ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಸುಳಾದಿ (ಮ)

||ಮಟ್ಟತಾಳ||

ಮೂರನೇ ಯುಗದಲ್ಲಿ ರುಕ್ಮಿಣಿ ದೇವಿಯಲಿ | ಚಾರುದೇಷ್ಣನೆಂಬ

ನಾಮದಲವತರಿಸಿ | ಗೌರಿವರನ ವರದಿ ಕೊಬ್ಬಿದ ರಕ್ಕಸರ | ಕ್ರೂರಕರ್ಮಿಗಳನು

ಶೌರಿಯಾಜ್ಞೆಯಿಂದ | ಮಾರಿಗುಣಿಸಿ ಭೂಮಿ ಭಾರವನಿಳುಹಿದ | ತಾರಕಾರಿ

ಅನುಜ ನತಜನ ಸುರ ಭೂಜ | ಮಾರಪಿತ ಅಭಿನವ ಪ್ರಾಣೇಶ ವಿಠಲನ |

ಭೂರಿ ಕರುಣಕೆ ಪಾತ್ರಾ ಶೌರಿ ಹರಿಪುತ್ರಾ ||

 

||ತ್ರಿವಿಡಿತಾಳ||

ಮಾಧವನ ದಯದಿಂದ ಆದಿಪೂಜೆಗೆ ಅರ್ಹ | ನಾದ ದೇವನು ನೀನು

ಮೂರ್ಜಗದಿ | ಆ ದೇವ ದನುಜ ಮನುಜರೆಲ್ಲರು ನಿನ್ನ | ಆದಿಯಲ್ಲಿ ನಿನ್ನ

ಪೂಜಿಪರು | ಬಾದರಾಯಣ ಪೇಳ್ದ ಪುರಾಣಂಗಳ ಬರೆದು | ಸಾಧು ಸಜ್ಜನರಿಗೆ

ಮೋದವಿತ್ತೆ | ಶ್ರೀಧವ ಅಭಿನವ ಪ್ರಾಣೇಶವಿಠಲನ | ಪಾದ ಭಜನೆಯಿತ್ತು 

ಮೋದಕೊಡುನಿತ್ಯ ||

 

||ಜತೆ||

ಮೀನಾಂಕ ಜಿತನೆ ಸುಜ್ಞಾನ ಪಾಲಿಸು ಜೀಯಾ | ಮಾನದಭಿನವ ಪ್ರಾಣೇಶ

ವಿಠಲನ ಪ್ರೀಯಾ ||

 

||ಜತೆ||

ಮನದೊಡೆಯನೆ ಎನ್ಮನ ಚಂಚಲವ ಕಳೆ |

ಘನನಿಭ ಅಭಿನವ ಪ್ರಾಣೇಶ ವಿಠಲನ ಸಖನೆ ||

 

 

||ಧೃವತಾಳ||

ಮರುತದೇವನೆ ನಿನ್ನ ಚರಿತೆ ಬಣ್ಣಿಸಲಳವೆ | ಹರ ನೀಲಾಂಬರ ವೀಪರರಿಯರಯ್ಯ |

ಗುರುಗಳ ಕರುಣದಿ ಅರಿತಷ್ಟು ಬಣ್ಣಿಸುವೆ | ಪರಮ ಮಂಗಳ ಮತಿ ಕರುಣಿಸಯ್ಯ

ಹರಿಗೆ ಸಮ್ಮುಖವಾಗಿ ಸ್ವರೂಪ ದೇಹಾದಿದ್ದು | ನಿರುತ ಹಂಸ ಮಂತ್ರ ಜಪಗೈದು

ಶ್ರೀಶನ | ಚರಣದೊಲುಮೆಯ ಪಡೆದ ಗುರುದೇವನೆ | ಸುರರೆಲ್ಲ ಪೂರ್ವದಿ

ವಿಜೋತ್ತುಮರೆಂಬ | ಸ್ಫರ್ಧೆ ನಿನ್ನೊಳು ಶಣಿಸಲು ತವಕದಿ | ಹರಿಯನುಗ್ರಹದಿಂದ 

ಎಲ್ಲರ ಜೈಸುತ | ಸರ್ವಜೀವೋತ್ತಮನೆನಿಸಿ ಮೆರೆದ | ಸುರವರ ಅಭಿನವ ಪ್ರಾಣೇಶ 

ವಿಠ್ಠಲನ | ಚರಣವಾರಿಜ ದೂತ ದೇವ ಹನುಮಂತ ||

 

||ತ್ರಿವಿಡಿತಾಳ||

ಮರುತದೇವನೆ ನಿತ್ಯ ಸರ್ವಜೀವರೋಳಿದ್ದು | ಎರಡಾರು ಒಂಭತ್ತು ಸಾಸಿರದಾರು

ನೂರು | ನಿರುತ ಹಂಸ ಮಂತ್ರ ಜಪಗೈಯುತ | ಎರಡೇಳು ಲೋಕದ ಜೀವರ

ಸಲಹುವ | ಶರಣು ಮಹಾರ್ಣವ ಗಾಳಿದೇವಾ | ಕರುಣಾಳು ಅಭಿನವ ಪ್ರಾಣೇಶ

ವಿಠಲನ | ಚರಣದಾಸ್ಯವ ನಿತ್ಯ ನೀಡು ಗುರು ಮಧ್ವ ಮುನಿಪ ||

 

 

||ಅಟ್ಟತಾಳ||

ಮಾಯಿಯಮನೆ ಮುಂದೆಮದಕರಿಯಾಗಿದ್ದು | ಆಯುಷ್ಯಾಭಿವೃದ್ಧಿ ಸುಖ

ಬಡುವದಕಿಂತಾ | ನಾಯಿಯ ಮರಿಯಾಗಿ ಮಧ್ವಮತದವರ | ಕಾಯಿದುಮನೆ

ಮುಂದೆ ಇಪ್ಪಕ್ಷಣವೇ ಲೇಸು | ಭೂವ್ಯೋಮ ಪಾತಾಳ ದೊಳಗಿದು ಸಿದ್ಧವು | ರಾಯ

ಧರ್ಮಜ ಮಿಕ್ಕಹರಿದಾಸರ ನೋಡೆ | ಶ್ರೀಯರಸನೇ ಪರನೆಂದು ಪೋದರು ಗತಿಗೆ

ವಾಯು ಮತವ ಬಿಟ್ಟು ಅನ್ಯಮತವಸಾರೆ | ತಾಯಿಯ ಜರಿದು

ಶ್ವಬಚಿಗೆರಗಿದಂತೆ ನೀಯಂತೆ ನಾಮ ಶ್ರೀ ವಿಜಯ ವಿಠ್ಠಲಗೆ | ಮಾಯಿ

ಮತದವರು ಆಗರು ಕಾಣೋ ||

 

||ತಾಳ ಆದಿ||

ಮುರಹರನೆ ನಿನ್ನ ಸ್ಮರಣೆಯ ಮರೆತೆನು | ಹರಟೆಯೊಳಗೆ ದಿನ ಕಳೆದೆನು ಕಳೆದೆನು |

ದ್ವಿರದಿಯಂತೆ ಮದಭರಿತನು ಸದಾ | ಧರಿಯೊಳು ಚರಿಸುವ ಪರಗತಿ ಗಾಣದೆ

ಕರುಣಿಸು ಕರುಣಿಸು ಕರಪಿಡಿ ರಕ್ಷಿಸು | ಹರಿಯಭಿನವಪ್ರಾಣೇಶ ವಿಠಲಪಾಹಿ ||

 

||ಜತೆ||

ಮೌನಿ ಸುಜಯೀಂದ್ರ ತೀರ್ಥಗೊಲಿದ ಯತಿನಾಥ |

ಮಾನದಭಿನವ ಪ್ರಾಣೇಶ ವಿಠಲನ ದೂತ ||

 

ಶ್ರೀ ವಾದಿರಾಜರ ಸ್ತೋತ್ರ ಸುಳಾದಿ

||ಧೃವತಾಳ||

ಮಾಧವನಂಘ್ರಿ ನಿತ್ಯ ಮೋದದಲ್ಲಿ ಭಜಿಪ | ಸಾಧು ಸನ್ಮುನಿವರ್ಯ ಸಮ್ಮೋದ

ತೀರ್ಥರಪಾದ | ಸಾದರದಿಂದ ಭಜಿಸಿ ಮೇದಿನಿಗೆ ಭಾರ | ವಾದ ಮಾಯಾ

ವಾದಿಗಳ ಗೆದ್ದ | ವಾದಿರಾಜರ ಮಹಿಮೆ ವರ್ಣಿಸಲಳವಲ್ಲಾ | ಮಾಧವ ವೇದ 

ವೇದ್ಯ ವಿಜಯ ವಿಠಲ ತಾನು | ಆದರದಿಂದವರ ಭುಜದಿ ಹಯವಕ್ತ್ರನಾಗಿ |

ಪಾದವನ್ನು ಇಟ್ಟು ಸ್ವಾದುವಾದ ಕಡಲಿ ಹೂರಣವನುವುಂಡ |

ಶ್ರೀಧರನ ಮಹಿಮೆ ಸಾಧು ಜನರು ಕೇಳಿ ||

 

||ಆದಿತಾಳ||

ಮನ ಶುದ್ಧರಾಗಿ ಮಾಧವನಂಘ್ರಿಯನು | ದಿನ ದಿನದಲ್ಲಿ ನಂಬಿ ಕೊಂಡಿಪ್ಪರೆ

ಅನವರತಾನಂದ ಗುರು ಮಧ್ವರಾಯರ ದಿವ್ಯ | ವನಜ ಪಾದಂಗಳ ಸ್ಮರಿಸಲು |

ಹನುಮೇಶ ನಮ್ಮ ಸಿರಿ ವಿಜಯ ವಿಠಲ ತಾನು | ಮುನಿವಾದಿರಾಜರ 

ಸಾಮಾನ್ಯರೆಂತೆಂದು | ಎಣಿಸಿದವರನ್ನು ಘನವಾಗಿ ಶಿಕ್ಷಿಪ | ಇನತನುಜೋದ್ಭವ

ಕೋಪದಿಂದ ವಾದಿರಾಜರ ಮಹಿಮೆ | ಯನು ಕೊಂಡಾಡಿ ಅನುದಿನ ಸುಜನರು ||

 

||ಜತೆ||

ಮೋದ ತೀರ್ಥರ ಮತ ಸೇನಾಧಿಪತಿಯಾದ |

ವಾದಿರಾಜ ಮುನಿಯು ವಿಜಯ ವಿಠಲನ ದಾಸ ||

 

ರಾಗ ನಾಟಿ -ಧೃವತಾಳ

ಮಧ್ವ ವಲ್ಲಭ ಜಯ ಸದ್ವೈಷ್ಣವರ ಪ್ರೀಯಾ | ಅದ್ವೈತ ಮಹಿಮಾ ಜಗದ್ವಿಲಕ್ಷಣ

ರಾಮಾ | ಸದ್ವರ್ಣ ಭೂತ ಭವಿಷ್ಯದ್ವರ್ತಮಾನ ಬಲ್ಲ | ವಿದ್ವಾಂಸರೊಡಿಯಾಘ

ಪ್ರದ್ವಂಸ ಅಪ್ರಮೇಯ | ಸದ್ವೀರ ಏಕಮೇವ ದ್ವಿತೀಯಾ ಪಾ | ದದ್ವಯನೆನಿನಸುವ

ಸದ್ವಾಣಿವುಳ್ಳ ಗು |ರುದ್ವಾರಾ ಸಾರಿದವರ ಹೃದ್ವನಜದಲ್ಲಿದ್ದು | ತದ್ವಿಚಾರ ನಡೆಸುವ

ತದ್ವಿಪರೀತ ಕಾರ್ಯಾ | ಅಧ್ವರ ಭೋಕ್ತ ನಮ್ಮ ವಿಜಯವಿಠಲರೇಯಾ ಮ|

ರುದ್ವಂಶರಿಂದ ನಿತ್ಯ ಸದ್ವಾಲಗ ಕೊಂಡ ಮೂರ್ತಿ ||

 

||ಅಟ್ಟತಾಳ||

ಮೂಕಬಧಿರರಂತೆ ಲೋಕಕ್ಕೆ ತೋರುತ್ತ | ಶ್ರೀಕರ ರೂಪವ ಹೃದಯದಿ ನಿಲಿಸುತ |

ಮಾಕಳತ್ರನ ನಾಮ ವದನದಿ ಪಾಡುತ್ತ | ಕೋಕನದಾಕ್ಷನ ನೈವೇದ್ಯ ಭುಂಜಿಸತ್ತ |

ಶ್ರೀಕರ ನಿರ್ಮಾಲ್ಯ ಶಿರದೊಳು ಧರಿಸುತ್ತ | ಶ್ರೀ ಕಥಾಸಾರವಗರೆದ ಜಗನ್ನಾಥ |

ಆಕೆವಾಳರ ಹೆಗ್ಗದವ ಕಾಯುತಲಿಹ | ಲೋಕೇಶದಾಸನೆ ಕವಿಕುಲ ತಿಲಕನೆ |

ಮಾಕರ ಅಭಿನವ ಪ್ರಾಣೇಶ ವಿಠಲನ | ಏಕಾಂತದಲಿ ಭಜಿಪ ಭಾಗ್ಯಕೊಡು

ಪ್ರಭುವೆ ||

 

||ಜತೆ||

ಮಾ ಮನೋಹರದಾಸ ಶ್ಯಾಮಸುಂದರಧೀಶ |

ರಾಮಾಭಿನವ ಪ್ರಾಣೇಶ ವಿಠಲ ದಾಸ ||

 

||ಮಟ್ಟತಾಳ||

ಮಿನುಗುವ ಕಂಠದಲಿ ಎರಡು ದಳದ ಕಮಲ | ಕರ್ಣಿಕ ಮಧ್ಯದಲ್ಲಿ ಸತಿ

ಸಹಿತಲಿದ್ದು | ವನಜಾಸನ ವಿಡಿದು ತೃಣ ಜೀವರ ತನಕ | ತನುಗಳಿಗೆ ವಿಹಿತವಾದ

ಶಬ್ದಗಳನ್ನು ನೀನೇವೆ ಮಾಡಿ ಅವರವರಿಗೆ ಕೀರ್ತಿ | ಘನತೆಯನೆ ಇತ್ತು

ಕಾಣಿಸಿಕೊಳ್ಳದಲೆ | ಮನುಜಾಧಮರಿಗೆ ಮಾಯವ ಮಸಗಿಸಿ | ಕೊನೆಗುಣದವರನ್ನ

ನಿತ್ಯ ದುಃಖಗಳಿಂದ | ದಣಿಸುವಿ ಪ್ರಾಂತದಲಿ ಕಡೆ ಮೊದಲಿಲ್ಲಾದೆ | ದನುಜ

ಮರ್ದನ ಗುರುವಿಜಯವಿಠ್ಠಲರೇಯ | ನಿನಗಿತ್ತನು ಈ ಪರಿ ಸ್ವತಂತ್ರ

ಮಹಿಮೆಯನು ||

 

||ತ್ರಿವಿಡಿತಾಳ||

ಮೂರು ಭ್ರಮೆಗಳಿಂದ ಮೂರು ಈಷಣದಿಂದ | ಮೂರೆರಡು ಖಳರಿಂದ

ನೊಂದೆನಯ್ಯಾ | ಮೂರೈದು ದ್ವೀಪಗಳು ಮೂರಾರು ವಿಷಗಳು | ಮೂರು

ಕಾಲಗಳಲ್ಲಿ ತೋರಿಪವು | ಅರಲಾರೆನು ದೇವಘೋರಸಂತಾಪವ |

ಈರನಿಲಯಾಭಿನವಪ್ರಾಣೇಶವಿಠ್ಠಲ ಪಾಹಿ ||

 

||ಅಟ್ಟತಾಳ||

ಮೂರು ಬಿಡಿಸಿ ಗಡ ಮೂರು ತಿಳಿಪುದಯ್ಯಾ | ಮೂರು ಕಳೆದು ಗಡ ಮೂರು

ಪಾಲಿಸು ಜೀಯ | ಮೂರೆರಡೋಡಿಸು ಮೂರು ಮೂರು ಕೊಡು | ಮೂರೈದು

ಮದಗಳ ಮೂರಾಬಟ್ಟಿ ಮಾಡು | ಮೂರೈದು ಅಕ್ಷರ | ಮೂರುತಿ ತೋರಿಸು |

ಮೂರಾರು ವೇಷಗಳ ಮಾರಿಗೆವಪ್ಪಿಸು | ಮೂರಾರು ಭಕುತಿಯ ಚಾರು ಸಂಪದ

ಕೊಡು | ಮೂರರದಾರಿಯ ತೋರಿಸು ಮಹಾರಾಯ | ಮೂರು ಮೂರ್ತ್ಯಭಿನವ

ಪ್ರಾಣೇಶವಿಠ್ಠಲ ||

 

||ಆದಿತಾಳ||

ಮಂದರೋದ್ಧರ ನಿನ್ನ ಪೊಂದಿದ ದಾಸರ | ಸಂದಣಿಯೊಳಗಿಟ್ಟಾನಂದವ

ನೀಡಯ್ಯ | ಕಂದುಕೊರಳನುತ ಗಂಧವಾಹನಪಿತ | ತಂದೆ ವೆಂಕಟ ಭವಬಂಧನ

ಬಿಡಿಸಯ್ಯ | ಸಿಂಧುಶಯ್ಯಭಿನವಪ್ರಾಣೇಶ ವಿಠಲರಾಯ ||

 

 

||ಅಟ್ಟತಾಳ||

ಮೈಲಿಗೆಯವ ನಾನಾದಡೆ ಜಗದಯ್ಯಾ | ಅಯ್ಯಾನೆ ನಿನ್ನ ಮಂಗಳವಾದ ನಾಮಕ್ಕೆ |

ಮೈಲಿಗೆ ಉಂಟೆನೋ ಮದನಾರಿಯ ಒಡೆಯಾ | ಮೈಲಾರಿ ಜೊಕ್ಕನು ಆವ 

ಕುಲದವ | ಅಯ್ಯಾ ವಿಜಯವಿಠಲಾ ಅನುದಿನ ನೀನೊಲಿಯೆ | ವೈವಾದು

ಸದ್ಗತಿಗೆ ಒಂದೆ ನಾಮವ ನೆನೆಯೆ ||

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2022