಮ್ಮ ನೇಡಮ್ಮನೆ । 

ಬೊಮ್ಮನಾ ಪಡೆದ ಶ್ರೇ ಹರಿ ಪರಬ್ರಹ್ಮನೆ 

 

ಬೇಡುವೆ ನಿಮ್ಮನೆ ಕಾಡುವೆ ಸುಮ್ಮನೆ । 

ಓಡ್ಯಾಡಿ ಬಂದು ಅಂದಲಿವೆ ನಾ  ತಮ್ಮನೆ ।।೧।। 

 

ಬಯಸಿ ಬಂದೊಡೆ ನಾ ಕಾಯಬೇಕನ್ನನಾ। 

ತಾಯಿ ತಂಧ್ಯೊಬ್ಬಳೆ ನೀನೆ ಸನಾತನಾ ।।೨।। 

 

ಉಣಿಸೆ ನಾಮಮೃತ ದಣೆಸೆ ಮನೋರಥಾ । 

ದೀನಮಾಹಿಪತಿ ಜೀವ ಪ್ರಾಣಕ ಸನಾಥಾ ।।೩।।

 

 

                       ಅಂಬುಜಾಕ್ಷನ ಬಂಟ

ಅಂಬುಜಾಕ್ಷನ ಬಂಟ ನೆನೆವರಿಗೆ ನಂಟ|ನಿಂಬರಿಗೆ ನೆಲೆವಂತ ವರದ ಹನುಮಂತ ||ಪ||

 

ಜಲಧಿಯನು ದಂಟ ಚಾನಕಿಗೆ ತಲೆವಾಗಿ ನೇ । ನಲಿದಕ್ಷಯ ನಿಶಾಟಾದ್ಯರರಿದೆ ಸತಿ ರಫು ।

ಕುಲೆಂದ್ರನಂ ಕಂಡು ಅಸಹಾಯದಿ । ಹಲವು ಸಾಹಸ ಮಾಡಿದಖಿಳ ಕಪಿನಾಥ ।।೧।। 

 

ಕಿರ್ಮೀರ  ಬಕ ಹಿಡಿಮಬಕ ಕೀಚಕಾದಿ  ಖಳ । ದುರ್ಮತಿ  ಕದಳಿವನಕೆ ಮತ್ತ ಕರಿಯೆ ।

ನಿರ್ಮಳಾನನೆ ದ್ರೌಪದಿಯ ಭಂಗಪಡಿಸಿದ ಕು । ಕರ್ಮಿ ಕೌರವರಿಗಶನೆಯೆ ।।೨।। 

 

ಶ್ರೀ ಬಾದರಾಯಣಾಜ್ಞದಿ ತತ್ವಸರಾರ್ಥ । ನೀ ಬೋಧಿಸಿದೆ ನಿಜ ವ್ಯೆಷ್ಣವ ಜನಕೆ । 

ಈ ಭುವಿಗೆ ಕಶ್ಮಲ ಕುವಾದಿಗಳ ಗೆದ್ದಬ್ಜ । ನಾಭಿ ಪ್ರಸನ್ನವೆಂಕಟೀಶಗರ್ಪಿಸಿದೆ ।।೩।।

 

                                 ಅಂಚಾನೆ ತನಯ   

 

ಅಂಚಾನೆ ತನಯ ಧ । ನಂಚಾಯನಗ್ರಜ । ಕಂಜಾಕ್ಷ ಶ್ರೀ ಮದ್ಜ । ಸಂಜಯವಂತಾ ।।೧।।

ಮಾರುತಿ ನಿನ್ನಯ । ಕೀರುತಿ ಜಗದೊಳು । ಬೀರುತಿದ ಕೊ ನಾ । ಸಾರುತೀ ನೀಗಾ ।।೨।।

ರಾವಣಾನುಜ ಸು । ಗ್ರೀವಾ ವಿಪ್ರಜಾನಂತೆ । ಕಾಯೋ । ದೇವೇಂದ್ರ ಪಾಲಾ ।।೩।।

ಪ್ರಸ್ತುತ ಬಿನ್ನಪ । ವಿಸ್ತರಿಪ ಕೃತಿ ಸ । ಮಸ್ತರೂ ಕೇಳಲಿ । ಆಸ್ಥೀಯಲಿಂದಾ ।।೪।। 

ಪ್ರಾಣೇಶ ವಿಠ್ಠಲಾ ಪ್ರೀ । ತಾನಾಗಬೇಕೀದಕೆ । ಹೇನ ವಿಷಯಗಳಾ । ನಾನೊಲ್ಲೆ ದೇವ ।।೫।।

 

 

                         ಅಗಚೆ ನೆನ್ನೊಗತನಕೆ ಜಗ ನಗುವುದೇ  

 

ಅಗಚೆ ನೆನ್ನೊಗತನಕೆ ಜಗ ನಗುವುದೇ । 

ನಗರಾಜ ಮನೆಯ ಹೊಗಿಸಿದನೆ ಅಕಟಕಟ ।।ಪ।। 

 

ಹೊಟ್ಟೆಗಿಲ್ಲದೆ ಹೋಗಿ ಹಾಲಾಹಾಲವನುಂಡ । ತೊಟ್ಟ ತೊಗಲುಡುಗೆ ತಳೆಯೋಡು

ಕೈಯ । ಸುಟ್ಟ ಸುಡಗಾಡ ಮನೆ ಅಖಿಲ ಭೊತೇಶ ಬಲು । ಸಿಟ್ಟಿನವನಂಗಸಂಗ ಬಯಸಬಹುದೆ ।।೧।।

 

ಆರುಮೊಗದವನೊಬ್ಬ ಆರ್ಥಜನು ಮೂಲೆಪಾಲು । ಕಾರಿ ಕಡುಮುನಿದು ಕಂಡರೆ ಸೀರರು ।

ಊರಿಗುಪಕಾರಿ ಒಡಲಹರಕ ಗಜಮುಖನು । ನಾರಿ ಮೇನಕೆ ಮಗಳು ಕಂಡು ಹಿಗ್ಗುವಳಯ್ಯ ।।೨।।

 

ಶಿವಶಕ್ತಿ ನಿನ್ನಂಥ ಸೌಭಾಗ್ಯವಂತೆಯಳ । ಭುವನಬದೊಳಗಾವಲ್ಲಿ ಕಾಣೆನಿನ್ನು ।

ಕವಿಜನಗಳೇನೆಂದು ಬಣ್ಣೆಸಿದರೊ ತಿಳಿಯೆ । ಭವದೂರ ಶ್ರೀದವಿಠಲರಾಯ ಬಲ್ಲ ।।೩।।

 

                          

 

 

                                            ಅಂಬಾ ಅಚಲಸುತೆ ಅನಲಾಕ್ಷಸತಿ ನಿನ್ನ 

 

ಅಂಬಾ ಅಚಲಸುತೆ ಅನಲಾಕ್ಷಸತಿ ನಿನ್ನ । 

ಅಂಬುಜ ಅಡಿಗಳಿಗೆ ಎರಗಿದೆ ಅಮ್ಮ ।।ಪ।।

 

ಕಾರ್ತಿಕೇಯನ ಮಾತೆ ಕಾತ್ಯಾಯಿನೀ ದೇವಿ । 

ಅತಿದಯದಿ ಪಾಲಿಸೆನ್ನ ಕಲುಷ ಪರಿಹರಿಸೇ ।೧। 

 

 ಗಜಮುಖನಯೆ ನೀ ಗಿರಿರಾಜ ಆತ್ಮಜೆ । 

ವಜ್ರಿ ಮನ್ನಥನುತೆ ಭಜಕಗೇ ಶುಭದೆ ।।೨।।

 

ಉದಕಜಾಸನ ಪಿತ ಪ್ರಸನ್ನ ಶ್ರೀನಿವಾಸನ । 

ಭಕ್ತಾಗ್ರಣೇ ಸದಾಶಿವನ ಅರ್ಧಾಂಗಿ ನಮೋ ।।೩।।

 

 

ಅಜ್ಞಾನಿಗಳ ಕೂಡೆ   ರಾಗ: ಮೋಹನ

 

ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ

ಸುಜ್ಞಾನಿಗಳ ಕೂಡೆ ಜಗಳವೇ ಲೇಸು |ಪ|

 

ಉಂಬುಡುವುದಕ್ಕಿರುವ ಅರಸನೋಲಗಕ್ಕಿಂತ

ತುಂಬಿದೂರೊಳಗೆ ತಿರಿದುಂಬುವುದೆ ಲೇಸು

ಹಂಬಲಿಸಿ ಹಾಳು ಹರಟೆ ಹೊಡೆವುದಕ್ಕಿಂತ

ನಂಬಿ ಹರಿದಾಸರೊಳಾಡುವುದೆ ಲೇಸು |೧|

 

ಒಡನೆ ಹಂಗಿಸುವವನ ಪಾಲೋಗರಕ್ಕಿಂತ

ಕುಡಿನೀರ ಕುಡಿದುಕೊಂಡಿಹುದೆ ಲೇಸು

ಬಿಡದೆ ಬಡಿದಾಡುವರ ನೆರೆಯಲಿಹುದಕ್ಕಿಂತ

ಅಡವಿಯೊಳಗಜ್ಞಾತವಾಸವೆ ಲೇಸು |೨|

 

ಮಸೆದು ಮತ್ಸರಿಪ ಸತಿಯೊಡನೆ ಸಂಸಾರಕ್ಕಿಂತ

ಹಸನಾದ ಹಾಳು ಗುಡಿಯೇ ಲೇಸು 

ಬಿಸಜಾಕ್ಷ ಪುರಂದರವಿಠಲನ ನೆನೆನೆನೆದು

ವಸುಧೆಯೊಳು ಚಿರಕಾಲವಿರುವುದೆ ಲೇಸು |೩|

 

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023