ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಸುಳಾದಿ (ಗ)

ತ್ರಿಪುಟತಾಳ

ಗುರುಮುಖವಿರಬೇಕು ಹರಿದೈವನೆನಬೇಕು

ಪರ ಉಪಕಾರ ಇರಬೇಕು ಪ್ರತಿಕ್ಷಣ

ಪರರು ತನ್ನವರು ಸಮವೆಂದು ತಿಳಿಯಬೇಕು

ಹಿರಿದುಹಿಗ್ಗದೆತಾನಸ್ವತಂತ್ರನೆನಬೇಕು

ಪರಮಾಣುಸ್ಥಳದಲ್ಲಿ ಹರಿವ್ಯಾಪ್ತನೆನಬೇಕು

ಈ ಪರಿಯಲ್ಲಿ ತಿಳಿದರೆ ಅವನೆ ಮುಕ್ತಿಯೋಗ್ಯ

ಸಿರಿಯರಮಣ ನಮ್ಮ ಗೋಪಾಲವಿಠಲನ್ನ 

ಕರುಣಕ್ಕೆ ಪಾತ್ರನಾದವನೆ ಇದನರಿವ  

 

 

||ತ್ರಿವಿಡಿತಾಳ||

ಗಜಮುಖ ಜನಕನೆ ಕುಜನ ಕುಠಾರನೆ | ಅಜ ಸುತ ಬಲ ಸಾಮಜ ಮರ್ದನ |

ಅಜಿನಾಂಬರ ಧರ ಸುಜನ ಮನ ಮಂದಿರ | ವಿಜಯ ಸನ್ನುತ ಪಾದಾಂಬುಜ

ಶಂಭುಶಂಕರ | ತ್ರಿಜಗಪಾಲಾಭಿನವ ಪ್ರಾಣೇಶ ವಿಠಲನ | ಭಜನೆ ಪಾಲಿಸು

ಜೀಯಾ ಸುಜನಗಣಗೇಯ ||

 

||ರೂಪಕತಾಳ||

ಗುರುವಾರು ಸಂಕರಗೆ ಕರೆದು ಉಪದೇಶವ | ನರುಹಿದ ನಾವನೊ ಪೇಳೊ

ಮುಗ್ಧಾ | ಹರಿವ ನದಿಯೊಳಗೆ ಈಸಿ ಪೋಗುತಲಿರಲು | ವರಯಜ್ಞೋಪವೀತ

ಜಿಗುಳಿ ಪೋಗೆ | ಜರಿದು ಗೃಹಸ್ಥಾಶ್ರಮ ಸನ್ಯಾಸಾಶ್ರಮಕೆಮನ | ಎರಗಿ ನಮ್ಮ

ಸತ್ಯ-ಪ್ರಾಜ್ಞತೀರ್ಥರ ಕೇಳೆ | ಪರಿಹಾರವಾದ ಉತ್ತರ ಕೊಡಲು ತಾನೆ |

ದುರುಳ ಮತಿಯಲಿ ಚತುರಾಶ್ರಮವೆ ಕೊಂಡಾ | ಹಿರಿಯರ ಮತವಿದು

ಪುಶಿಯಲ್ಲ ಮಾತು ಚ | ತುರರ್ಗತ ವಿಜಯ ವಿಠ್ಠಲನೆ ಸಾಕ್ಷಿ ||

 

 

 

||ಆದಿತಾಳ||

ಗುರು ವ್ಯಾಸಮುನಿಯೆಂದು ಧರುಣಿಯೊಳಗೆ ಪೆಸರಾಗಿ | ನೆರೆದು ಸಜ್ಜನರಿಗೆ

ಗರೆದು ನ್ಯಾಯ ಶಾಸ್ತ್ರ | ಅರುಹಿ ವೈಷ್ಣವ ಮತ ಅದರಿಂದ ಉದ್ಧರಿಸಿ | ಪೊರೆದು

ನಂಬಿದವರ ಎರಡೊಂದು ಜನ್ಮ ಸುಂ |ದರ ಗರ್ಭದಲ್ಲಿ ಬಂದು ಪರಿಪೂರ್ಣ ಜ್ಞಾನ

ಭಕ್ತಿ ವೈರಾಗ್ಯದಲ್ಲಿ ನಡೆದು | ಎರಡೊಂದು ಉತ್ತಮ ಗುರು ಸಂತತಿಯೊಳಗೆ | ಚರಿಸಿ

ಚತುರಾಶ್ರಮ ಧರಿಸಿ ಚತುರರಾಗಿ ಭರತಖಂಡದೊಳು ಪಸರಿಸಿ ಕೀರ್ತಿಯ

ಪಡೆದು | ಭರದಿಂದ ವಾಲಗವು ಸುರರಿಂದ ಕೈಗೊಳುತ | ಪರಲೋಕದಲಿ ಒಪ್ಪಿ

ನಿರಾಮಯ ಗುಣನಿಧಿ ವಿಜಯ ವಿಠಲರೇಯನ | ನೆರೆನಂಬಿ ಪ್ರತಿದಿನ ಮೆರೆದು

ಮೂರ್ಧನ್ಯರಾಗಿ ||

 

 

 

 

 

||ಆದಿತಾಳ||

ಗೋಪಿನಂದನೆ ಮುಕ್ತೆ ದೈತ್ಯ ಸಂತತಿಗೆ ಸಂತಾಪವ ಕೊಡುತಿಪ್ಪ ಮಹಾ ಕಠೋರೆ

ಉಗ್ರೆ | ರೂಪ ವೈಲಕ್ಷಣೆ ಅಜ್ಞಾನಕ್ಕಭಿಮಾನಿನಿ | ತಾಪತ್ರಯ ವಿನಾಶೆ ಓಂಕಾರ

ಹೂಂಕಾರೆ | ಪಾಪಿ ಕಂಸಗೆ ಭಯ ತೋರಿದೆ ಬಾಲಲೀಲೆ | ವ್ಯಾಪುತೆ ಧರ್ಮ

ಮಾರ್ಗ ಪ್ರೇರಣೆ ಅಪ್ರಾಕೃತೆ | ಸ್ವಾಪ್ನದಲ್ಲಿ ನಿನ್ನ ನೆನೆಸಿದ ಶರಣನಿಗೆ |

ಅಪಾರವಾಗಿದ್ದ ವಾರಿಧಿಯಂತೆ ಮಹಾ | ಆಪತ್ತು ಬಂದಿರಲು ಹಾರಿ ಪೋಗೋವು

ಸಪ್ತ | ದ್ವೀಪ ನಾಯಿಕೆ ನರಕ ನಿರ್ಲೀಪೆ ತಮೋಗುಣದ | ವ್ಯಾಪಾರ ಮಾಡಿಸಿ ಭಕ್ತ

ಜನಕೆ ಪುಣ್ಯ | ಸೋಪಾನ ಮಾಡಿಕೊಡುವ ಸೌಭ್ಯಾವಂತೆ ದುರ್ಗೆ | ಪ್ರಾಪುತವಾಗಿ

ಎನ್ನ ಮನದಲಿ ನಿಂದು ದುಃಖ ಕೂಪದಿಂದಲಿ ಎತ್ತಿ ಕಡೆ ಮಾಡು ಜನ್ಮಂಗಳ |

ಸೌಪರ್ಣಿ ಮಿಗಿಲಾದ ಸತಿಯರು ನಿತ್ಯ ನಿನ್ನ | ಆಪಾದ ಮೌಳಿ ತನಕ ಭಜಿಸಿ

ಭವ್ಯರಾದರು | ನಾ ಪೇಳುವದೇನು ಪಾಂಡವರ ಮನೋಭಿಷ್ಟೇ | ಈ ಪಂಚ

ಭೌತಿಕದಲ್ಲಿ ಆವ ಸಾಧನ ಕಾಣೇ ಶ್ರೀಪತಿನಾಮ ಒಂದೇ ಜಿಹ್ವಾಗ್ರದಲಿ ನೆನೆವ |

ಔಪಾಸನ ಕೊಡು ರುದ್ರಾದಿಗಳ ವರದೆ | ತಾಪಸ ಜನಪ್ರೀಯ ವಿಜಯ ವಿಠಲ

ಮೂರ್ತಿಯ | ಶ್ರೀ ಪಾದಾರ್ಚನೆ ಮಾಳ್ಪಾ ಶ್ರೀ ಭೂ ದುರ್ಗಾವರ್ಣಾಶ್ರಯೆ ||

 

 

||ಧೃವತಾಳ||

ಗುರುಗಳ ಕರುಣವೆ ದಾರಿದ್ರ್ಯ ಭಂಜನ | ಗುರುಗಳ ಕರುಣವೆ ಮಹದೈಶ್ವರ್ಯ

ಕಾರಣ | ಗುರುಗಳ ಕರುಣವೆ ಸಕಲ ರೋಗ ಹರಣ | ಗುರುಗಳ ಕರುಣವೆ ಸಕಲ

ದುಃಖನಾಶನ | ಗುರುಗಳ ಕರಣವೆ ಸಕಲ ಸುಖಸಾಧನ | ಗುರುಗಳ ಕರುಣವೆ

ಪರಮ ಮಂಗಲಪ್ರದ | ಗುರುಗಳ ಕರುಣವೆ ದುರಿತಾಂಬುಧಿಗೆ ನೌಕಾ | ಗುರುಗಳ

ಕರುಣವೆ ಭೂತ ಪ್ರೇತೋಚ್ಛಾಟನೆ | ಗುರುರೂಪ ನಾಮ ಕ್ರೀಯಾ ಬಾದರಾಯಣ

ವಿಠಲ ಗುರುಪಾದ ಶರಣನ್ನ ಅಪರಾಧವೆಣಿಸಾನು ||

 

||ಮಟ್ಟತಾಳ||

ಗುರುಗಳ ಕರುಣವೆ ಉತ್ತುಂಕನ ಪಾಲಿಸಿತು | ಗುರುಗಳ ಕೃಪೆಯಿಂದಾ ಧೃವನಿಗೆ

ಹರಿವಲಿದಾ | ಗುರುಗಳ ದಯದಿಂದಾ ಪ್ರಹ್ಲಾದನು ಗೆದ್ದಾ | ಗುರು ಕರುಣಿಸಲು

ಸಂಚಿತಾಗಮಿ ಒಂ | ದರ ನಿಮಿಷದಿ ಸುಟ್ಟು ಪೋಗುವದೆ ಸತ್ಯಾ | ಗುರು ಕರುಣವೆ

ತಾರಕ | ಗುರು ಮೂರುತಿ ಬಾದರಾಯಣ ವಿಠಲ ಗುರು ಶರಣರಿಗೊಲಿದಂತೆ ಅನ್ಯ

ಜನರಿಗೊಲಿಯಾ ||

 

||ತ್ರಿವಿಡಿತಾಳ||

ಗುರುಗಳ ಚರಣಾಬ್ಜ ಸ್ಮರಿಸಿದ ಫಲಕ್ಕಿನ್ನು | ಸರಿಯಾದ ಪುಣ್ಯ ಈ ಧರೆಯೊಳುಂಟೆ |

ಸುರಭಿನಿಕರ ಚಾಮಿಕರ ಸಿರಿ ಕನ್ಯಾ ಮಂದಿರ ಧರಣಿ ದಾನಕ್ಕಧಿಕ ಕಾಣೋ | ಬರೆ

ಮಾತಲ್ಲವೊ ತ್ರಿಕರಣ ಸಾಕ್ಷಿವೈಯ್ಯಾ | ಗುರುವೆ ಪರದೈವಾ ಗುರುವೆ ದೈವಾ |

ಗುರುವಂತರ್ಯಾಮಿ ಶ್ರೀ ಬಾದರಾಯಣ ವಿಠಲ ಗುರುವೆಂದಿನಿಸಿ ತನ್ನ ಶರಣ

ಜನರ ಕಾವಾ ||

 

||ಜತೆ||

ಗುರು ಪಾದೋದಕ ಗುರುಚ್ಚಿಷ್ಠ ಭುಂಜಿಸಿ | ಗುರುವಂತರ್ಯಾಮಿ

ಶ್ರೀ ಬಾದರಾಯಣ ವಿಠಲನ ನಂಬು ||

 

||ಜತೆ||

ಗುರುಭಕ್ತ ಉತ್ತುಂಗ ಗುರುಪಾದ ಸುಮಭೃಂಗ |

ಹರಿನಾಮ ಅಭಿನವ ಪ್ರಾಣೇಶವಿಠಲನ ದಾಸ ||

 

 

 

||ಮಟ್ಟತಾಳ||

 

ಗಾಯತ್ರೀ ಮಂತ್ರ ಪುರಶ್ಚರಣೆಯಲ್ಲಿ | ತಾಯಿಯ ಒಲಿಸಿದನು ಮೌನ ತಪಸಿನಲಿ |

ಬೀಯ ಮಾಡುತಲೊಬ್ಬ ಮರಳುವ ನೀರೆರೆಯೆ | ಘಾಯಗೊಂಡು ತಾನೆ

ಬಹುಪರಿ ಬಳಲಿದನು | ವಾಯುಭಕ್ಷನೊಮ್ಮೆ ಶಿರದಲಿ ಫಣವಿರಿಸೆ | ಕಾಯವ

ಸುತ್ತಿರಲು ಕಂಡು ಜನರು ಬೆದರೆ | ತೋಯಜಾಕ್ಷ ಅಭಿನವ ಪ್ರಾಣೇಶ ವಿಠಲನ

ಪ್ರೀಯ ದಾಸರಿಗುಂಟೆ ನೋವು ಭಯವು ||

 

 

 

 

||ಜತೆ||

 

ಗೋಪಾಲದಾಸರ ಚರಿತೆ ಪಠಿಸೆ ನಿತ್ಯ |

ಗೋಪಾಭಿನವ ಪ್ರಾಣೇಶವಿಠಲ ಒಲಿವಾ ||

 

 

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2025