ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಸುಳಾದಿ (ದ)

 

 ||ತ್ರಿವಿಡಿತಾಳ||

ದಳ ಅಷ್ಟ ಉಳ್ಳ ರಕ್ತಾಂಬುಜದ ಮಧ್ಯ | ಪೊಳೆವ ಕರ್ಣಿಕೆಯಲ್ಲಿ ಶೋಭಿಸುವ |

ಮೂಲೇಶನ ಪಾದ ಪಂಕಜದಲಿ ನಿಂದು | ಸಲೆ ಭಕುತಿಯಿಂದ ಭಜಿಸುವ ನಿನ್ನ

ಚರಣ | ಮೂಲದಲ್ಲಿ ಜೀವ ಆಶ್ರಯಿಸಿ ಯಿಪ್ಪನಾಗಿ | ಸ್ಥಳವ ಸೇರಿಪ ಭಾರ

ನಿನ್ನದಯ್ಯಾ | ಒಲ್ಲೆನೆಂದರೆ ಬಿಡದು ಭಕುತರ ಅಭಿಮಾನ | ಒಲಿದು ಪಾಲಿಸಬೇಕು

ಘನ ಮಹಿಮಾ | ಖಳದರ್ಪ ಭಂಜನ ಗುರು ವಿಜಯ ವಿಠ್ಠಲರೇಯ | ಒಲಿವ

ನಿನ್ನಯ ಕೃಪೆಗೆ ವಿಮಲ ಚರಿತ ||

 

||ಆದಿತಾಳ||

ದರುಶನ ಗ್ರಂಥವರಚಿಸಿ ಸುಜನರ ಪಾಲಿಸಿ | ಮರುತ ಮತದ ಬಿರುದೆತ್ತಿದ

ಮಹಾಯತಿ | ಸರಿಗಾಣೆ ನಿಮಗೆಲ್ಲಿ ವರ್ಣಿಸಲೆನ್ನಳವೆ | ದುರುಳರ ಗಂಟಲ ಗಾಣ

ವಿದ್ಯಾ ಪ್ರವೀಣ | ನೆರೆ ನಂಬಿದವರಿಗೆಲ್ಲ ಮನೋವ್ಯಥೆಗಳ ಬಿಡಿಸಿ | ವರ ಸುಭಕುತಿ

ಜ್ಞಾನ ವಿರಕ್ತಿ ಮಾರ್ಗವ ತೋರಿಸಿ | ಪೊರೆವ ತತ್ವದ ವನಧಿ ಪೊಡವಿಯೊಳಗೆ |

ಸುರ ನರೋರಗಾದಿಗೆ ಗುರುವೆ ಪರಮ ಗುರುವೆ | ಸರಸ ಸದ್ಗುಣ ಸಾಂದ್ರ ವಿಜಯ

ವಿಠಲರೇಯನ | ಚರಣವ ನಂಬಿದ ಪ್ರಧಾನ ವಾಯುದೇವಾ ||

 

||ಧೃವತಾಳ||

ದುರ್ಗಾ ದುರ್ಗೆಯ ಮಹ ದುಷ್ಟ ಜನ ಸಂಹಾರೆ | ದುರ್ಗಾಂತರ್ಗತ ದುರ್ಗೆ

ದುರ್ಲಭೆ ಸುಲಭೆ | ದುರ್ಗಮವಾಗಿದೆ ನಿನ್ನ ಮಹಿಮೆ ಬೊಮ್ಮ ಭರ್ಗಾದಿಗಳಿಗೆಲ್ಲ

ಗುಣಿಸಿದರೂ | ಸ್ವರ್ಗಭೂಮಿ ಪಾತಾಳ ಸಮಸ್ತ ವ್ಯಾಪುತದೇವಿ | ವರ್ಗಕ್ಕೆ ಮೀರಿದ

ಬಲು ಸುಂದರೀ | ದುರ್ಗಣದವರ ಬಾಧೆ ಬಹಳವಾಗಿದೆ ತಾಯಿ | ದುರ್ಗತಿ ಹಾರೆ

ನಾನು ಪೇಳುವದೇನು | ದುರ್ಗಂಧವಾಗಿದೆ ಸಂಸ್ಕೃತಿ ನೋಡಿದರೆ ನಿರ್ಗಮ ನಾ

ಕಾಣೆನಮ್ಮ ಮಂಗಳಾಂಗೆ | ದುರ್ಗೆ ಹೇ ದುರ್ಗೆ | ಮಹಾ ದುರ್ಗೆ ಭೂ ದುರ್ಗೆ

ವಿಷ್ಣು | ದುರ್ಗೆ ದುರ್ಜಯೆ ದುರ್ದಷೆ ಶಕ್ತಿ | ದುರ್ಗ ಕಾನನ ಗಹನ ಪರ್ವತ

ಘೋರ ಸರ್ಪ ಗರ್ಗರ ಶಬ್ಧ ವ್ಯಾಘ್ರ ಕರಡಿ ಮೃತ್ಯು | ವರ್ಗ ಭೂತ ಪ್ರೇತ ಪೈಶಾಚಿ

ಮೊದಲಾದ | ದುರ್ಗಣ ಸಂಕಟ ಪ್ರಾಪ್ತವಾಗೆ | ದುರ್ಗಾ ದುರ್ಗೆ ಎಂದು ಉಚ್ಛ

ಸ್ವರದಿಂದ | ನಿರ್ಗಳಿತನಾಗಿ ಒಮ್ಮೆ ಕೂಗಿದರೂ | ಸ್ವರ್ಗಾಪವರ್ಗದಲ್ಲಿ 

ಹರಿಯೊಡನೆ ಇದ್ದರು | ಸುರ್ಗಣ ಜಯ ಜಯವೆಂದು ಪೊಗಳುತಿರೆ ಕರ್ಗಳಿಂದಲಿ

ಎತ್ತಿ ಸಾಕುವ ಸಾಕ್ಷಿ ಭೂತೆ ನೀರ್ಗುಡಿದಂತೆ ಲೋಕಲೀಲೆ ನಿನಗೆ | ಸ್ವರ್ಗಂಗಾ

ಜನಕ ನಮ್ಮ ವಿಜಯ ವಿಠಲನಂಘ್ರೀ | ದುರ್ಗಾಶ್ರಯ ಮಾಡಿ ಬದುಕುವಂತೆ

ಮಾಡು ||

 

||ಧೃವತಾಳ||

ದುರ್ಮತವನು ನೆಚ್ಚಿ ಕರ್ಮಕ್ಕೆ ಬೀಳದಿರು | ನಿರ್ಮಾಣವನು ವೇದವ್ಯಾಸದೇವನು

ದುಷ್ಕರ್ಮಿಗಳಿಗೆ ನಿತ್ಯ ತಮವಾಗಲಿಬೇಕೆಂದು | ಪೇರ್ಮೆಯಿಂದಲಿ ರಚಿಸಿ ತಾಮಸ

ಪುರಾಣ | ದುರ್ಮತಿಗಳಿಗೆ ರುಚಿಕರವೆನಿಸಿದರು | ಧರ್ಮ ಸಾಧನವೆಂದು ಮಾಯಿ

ಮತವ ಭಜಿಸೆ | ಧರ್ಮರಾಯ ಅವರ ಚರ್ಮವ ಸುಲಿವನು | ದುರ್ಮನುಷಿ

ನಾಮ ವಿಜಯ ವಿಠ್ಠಲಗೆ ಈ | ಕರ್ಮವೊಪ್ಪಿಸಸಲ್ಲಾ ವಿಬುಧರ ಮತವಂತಾ ||

 

 

||ಜತೆ||

ದಾಸ್ಯತನದ ರುಚಿ ಶಾಶ್ವತ ಕರುಣಿಸು |

ಮೇಷಾಭಿನವ ಪ್ರಾಣೇಶವಿಠಲನ ದಾಸ ||

 

 

||ಧೃವತಾಳ||

ದುರಿತಕದಳಿ ವನದ್ವಿರದಿ ಮಂತಿಪ್ಪನು | ಪರಮತ ಶರಧಿಗೆ ಕರಿರಾಜನೆನಿಸುವ |

ಮರುತ ಮತಾಂಬುಧಿ ಪರಿಪೂರ್ಣ ಹಿಮಕರ | ಧರಣಿದೇವರ ಸೇವೆ | ಹರುಷದಿ

ಕೊಳ್ಳುತವರು | ದ್ಧರಿಸುವ ಕರುಣಾಳು ಗುರುರಾಜ ಪವಿತೇಜ | ಸುರರಾಜನಂತೆ

ಭೂ| ಸುರ ಗಢಣದಿ ಮೆರೆವ | ಕರಿ ಚರ್ಮಾಂಬರ ಪ್ರೀತ ವರದೇಂದ್ರನೆ | ನಿರುತ

ಸದ್ಧರ್ಮ ಮರ್ಮವರಹುವ ಯತಿನಾಥ | ಭರಿತ ಸದ್ಭಕ್ತಿಯಿಂದ ಸ್ಮರಿಸುವ

 

||ಜತೆ||

ದುರ್ಗೆ ಹಾ ಹೇ ಹೊ ಹಾ ದುರ್ಗೆ ಮಂಗಳ ದುರ್ಗೆ |

ದುರ್ಗತಿ ಕೊಡದಿರು ವಿಜಯ ವಿಠಲನ ಪ್ರೀಯೇ ||

 

||ಆದಿತಾಳ||

ದಾಸರ ಮಾತಿನ ಮರ್ಮವನರಿಯುತ | ಭೂಸುರರೈಜಿಯ ರಾಮಾಚಾರ್ಯರು |

ಕಾಷಾಯಾಂಬರ ಧರಿಸುತ ಬಿಂಬೋ | ಪಾಸನೆ ಗೈದಪರೋಕ್ಷವ ಪಡೆದರು |

ದಾಸರ ಸಂಗಡ ನರ್ತಿಸಿ ನಲಿದರು | ವಾಸುದೇವ ವಿಠ್ಠಲನ ಭಜಿಸಿದರು |

ವಾಸುದೇವ ಹರಿ ರೂಪವ ಕಂಡರು | ತೋಷದಿ ನಲಿದರು ತೃಪ್ತಿಯ ಪಡೆಯುತ |

ಪಾಶಮಂಥ ಧರ ದೇವನ ಕಾಣಲು ದಾಸರು ಹೊರಟರು ಉಡುಪಿಯ ಯಾತ್ರೆಗೆ |

ದೋಷ ಮಂಡಗದ್ದಿ ತಸ್ಕರ ಭೀಮನು ಆ ಸುಯಾತ್ರಿಕರ ಸುಲಿಯಲು ಬರೆ |

ಪ್ರಾಣೇಶನ ದಯದಿಂದ ರಕ್ಷಿಸಿ ವುಳುಹಿದ | ಶೇಷಾನುಜ ಗೋಪಾಲ

ಮೂರ್ತಿಯನು | ತೋಷದಿ ವಂದಿಸಿ ಸೇವೆಯ ಸಲ್ಲಿಸಿ | ದೇಶಿಕರಷ್ಟರ ದರ್ಶನ 

ಪಡೆಯುತ | ರಾಶಿ ಜಲದ ಸ್ನಾನ ಪೂರೈಸುತ | ವಾಸುದೇವ ಪುರ ಯಾತ್ರೆಯ

ಗೈಯುತ | ಭಾಸುರ ಚರಿತರು ಮರಳುತ ಬಂದರು | ದೇಶಿಕ ವರ ಮಂತ್ರಾಲಯ

ಪ್ರಭುಗಳ | ಮೀಸಲಪ್ಪಣೆಯ ಮೇರೆಗೆ ಗೌಡನ ವಾಸಕೆ ಬಂದರು | ಲಕ್ಷ

ಭೋಜನದ ಆಸೆ ಸಲ್ಲಿಸಿದರು ತೋಷವಗರೆದರು ಶೇಷಗಿರೀಷನ ಕಂಡು

ತುತಿಸಿದರು | ವಾಸಕೆ ತಿರುಗುತರೆಲ್ಲರ ಕರೆಸುತ ಆ ಸಮೀರಮತ ಮರ್ಮವ

ತಿಳಿಸುತ | ಕಾಶ್ಯಪ ಚಿತ್ರಾ ಮಕರಾಷ್ಟಮಿ ಪರ | ವಾಸರ ಮಂದದಿ ಲಯವನು

ಚಿಂತಿಸಿ | ವಾಸುದೇವ ಮುರ ಮರ್ದನ ಕಳುಹಿದ | ಕಾ ಶಕಟನ್ನೇರುತ ನಡೆದರು |

ಭೂಸುರ ಜನಗಣ ಜಯ ಘೋಷದವರ | ವಾಸವ ನಗರದ ದುಂದುಭಿ ಸುಸ್ವರ |

ಆ ಸುಗಂಧ ಬೀರುವ ಸುಮ ವರ್ಷದಿ | ದಾಸರ ಮೇಳದ ಭಜನೆ ನರ್ತನದಿ |

ಶ್ರೀಶಾಭಿನವ ಪ್ರಾಣೇಶವಿಠಲನ ಪುರಕೆ ||

 

||ಆದಿತಾಳ||

ದೊಡ್ಡವರನು ಕಂಡು ದ್ವೇಷಿಸುವೆನು ನಾನು | ಮಡ್ಡ ತನದಿ ಮತ್ತಿಸುವೆ ಸಮರನು |

ದಡ್ಡರನೋಡ್ಯಪಹಾಸಗೈಯುವೆನು | ಹೆಡ್ಡನಾಗಿ ಮದ ಜಂಭದಲನುದಿನ |

ದೊಡ್ಡವರನುನಿಂದಿಸುತಾಮಯವನು | ಗುಡ್ಡದ ನೂರ್ಮಡಿಗಳಿಸಿರುವೆನು ನಾನು |

ಕಡ್ಡಿಯಂದದಿ ಮಾಡು ಕ್ರವ್ಯಾದ ತಮಭಾನು | ವಿಡ್ಡೂರಗಳ ಕಳೆದು ರಕ್ಷಿಸು

ಸುರಧೇನು | ಅಢ್ಯಭಿನವ ಪ್ರಾಣೇಶ ವಿಠ್ಠಲ ಪಾಹಿ ||


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2022