ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ದಾಸರಪದ (ಆ)

ಆದದ್ದೆಲ್ಲ ಒಳಿತೇ ಆಯಿತು 

ರಾಗ: ಪಂತುಸರಾಳಿ ರಾಗ: ಆಟ

 

ಆದದ್ದೆಲ್ಲಾ ಒಳಿತೇ ಆಯಿತು ||ಪ||

ನಮ್ಮ ಶ್ರೀಧರನ ಸೇವೆಗೆ ಸಾಧನ ಸಂಪತ್ತಾಯಿತೂ ||ಅ ಪ|| 

 

ದಂಡಿಗೆ ಬೆತ್ತ ಹಿಡಿಯುವುದಕ್ಕೆ

ಮಂಡೆ ಮಾಚಿ ನಾಚುತಲಿದ್ದೆ

ಹೆಂಡತಿ ಸಂತತಿ ಸಾವಿರವಾಗಲಿ

ದಂಡಿಗೆ ಬೆತ್ತ ಹಿಡಿಸಿದಳಯ್ಯ  ||೧||

 

ಗೋಪಾಳ ಬುಟ್ಟಿ ಹಿಡಿಯುವುದಕ್ಕೆ

ಭೂಪತಿಯಂತೆ ಗರ್ವಿಸುತಿದ್ದೆ

ಆ ಪತ್ನೀಕುಲ ಸಾವಿರವಾಗಲಿ

ಗೋಪಾಳ ಬುಟ್ಟೀ ಹಿಡಿಸಿದಳಯ್ಯಾ ||೨||

 

ತುಳಸೀ ಮಾಲೆಯ ಹಾಕುವುದಕ್ಕೆ 

ಅರಸನಂತೆ ನಾಚುತಲಿದ್ದೆ

ಸರಸಿಜಾಕ್ಷ ಶ್ರೀ ಪುರಂದರ ವಿಠಲನು

ತುಳಸೀಮಾಲೆ ಹಾಕಿದನಯ್ಯಾ ||೩||


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023