ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಸುಳಾದಿ (ಕ)

ಕೃಷ್ಣ ಗೋದಾವರೀ ನಂದಿನೀ ನಳಿನೀ ಹೇಮಾವತೀ

 

ಕೃಷ್ಣ ಗೋದಾವರೀ ನಂದಿನೀ ನಳಿನೀ ಹೇಮಾವತೀ |

ಹರಿದ್ವತೀ ಕಾವೇರೀ ಕಪಿಲಾ ಸಿಂಧು ಸರಯು |

ನೇತ್ರಾವತೀ ಕುಮದ್ವತೀ ಭಾಗೀರಥೀ ಭೋಗವತೀ |

ಜಾಹ್ನವೀ ಜಯಮಂಗಲಿ ತ್ರಿಜಗತ್ಪಾವನೀ ವಿಷ್ಣು |

ಪಾದೋದ್ಭವೇ ದೇವಿ ಕೃಷ್ಣವೇಣಿ ಅಘನಾಶಿನೀ |

ಗಂಗಾ ಯಮುನಾ ತ್ರಿವೇಣೀ ದಕ್ಷಿಣ ಪಿನಾಕಿನೀ |

ನರ್ಮದಾ ಸಾವಿತ್ರೀ ಗಾಯತ್ರೀ ಸರಸ್ವತೀ ಸೀತಾ |

ಮಾಲತೀ ಪಂಚಗಂಗೀ ವಾರಾಹೀ ವೈಷ್ಣವೀ ಸುಜ್ಯೋತಿ |

ಶಿವಗಂಗಾ ಪಂಚಗಂಗೀ ತ್ರಿಪದಗಾಮಿನೀ ಬ್ರಹ್ಮಪುತ್ರಾ |

ತುಂಗಭದ್ರಾ ಭೀಮರಥೀ ಗೋಮತೀ ಶರಾವತೀ |

ಸ್ವಾಮಿ ಪುಷ್ಕರಿಣೀ ವರಾಹ ಪುಷ್ಕರಿಣೀ ಪಾಂಡುತೀರ್ಥ |

ಪಾಪನಾಶಿನೀ ಆಕಾಶಗಂಗಾ ಧವಳಗಂಗಾ ಶಾಲ್ಮಲೀ |

ನಾರಾಯಣತೀರ್ಥ ಕೌಮೋದಕೀ ಕಪಿಲತೀರ್ಥ |

ಅಲಕನಂದ ವರದಾ ಪಶ್ಚಿಮವಾಹಿನೀ ಸಿಂಧು |

ನದಿ ಶೋಣನದಿ ಚಂದ್ರಭಾಗಾ |

ಅರ್ಕಾವತೀ ಸುವರ್ಣ |

ಮುಖರೀ ಗೋಗರ್ಭ ಶಿಂಶಾ ಕಾಗಿನೀ ಮಂದಾಕಿನೀ |

ಪ್ರಾತಃಕಾಲೇ ಪಠೇನ್ನಿತ್ಯಂ ದುಃಖದಾರಿದ್ರನಾಶನಂ |

ಸ್ಮರಾಮಿ ನಿತ್ಯಮ್ ಭವದುಃಖದೂರಾ |

ಶ್ರೀ ಕಮಲನಾಥ ವಿಠ್ಠಲೋ ವಿಜಯತೇ ಶುಭಂ |

 

ಕೃಪಾಳೊ ಗುರುವರ ಶ್ರೀ ಪವಮಾನ

 

ಕೃಪಾಳೊ ಗುರುವರ ಶ್ರೀ ಪವಮಾನ |

ಭಾರತಿ ಭಾವಹಾರಿ ಸ್ಮರಹರನುತ |

ದೀನಜನಮಂದಾರ |

ಕಾವಕರುಣಿ ಜೀವವರೇಣ್ಯ |

ದಿವಿಜವೃಂದವಿನುತ ಜಯಶೀಲಾ |

ಪಾವನಾತ್ಮಕ ಪಾಹಿಪಾಹಿ |

ಭಾವಿವಿಧಿ ದುರಿತೌಘಹಾರಿ |

ಆದಿಪುರದಿ ಮೆರೆವ ನಾಥ |

ಸದಯ ಭಕ್ತಜನಕೆ ಶುಭದಾತ |

ಕುಧರಾದಿ ಸುಜಾತ ಭ್ರಾತ |

ಸದಯ ಧರ್ಮಾನುಜಾತ |

ಪ್ರೇಮಶರಧಿ ವಾನರೇಶ |

ಅಮಿತಸತ್ತ್ವಮತಿ ಮಹಿಮ ಯತಿರಾಜ |

ರೋಮರೋಮ ವ್ಯೋಮಕೇಶ |

ಶ್ಯಾಮಸುಂದರ ಮೋಹದ ದಾಸ |

 

||ಧೃವ ತಾಳ||

ಕರಿರಾಜ ಕಂಧರ ರಜತಾದ್ರಿ ಮಂದಿರ | ಉರಗ ಕಟಿ ಬಂಧನ ಮೂಷಿಕಶ್ಯಂದನ

ಗಿರಿರಾಜ ಸುತೆ ಪಾರ್ವತಿ ತನುಮೃದ್ಭವ | ಕರ ಚತುಷ್ಟಯ ದಶನ ಮೋದಕ

ಪಾಶಾಂಕುಶ | ಧರ ಕುಂಕುಮಾಂಬರ ಲಂಬೋದರ | ಶೂರ್ಪಕರ್ಣನೆ

ಮಂಗಳಾಂಗ ಭಸ್ಮಾಂಗನೆ | ಧರಿಪ ಭಂಜನ ಖಳ ಪೂರ್ವ ದೇವತೆಗಳ | 

ಹರಿ ವಿಶ್ವ ಅಭಿನವ ಪ್ರಾಣೇಶ ವಿಠಲನ | ಚರಣ ವಾರಿಜ ಭೃಂಗ

ನತದಯಾಪಾಂಗ ||

 

||ಧೃವತಾಳ ||

ಕಾಮಿತಪ್ರದ ರಘು | ರಾಮ ಚಂದ್ರನ ಪಾದ | ತಾಮರಸಾಳಿ ಶಿಖಿ ಸೋಮಾರ್ಕ

ನಯನನೆ | ಭೀಮ ವಿಕ್ರಮ ಸುತ್ರಾಮಾದಿ ಸುರವಂದ್ಯ | ವ್ಯೋಮ ಕೇಶನೆ ಭವ

ವಾಮ ದೇವ | ಭೂಮಿಜ ವೈರಿ ಸಖ ಭೂಮಿರಥನೆ ನಿನ್ನ | ನಾಮ

ಸುಧೆಯನುಣಿಸು ಕಾಮಾರಿಯೆ | ರಾಮ ನಾಮಾಭಿನವ ಪ್ರಾಣೇಶನ ವಿಠಲನ |

ಯಾಮ ಯಾಮಕೆ ಭಜಿಸಲಾ ಮನ ಪ್ರೇರಿಸು ||

 

||ಆದಿತಾಳ||

ಕಲಿಯುಗ ಸದ್ಧರ್ಮಖಿಲವಾಗಿ ಸಜ್ಜನರು | ತೊಳಲುತ ಬಳಲುತ ಹಲಬು

ತಲಿರುತಿರೆ | ಇಳೆಯೊಳಗುದಿಸಿದೆ ಮುದಮುನಿ ಎನಿಸಿದೆ | ಕಲುಷ

ಮತಗಳನೆಲ್ಲಾ ನೆಲಸಮ ಮಾಡಿದೆ | ಚಲುಗ್ರಂಥ ವಿರಚಿಸಿ ಚಲು

ಪಂಥ ತೋರಿದೆ | ಜಲಧಿ ತಟದಿ ಉಡುಪಿಯ ಸುಕ್ಷೇತ್ರದಿ | ನೆಲಸಿದ

ಸ್ಥಾಪಿಸಿ ಯದುವರ ಕೃಷ್ಣನ | ಚಲುವಭಿನವ ಪ್ರಾಣೇಶ ವಿಠಲನ |

ಪಲ್ಲವ ಪದಾರ್ಚಿಸಿದ ಅಲವ ಬೋಧಾರ್ಯ ||

 

||ಝಂಪೆತಾಳ||

ಕಲಿ ಸಂಕರನ ಪುಟ್ಟು ಕುಂಬಳಕಾಯಿ ಗುರುತು | ಕಲಿಯುಗದೊಳಗೆ ಸೋಹಂ

ಎಂದು ತಿರುಗಿ | ಸಲೆ ಸುಮಾರ್ಗವ ಬಿಡಿಸಿ ಮೋಹಕ ಶಾಸ್ತ್ರವನು | ಇಳಿಯೊಳಗೆ

ಸರ್ವ ಮಿಥ್ಯಾವ ತುಂಬಿದ | ಕುಲವೆಲ್ಲ ಜಾತಿ ಸಂಕರವಾಗಿ ಸ್ವಧರ್ಮ | ವಳಿದು 

ಸುರರಿಗೆ ಹವಿಸ್ಸು ಇಲ್ಲದಿರಲು | ಜಲಜ ಸಂಭವಗೆ ಸುಮನಸರು ಮೊರೆ

ಇಡಲಾಗಿ | ಲಲಿತದಿಂದಲಿ ಹರಿಗೆ ಬಿನ್ನೈಸಲು | ಸುಲಭ ಮಹಾ ಸಿರಿ 

ವಿಜಯ ವಿಠ್ಠಲನು | ಒಲಿದು ಜಯಾತನುಜಗೆ ಕರೆದು ನೇಮಿಸಿದಾ ||

 

 

ಮಹಾಲಕ್ಷ್ಮಿ ಸ್ತೋತ್ರ

ಕ್ಷೀರವಾರಿಧಿ ಸುತೆ ನಾರಾಯಣನ ದಯಿತೆ | ಈರೇಳು ಲೋಕ ಮಾತೆ

ಗತಿ ಪ್ರದಾತೆ | ಶ್ರೀ ರಮಾ ಶ್ರೀಶಾಂತಿ ಕೃತಿ ಜಯಾ ಮಾಯಾ ಲಕ್ಷ್ಮೀ |

ಶ್ರೀರಜ ಶ್ರೀಸೀತೆ ಸುರವಿನುತೆ | ಮೂರು ರೂಪಗಳಿಂದ ಮೂರು ಜೀವಿಗಳಿಗೆ |

ಮೂರು ಗತಿಯನ್ನೀವ ಶ್ರೀ ಭೂ ದುರ್ಗಾ | ನೀರಜ ಅಭಿನವ ಪ್ರಾಣೇಶ ವಿಠ್ಠಲನ |

ಚಾರು ಚರಣಾಬ್ಜಾಳಿ ನಾರಿಕುಲ ಮೌಳಿ ||

 

||ಅಟ್ಟತಾಳ||

ಕನಕ ಸಹೋದರಿ ಭೀಷ್ಮಕ ಕುವರಿಯೆ | ದನುಜನ ಅಣ್ಣನ ಛಲಿಸಿದ ಮಣಿಯಾದೆ |

ಮನುಜನ ವಂಚಿಸಿ ಮುರಹರನೈದಿದೆ | ಧನು ಕೊಂಡು ಶಕ್ರನರನೊಳು ಕಾದಿದೆ |

ದನುಜ ಯುಗದಿ ಮಹಾರಾಷ್ಟ್ರದಿ ನೆಲೆಸಿದೆ | ವನಜಾಕ್ಷ ಅಭಿನವ ಪ್ರಾಣೇಶ

ವಿಠ್ಠಲನ ಗುಣ ರೂಪ ಕ್ರಿಯೆಗಳ ತುತಿಸಿ ಹಿಗ್ಗುವ ದೇವಿ ||

 

||ಜತೆ||

ಕರೆಸಿದೀ ಕವಿ ಎಂದು ಹರಿದಾಸನೆಂತೆಂದು |

ಖರೆಯೆನಿಸು ಅಭಿನವ ಪ್ರಾಣೇಶವಿಠಲ ||

 

 

||ಮಟ್ಟತಾಳ||

ಕೋಲಜಕೂಲದ ಆಲಯವಾಸರಿಂ | ದೇಳನೆ ಯತಿ ಎನಿಸಿ ಕಾಲರಾಮರಾಜ್ಯ |

ಪಾಲಿಸಿ ವಿಭವದಲಿ ಮೂಲರಾಮ ಚರಣ | ಊಳಿಗವನು ಗೈದ ಶೀಲ

ಸುಗುಣಮಣಿಯೇ | ಕಲಾಭಿನವ ಪ್ರಾಣೇಶವಿಠಲ ಪಾದ | ಕೀಲಾಲಜ ಮಧುಪ

ಲಾಲಿಸು ಬಿನ್ನಪ ||

 

||ಮಟ್ಟತಾಳ||

ಕರ್ನಾಟಕದಲ್ಲಿ ಧರಿಸುರವಂಶದಲಿ | ಗಿರಿರಾಜನ ವರದಿ ವೈಣಿಕ ಮನೆತನದಿ |

ಧರೆಯೊಳುದಿಸಿ ಬೆಳೆದ ಶರಧಿಜ ಸಿತನಂತೆ | ಸರ್ವ ಮೂಲ ಗ್ರಹಿಸಿ ಪಂಡಿತ 

ವರನೆನಿಸಿ | ಗುರುವರ ಸುಧಿಯೀಂದ್ರ ಕರ ಕಮಲಗಳಿಂದ | ತುರ್ಯಾಶ್ರಮ ವಹಿಸಿ

ರಾಘವೇಂದ್ರರೆನಿಸಿ | ಹರಿಮತ ಶರನಿಧಿಗೆ ರಾಕಾಬ್ಜನು ಎನಿಸಿ | ದುರುಳ

ಮತೇಂಧನಕೆ ಸುರಮುಖ ನೆನಿಸಿ | ಮೆರೆದನು ಶತಕಾಲ ಧರೆಯೊಳು ವಿಭವದಲಿ |

ಹರಿ ರಘು ಅಭಿನವ ಪ್ರಾಣೇಶ ವಿಠಲನ ಚರಣದೂಳಿಗಕಾರ

ಗುರುಸಾರ್ವಭೌಮ||

 

 

||ಮಟ್ಟತಾಳ||

ಕಡಲಲ್ಲಿ ಪವಡಿಸಿದ ಒಡಿಯ ತಾ ಪೊಡವಿಯಲಿ | ಮೃಡನುತ ಗೋವಿಂದ

ಜಡದ ಹರಿವಾಣದಲ್ಲಿ | ಕಡಲಿ ಸಕ್ಕರೆ ಬೆರೆಸಿ ಲಡ್ಡುಗೆಯ ಮಾಡಿದ | ಸಡಗರದ

ಭಕ್ಷ್ಯ ಪಾಯಸ ಘೃತ ನೀಡೆ | ಒಡಿಯನು ಬ್ರಹ್ಮಾದಿ ಪರಿವಾರ ಸಹಿತುಂಡು |

ಕಡುಗೋಲು ನೇಣು ಪಿಡಿದುಡುಪಿಂದ | ಉಡುರಾಜ ಮುಖ ನಮ್ಮ ವಿಜಯ

ವಿಠಲನು ಬೆಡಗು ಕಾರ್ಯವನ್ನು ನಡೆಸಿದ ಬಗೆ ಕೇಳಿ ||

 

 

||ಮಟ್ಟತಾಳ||

ಕರುಣಿಕ ಮನೆತನದಿ ಹರಸೂರಿನಲ್ಲಿ ಜನಿಸಿ | ಬರಮ ಧರ್ಮಕರ್ಮ

ನಿರುತಾಚರಿಸುತಲಿ | ಹರಿಗುರುಗಳ ಯಜನ ಹವನ ಸು ಬಲಿಹರಣ | ಧರಿಸುರ 

ಸತ್ಕಾರನಿತ್ಯದಿ ಗೈಯುತಾ | ಹಿರಿಯ ಕವನಗಳ ಪದ್ಯ ಸುಳಾದಿಗಳ | ಮುರಹರ

ಚರಿತೆಗಳ ಪಾಡುತ ನರ್ತಿಸುತ | ವರ ತಂಬ್ರೂಹಿಯನು ನುಡಿಸುತ ಭಜಿಸುತ

ಗುರು ಸಮ್ಮಖದಲ್ಲಿ ಹರುಷದಿ ನಲಿಯುತ | ಶರಧರ ಅಭಿನವ ಪ್ರಾಣೇಶವಿಠಲನ

ಕರುಣದಿಂದರುತಿರ್ದಶ್ರೀರಾಮರಾಯ ||

 

||ತ್ರಿವಿಡಿತಾಳ||

ಕೋಸಿಗಿದಾಸರ ಗುರುಜಗನ್ನಾಥರ | ಆ ಶುಭಚರಣಾಬ್ಜಗಳ ಸೇವಿಸಿ |

ವಾಸುದೇವಾಂಕಿತ ಆನಂದ ವಿಠಲೆಂಬ | ಲೇಸಾಗಿ ಹರಿದಾಸಗುರುತು ಪಡೆದು

ಅಶುಕವನ ಸಕೀರ್ತನ ವಿಚಾರಿಸಿ | ಕೀಶ ಮರುತ ಮತ ಗುರುಗಳ ಭಜಿಸಿ |

ಮಾಸಲೇಶ ಅಭಿನವ ಪ್ರಾಣೇಶ ವಿಠಲನ | ದಾಸವರ್ಗದಿ ನಲಿವ ಆನಂದಾರ್ಯ ||

 

||ಅಟ್ಟತಾಳ||

ಕರಣಗಳಲಿ ಹರಿವ್ಯಾಪಕನೆಂತೆಂಬ | ಪರಿಯನ್ನು ತಿಳಿದಿಪ್ಪ ನರನುಡಿದ ವಾಕ್ಯ |

ಪರಮೇಷ್ಠಿ ಮೊದಲಾದ ಸುರರು ಸಹಿತನಾದ | ಸಿರಿಪತಿ ವಹಿಸುವನೆಂದು

ಪೇಳುತಲಿರೆ | ಕರುಣ ಮುನಿಗಳಾದ ಸುರರಿತ್ತ ವರಗಳ | ಹರಿಸತ್ಯ

ಮಾಡುವನೆಂಬದಚ್ಚರವೇನೋ | ಶರಣನ್ನ ಮನೋರಥ ಪೂರ್ಣ ಮಾಡುವುದಕ್ಕೆ | 

ಕೊರತೆ ನಿನಗಾವದು ಕೋಮಲಾಂಗಿಯೇ ನಿನ್ನ | ಚರಣದ್ವಂದ್ವಕೆ ನಮಿಸಿ

ಶೆರಗೊಡ್ಡಿ ಬೇಡುವೆ | ತ್ವರಿತದಿಂದಲಿ ಈ ವರವನ್ನೆ ಪಾಲಿಸು | ಸುರಪಕ್ಷಪಾಲ

ಗುರು ವಿಜಯ ವಿಠಲ ನಿಮ್ಮ | ಕರವಶವಾಗಿಪ್ಪ ಆವಾವ ಕಾಲದಲಿ ||

 

 

||ಅಟ್ಟತಾಳ||

ಕ್ರೋಧವೆಂಬ ಮಹಾಮಾದಿಗ ನನ್ನನ್ನು | ಬಾಧೆಬಡಿಸುತತಿ ಖೇದವ

ಕೊಡುವನು | ಸಾಧು ಜನರಕೂಡ ಕಾದಿಮತ್ಸರಿಸುವೆ | ಮೋದಮುನಿಯ

ಮತದ ಹಾದಿಯ ತೊರೆದೆನಯ್ಯ | ಬೀದಿಯೊಳ್ ಚರಿಸುತ್ತ ಬಳಲುತ್ತಿರುವೆನಯ್ಯ |

ಶ್ರೀದಾಭಿನವ ಪ್ರಾಣೇಶ ವಿಠಲರೇಯ | ಮೋದಮತಿಯನಿತ್ತು ಮೋದಬಡಿಸು

ಜೀಯಾ ||

 

||ಆದಿತಾಳ||

ಕಾಲಯುಕ್ತಾಬ್ಜದಿ ಆಶ್ವೀಜಸಿತದ್ವಿತಿ | ಕಾಲನ ಕರೆಯ ಆಲಿಸಿ ತವಕದಿ |

ನಾಲವತ್ತೆಂಟನೇ ವರುಷದಿ ಹರುಷದಿ | ಶ್ರೀಲಕುಮೀಶನ ಗುರುಪದ ಧೇನಿಸಿ |

ಕಾಲನ ಸ್ಮರಿಸುತ ಲಯವನು ಚಿಂತಿಸಿ | ಬಾಲಕ ಸತಿಸುತರೆಲ್ಲರ ತೊರೆಯುತ |

ಮಾಲ್ಮೇಲ್ಮಟ್ಟದ ಹರಿಶಕಟೇರುತ | ಪಾಲಕ ಅಭಿನವ ಪ್ರಾಣೇಶ ವಿಠಲನ ಮೇಲು

ಸಾಮೀಪ್ಯವನು ಪಡೆದ ಆನಂದ ||

 

||ಜತೆ||

ಕಾಮಾದಿಖಳರಿಂದ ಉಳಿಸಿ ರಕ್ಷಿಸು ದೇವ |

ರಾಮಾಭಿನವಪ್ರಾಣೇಶ ವಿಠಲ ಜೀಯ ||

 

||ಆದಿತಾಳ||

ಕಲಿಯುಗ ಸದ್ಧರ್ಮಖಿಲವಾಗಿ ಸಜ್ಜನರು | ತೊಳಲುತ ಬಳಲುತ ಹಲಬು

ತಲಿರುತಿರೆ | ಇಳೆಯೊಳಗುದಿಸಿದೆ ಮುದಮುನಿ ಎನಿಸಿದೆ | ಕಲುಷ

ಮತಗಳನೆಲ್ಲಾ ನೆಲಸಮ ಮಾಡಿದೆ | ಚಲುಗ್ರಂಥ ವಿರಚಿಸಿ ಚಲು

ಪಂಥ ತೋರಿದೆ | ಜಲಧಿ ತಟದಿ ಉಡುಪಿಯ ಸುಕ್ಷೇತ್ರದಿ | ನೆಲಸಿದ

ಸ್ಥಾಪಿಸಿ ಯದುವರ ಕೃಷ್ಣನ | ಚಲುವಭಿನವ ಪ್ರಾಣೇಶ ವಿಠಲನ |

ಪಲ್ಲವ ಪದಾರ್ಚಿಸಿದ ಅಲವ ಬೋಧಾರ್ಯ ||

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2022