ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಸುಳಾದಿ (ನ)

ಅಟ್ಟತಾಳ

ನಿತ್ಯಸಂಸಾರಿಗೆ ಅತ್ಯಂತ ದೂರವು

ದೈತ್ಯಗಂತು ಸ್ವಪ್ನದಲ್ಲೂ ನಾಸ್ತಿ

ಸತ್ವಜೀವರಿಗೆ ಹರಿ ಕರುಣವನೆ ಮಾಡಿ

ತತ್ವಾಭಿಮಾನಿ ದೇವತೆಗಳಿಗೆ ಪೇಳಿ

ಮೊತ್ತ ದೋಷಗಳ ಕರಿಯಾಧೀನ ಮಾಡಿ

ಉತ್ತಮ ಕರ್ಮಗಳ ಮಾಡಿಸಿ

ಸತ್ಯಲೋಕಾಧಿವನ ಕಲ್ಪಾಂತರದಲ್ಲಿ

ಸತ್ವಜೀವಿಗಳು ವಿರಜೆಯಲ್ಲಿ ಬೊಮ್ಮನ ಸಹ

ಮುಕ್ತಿಯೈದುವರು ಶಕ್ತ್ಯಾನುಸಾರದಿಂದ

ಸತ್ಯಸಂಕಲ್ಪ ಗೋಪಾಲವಿಠಲನ್ನ

ಭೃತ್ಯರೆ ಧನ್ಯರೊ ಉತ್ತಮೋತ್ತಮರು

 

||ಆದಿತಾಳ||

ನಿಟಿಲನಯನ ಸುರ ಕಟಕಾದ್ಯಪನೆ | ಕುಟಿಲವ ಬಿಡಿಸಯ್ಯ ಪಟುತರ ದೇವನೆ |

ಖಟವಪಾಣಿ ಧೂರ್ಜಟಿ ಮೃಗಲಾಂಛನ ಕಠಿಣಭವಾಂಬುಧಿ ಘಟಜ

ಭಕ್ತಾಮಯ | ಅಟವಿ ಧನಂಜಯ ಸ್ಫಟಿಕ ಸನ್ನಿಭಕಾಯ | ಚಟುಲಭಿನವ

ಪ್ರಾಣೇಶ ವಿಠಲನ ಧ್ಯಾನ | ಘಟಕ ಘಟಕದಲ್ಲಿ ಘಟನೆ ಮಾಡಿಸೋ ಶಿವನೇ ||

 

 

||ಅಟ್ಟತಾಳ||

ನಿತ್ಯ ನೂತನವಾದ ಮಹಿಮೆಯ ತೋರುವ | ಅತ್ಯಂತ ವಿಸ್ಮಯಕಾರಿ ಪವಾಡವ |

ಸತ್ಪಥ ತೋರುವ ಭೃತ್ಯರ ಸಲಹುವ | ಕೃತ್ತಿವಾಸಯುತ ಕಿತ್ತೂರ ರಾಜನ |

ಕೃತ್ಯಾಭಿಲವ ಮನ್ನಿಸಿ ಕರುಣದಿ | ಸತ್ಯಧರ್ಮ ಸನ್ಮಾರ್ಗವ ತೋರಿದ | ಮತ್ತ ಯವನ

ಭೂಪ ಆವಿ ಫಲವನೀಯೇ | ತತ್ತಕ್ಷಣ ಫಲ ಪುಷ್ಪವ ಮಾಡಿ ತೋರಿಸಿ |

ಮತ್ತರಿಗಾಶ್ಚರ್ಯ ತೋರಿದ ಭುವಿಯೊಳು | ಮತ್ತವಿಳಿದು ಭೂಪ ಪಾದ

ಕ್ರಾಂತನಾಗಿ | ಮತ್ತರ ಮನ್ನಿಸಿ ಮಂಚಾಲೆ ಪಡೆದರು | ಚಿತ್ತಜಪಿತ ದೂತ ಗುರು 

ರಾಘ್ವೇಂದ್ರರ | ಉತ್ತಮ ಮಹಿಮೆಗೆ ಎಣೆಗಾಣೆ ನಮೋ ನಮೋ | ಸತ್ಯಾಭಿನವ

ಪ್ರಾಣೇಶ ವಿಠಲನ | ನಿತ್ಯನೂತನ ಮಹಿಮೆ ತೋರಿ ಮೆರೆದ ಗುರುವೆ ||

 

||ಜತೆ||

ನರಹರಿತೀರ್ಥರಿಗೆ ಒಲಿದ ವಿಜಯವಿಠಲ |

ಸ್ಮರಿಸಿದವರ ಕಾವಾ ನಿತ್ಯ ರಘುರಾಮಾ ||

 

 

||ಮಟ್ಟತಾಳ||

ನರಸಂಬಂಧಿಕ ಪ್ರಾಂತ ಬಲ್ಲಟಗಿಗ್ರಾಮ | ಧರಿಸುರ ಮನೆತನದಿ ದೈವಜ್ಞರ

ಗೃಹದಿ | ಧರೆಯೊಳು ದಿಸಿ ಬೆಳೆದ ಪೆರೆಶುಕ್ಲನ ತೆರದಿ | ಹರಿಗುರು ಕೃಪೆಯಿಂದ

ಜಗಪತಿ ದಯದಿಂದ | ವರ ಕವಿಯೆಂದೆನಿಸಿ ಪ್ರಾಂತದಿ ರಾಜಿಸಿದ | ಮುರಹರ

ಅಭಿನವ ಪ್ರಾಣೇಶ ವಿಠಲನ | ಚರಣ ವಾಙ್ಮಯ ಸೇವೆ ಗೈದ ಗುರುದೇವ ||

 

 

||ಆದಿತಾಳ||

ನಿತ್ಯವು ಉದಯಕೆ ಸ್ನಾನ ಸಂಧ್ಯಾಜಪ ಸ್ತೋತ್ರಪಠಣ ರಾಘವ ಹರಿ ಅರ್ಚನ |

ನಿತ್ಯವು ಗುರು ವರದೇಂದ್ರರ ಪೂಜನ | ಉತ್ತಮ ಭೂಸುರರೊಡನೆ ಸುಭೋಜನ |

ಸತ್ಕಥಾಲಾಪನ ಹರಿ ಗುಣಕೀರ್ತನ | ಸತ್ಯರಮಣನ ನಾಮ ಕಥಾಮೃತ | ನಿತ್ಯವು

ಗರೆಯುತ ಭೃತ್ಯರಿಗುಣಿಸುತ | ಪೃಥ್ವಿಯೊಳಿರುವುದು ಸಾಕೆಂದು ರೌದ್ರಿಯ |

ವತ್ಸರ ಮಾಘ ಅಮವಾಸ್ಯೆ ಚಂದ್ರದಿನ | ದ್ವಿತ್ ಪ್ರಹರದಿ ಜವ ಲಯವನು ಚಿಂತಿಸಿ

ನೆತ್ತಿದ್ವಾರದಿಂದ ಹರಿ ಶಕಟೇರುತ | ಸತ್ಯ ಅಭಿನವ ಪ್ರಾಣೇಶ ವಿಠಲನ

ಸತ್ಯಪುರವನು ಪೊಕ್ಕ ನಿತ್ಯ ದಾಸಾರ್ಯ ||

 

 

||ಅಟ್ಟತಾಳ||

ನಿರಯ ನಗರ ಪೊಕ್ಕು ನಿರಯ ಪತಿಯ ಕಂಡು | ಹರಿದಾಸ ಮೋಹನ್ನ ಕರೆತಂದ 

ಧೀರನೆ | ಕರುಣಿಕ ಛಾಗಿ ಕೇಶವರಾಯ ಪುತ್ರನ | ಹರಣವ ಮರಳಿಸಿದಸಮ

ಸಮರ್ಥನೆ | ಧರಿ ಸುರ ನಿಕರದಿ ಜಲ ಭಾರವ ನಿಂದ | ಪರಮ ಶ್ರೇಷ್ಠ ಸುಧಾ

ಪ್ರವಚನಗೈಸುತ | ಸರ್ವರಿಗಾಶ್ಚರ್ಯ ಗೊಳಿಸಿದ ಮಹಿಮನೆ | ಸಿರಿ

ನಿವಾಸಾರ್ಯರ ಮೊರೆಯನು ಮನ್ನಿಸಿ | ಕರುಣಿಸಿ ನಾಲ್ವತ್ತು  à²µà²°à³à²·à²¾à²¯à³à²·à³à²¯à²µ |

ತುರುಪಾಲ ದಾಸರಿಂದ ಹರಿದಾಸ್ಯ ನೀಡಿಸಿ | ಹರಿದಾಸ ವರ್ಯರೆಂದೆನಿಸುತ |

ವಿಭವದಿ | ಧರೆಯೊಳು ಮೆರೆಸಿದ ಪರಮ ಪವಾಡದ | ಚರಿತೆ ಎಂದೆಂದಿಗೂ

ಮರೆಯರು ಸುಜನರು | ಕರುಣಾಳು ಅಭಿನವ ಪ್ರಾಣೇಶ ವಿಠಲನ ಚರಣಾನುಗ್ರಹ

ಪಡೆದು ಮೆರೆದ ಗುರುದೇವ ||

 

||ಅಟ್ಟತಾಳ||

ನಿಷ್ಟ ಅಹನ್ನೇಕ ಏಕಾದಶಿ ಜನ್ಮ | ಅಷ್ಟಮಿ ನಿರ್ಣಯ ಗಂಡಿಕೆ ಶಿಲೆಗಳ | ನಿಷ್ಟ

ಶೋಧಕ ಉಗಾಭೋಗಾದಿ | ಕಷ್ಟಹರ ಚಿಲ್ಲರ ಕಥೆ ಪೀಯುಷ | ವಷ್ಟು ಎಪ್ಪತ್ತೈದು

ಸಾವಿರ ಮಿಳಿತವು | ಸೃಷ್ಟಿಯೊಳಗೆ ಎಲ್ಲ ಗಣಿತ ಮಾಡಲಾಗಿ | ಮೆಟ್ಟಿಕೆ ತ್ರಿಪಾದ

ಕಡಿಮೆ ಐದುಲಕ್ಷ | ಯಿಷ್ಟಾದವು ದಾಸರು ಪೇಳಿದ ಪದ | ಯಿಷ್ಟ ದೈವನಾದ

ವಿಜಯ ವಿಠ್ಠಲ ಹರಿಯ | ಗುಟ್ಟಿನಿಂದಲಿ ಸಲಿಸಿ ಕುಣಿಕುಣಿಸುತಲಿ ||

 

||ರೂಪಕತಾಳ||

ನಾಶಿಕ ಎಡದಲ್ಲಿ ಭಾರತಿ ತಾ ನಧೋ | ಶ್ವಾಸ ಬಿಡಿಸುವಳು ನಿನ್ನಾಜ್ಞದಿ | ನಾಶಿಕ

ಬಲದಲ್ಲಿ ಈಶನಾಜ್ಞದಿ ಊರ್ಧ್ವ | ಶ್ವಾಸಬಿಡಿಸಿ ಪೊರೆವಿ ಜೀವರನ್ನು |

ತಾಸಿಗೊಂಭೈನೂರು ಕ್ರಮದಿಂದ ಇಪ್ಪತ್ತೊಂದು | ಸಾಸಿರ ದಾರುಶತ ದಿನ

ಒಂದರಲಿ | ಭೂಶಬ್ದದಿಂದಲ್ಲಿ ಹರಿಯನ್ನೆ ಪೂಜಿಸುತ್ತ | ಅಶೀತಿ ನಾಲ್ಕು ಲಕ್ಷ

ಜೀವರಿಗೆ ಲೇಸು ಮಿಶ್ರಗಳಿತ್ತು ಅದರಂತೆ ನಿರ್ದೇಶ | ವಾಸ ಗೈಸುವಿ ನೀನೆ

ಪ್ರಾಂತ್ಯದಲ್ಲಿ | ಈ ಸುಜ್ಞಾನವೆ ತಿಳಿದುಪಾಸನೆ ಮಾಳ್ಪರಿಗೆ | ಶ್ವಾಸ ಮಂತ್ರದ ಪುಣ್ಯ

ಶೇಷವೀವಿ | ಕಾಶಿನಿಂದಲಿ ಕೋಟಿದ್ರವ್ಯ ಪ್ರಾಪುತದಂತೆ | ವಾಸುದೇವನು ಇದಕೆ

ತುಷ್ಟನಾಗಿ | ಈ ಶರೀರದಿ ಪೊಳೆದು ಕ್ಲೇಶವ ಪರಿಹರಿಪ | ಈ ಸಂಜ್ಞದಿಂದಲ್ಲಿ

ದಿವಿಜರೆಲ್ಲ | ದಾಸರಾಗಿಹರಯ್ಯ ನಿನ್ನ ಪಾದವ ಬಿಡದೆ | ಕ್ಲೇಶಾನಂದಗಳೆಲ್ಲ

ನಿನ್ನಾಧೀನ | ದೇಶಕಾಲ ಪೂರ್ಣ ಗುರು ವಿಜಯವಿಠ್ಠಲರೇಯ | ಭಾಸುರ ಜ್ಞಾನ

ನಿನ್ನಿಂದ ನೀವ ||

 

 

||ತ್ರಿವಿಡಿತಾಳ||

ನಿನ್ನನುಗ್ರಹದಿಂದ ಧನ ಮೊದಲಾದ ವಸ್ತು | ತನ್ನಿಂದ ತಾನೆ ಬಂದು ಒದಗುತಿರೆ |

ಇನ್ನಿದಕ್ಕೆ ನಾನು ನಿನ್ನ ಪ್ರಾರ್ಥಿಪೊದಿಲ್ಲ (ಪ್ರಾರ್ಥಿಪಲೊಲ್ಲ) | ಬಿನ್ನಪವನ್ನು ಉಂಟು

ಗ್ರಹಿಸಬೇಕು | ಅನಂತ ಜನುಮದ ಪುಣ್ಯ ಪ್ರಭಾವದಿಂದ | ಘನ್ನ ಮಹಿಮನಾದ

ಪುರುಷನೋರ್ವ | ಕ್ಷಣವಗಲದಲಿಪ್ಪ ಆಪ್ತನಾದವನೆನಿಸಿ | ಎನ್ನ ವಿರಹಿತವಾದ

ಸ್ಥಾನವನ್ನು | ಕಣ್ಣಿಲಿ ನೋಡಲಾರನೆಂದು ನುಡಿದವನ್ನ | ಎನ್ನ ದುರ್ಭಗದಿಂದ

ಅಗಲಿ ನಾನಾ | ಬನ್ನ ಬಡುತಲಿಪ್ಪೆ ನಿಮಿಷ ಒಂದ್ಯುಗವಾಗಿ | ಮನ್ನಿಸಿ ಮನಕೆ ತಂದು

ಪೂರ್ವದಂತೆ | ಮನ್ಮನದಲಿ ತೋರು ವ್ಯವಧಾನ ಮಾಡದಲೆ | ಇನ್ನಿದೆ ಬೇಡುವೆ

ಜನನಿಯೇ | ನಿನ್ನಿಂದ ನುಡಿದಂಥ ವಾಕ್ಯ ಸಫಲ ಮಾಡಿ | ಮನ್ಮನೋರಥವನ್ನು

ಪೂರ್ಣ ಮಾಡು ಆ | ಪನ್ನರ ರಕ್ಷಿಸುವ ಬಿರುದು ನಿನಗೆ ಉಂಟು | ಸನ್ನುತಿಸಿ

ಬೇಡಿಕೊಂಬೆ ಗುಣ ನಿಧಿಯೇ | ಪನ್ನಂಗ ತಲ್ಪ ಗುರು ವಿಜಯ ವಿಠ್ಠಲರೇಯ |

ನಿನ್ನ ವಾಕ್ಯವ ವಹಿಪ ಸರ್ವಕಾಲ ||

 

||ಜತೆ ||

ನಿನ್ನ ದರುಶನದಿಂದ ಅನಿಷ್ಟವು ನಾಶ |

ಘನ್ನ ಇಷ್ಟರೂಪ ಗುರು ವಿಜಯ ವಿಠ್ಠಲಪ್ರಾಪ್ತ ||

 

||ಜತೆ||

ನಿನ್ದಾಸರ ದಾಸ ದಾಸ ದಾಸ್ಯವನೀಡು

ಮಾನ್ಯದೊರಭಿನವ ಪ್ರಾಣೇಶ ವಿಠಲ ಪಾಹಿ ||  

 

||ಜತೆ||

ನಿನ್ನ ಧ್ಯಾನವನಿತ್ತು ಯನ್ನನುದ್ಧರಿಸಯ್ಯ | 

ಮಾನ್ಯಾಭಿನವ ಪ್ರಾಣೇಶವಿಠಲ ಪ್ರೀಯ ||

                   


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2025