ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಉಗಾಭೋಗ (ದ)

ದಹಿಸಲು ಮುನ್ನಿನ ದೋಷವ

ದಹಿಸಲು ಮುನ್ನಿನ ದೋಷವ ನೆಲ್ಲವ ನಡೆದನು ವಾರಣಾಶಿಗೆ ಓಡಿ | ಮಹಸ್ಥಳ

ಹುಶಿಯಾಡುತ ವಿಪ್ರರ ವಂಚಿಸಿ ಅಲ್ಲಿಯ ಯಾತ್ರೆಯ ಮಾಡಿ | ವಹಿಲದಿ ವಂದಾರಾದರ

ಆಡಿದರುಂಬುದಿಲ್ಲೆಂಬುರು ಹೆಮ್ಮೆಯ ಕೂಡಿ | ಮಹಿಪತಿ ನಂದನ ಸಾರಿದ ಸ್ವಹಿತಕ ವ್ಯರ್ಥ

ಜನಕ ಸಾಧನ ನೋಡಿ ||೧||

 

ದಯದಿ ಸಲಹೊ ಜಯರಾಯ

ದಯದಿ ಸಲಹೊ ಜಯರಾಯ | ಕಾಗಿಣಿನಿಲಯ ಕವಿಜನಗೇಯ | ಯೋಗಿವರಿಯ

ಕೃಪಾಸಾಗರ ಸತತ | ಮರುತಸುಶಾಸ್ತ್ರಕೆ ವಿರಚಿಸಿ ಟೀಕೆಯ | ಮುರಿದು ಕುಭಾಷ್ಯವ ಮೆರೆದ

ಮಹಾತ್ಮಾ | ಭೀಮಭವಾಟವಿ ಧೂಮಧ್ವಜ ಸು | ತ್ರಾಮಜಸಖ ಸಿರಿ ಶ್ಯಾಮಸುಂದರನ

ಪ್ರಿಯ|

 

 

               ದಾತನು ಎನಗೆ ನೀನು ಶ್ರೀಹರಿ ನಿನಗೆ

ದಾತನು ಎನಗೆ ನೀನು ಶ್ರೀಹರಿ ನಿನಗೆ |ದಾತನು ನಾನು ಬಹು ಮಾತುಗಳಾಡಲೇಕೆ

ಭವ- | ಭೀತಿಗೆಂದಿಗಂಜೆ ಪರಮಾತುಮಾ ನಿನ್ನ ಪಾದ ಬಹು-| ಪ್ರೀತಿಯಿಂದಲಿ ನೆನೆಯುವರ

ವಾತಮತ-| ದುತ್ತಮರ ಸೇವೆಯೊಳಿಟ್ಟು ಪೋಷಿಸೈ ಗುರುಶ್ರೀವಿಠಲ ಪ್ರಭೋ

 

             ದಾಸನಾಗುವುದಕ್ಕೆ ಏಸೇಸು ಜನ್ಮದ

ದಾಸನಾಗುವುದಕ್ಕೆ ಏಸೇಸು ಜನ್ಮದ ಸುಕೃತ | ರವಿಕೋಟಿ ಭಾಸುರ ಶ್ರೀಶ

ಸುಗುಣವಂತ | ನಾಶರಹಿತ ನಿನ್ನ ದಾಸರ ದಾಸ್ಯವ | ಲೇಸಾಗಿ ಕೊಡುಕಂಡ್ಯ ಪುರಂದರವಿಠಲ

 

                ದಾಸನಾದವನಿಗೆ ವೈಕುಂಠಲೋಕದಲ್ಲಿ

ದಾಸನಾದವನಿಗೆ ವೈಕುಂಠಲೋಕದಲ್ಲಿ ವಾಸ | ದಾಸನಾಗದವನೆಲ್ಲಿ ಪೋದರಾಭಾಸ |

ದಾಸನೆಂದೆನಿಸಿದ ಭಾರತಿಯ ಗಂಡ | ಸತ್ಯಲೋಕವನಾಳ್ವ ಶೌಂಡ | ದಾಸರ ಹೃದಯದಿ

ಮಿನುಗುವ ಶ್ರೀಶವಾಸವಾದಿವಂದ್ಯ | ದ್ವಿಸಾಶಿರಂಬಕ ಶರಣ್ಯ ದಾಸರಿಗೊಲಿವ | ಶ್ರೀಪುರಂದರವಿಠಲ

 

                  ದಾನವಾಂತಕ ಹರಿಯೆ ಜ್ಞಾನವನ್ನು

ದಾನವಾಂತಕ ಹರಿಯೆ ಜ್ಞಾನವನ್ನು ಕೊಡದೆ | ಮಾನವ ಜನುಮದೊಳಗೆ ಹಾಕಿ |

ಹಾನಿ ವೃದ್ಧಿಗಳಿಗೆ ಗುರಿಮಾಡಿ ನೀನು | ಕಾಣಿಸಿಕೊಳ್ಳದಲೆ ಪ್ರಾಣದೊಳಗೆ ಇದ್ದು | ತ್ರಾಣಗುಂದಿಸಿ

ಭವಕಾನನದಲ್ಲಿ ನೂಕಿ | ಶ್ವಾನಸೂಕರನಕಿಂತಾ ಕನಿಷ್ಠನ್ನ ಮಾಡಿ | ಬೇಸರಿಸುವುದು ಉಚಿತವೇನು

ಸ್ವಾಮಿ | ವಾಣಿಯರಸವಂದ್ಯ ಮುದ್ದುಮೋಹನ್ನವಿಠಲ | ಧ್ಯಾನಕ್ಕೆ ಪೊಳದು ಎನ್ನ

ಕಡೆಹಾಯಿಸೋ ಬೇಗ

 

                    ದಾರಿದ್ರ್ಯವೆಂಬ ರಕ್ಕಸಿ ಹಿಡಿದೆನ್ನ

ದಾರಿದ್ರ್ಯವೆಂಬ ರಕ್ಕಸಿ ಹಿಡಿದೆನ್ನ | ಹೀರಿ ಹಿಪ್ಪಿಮಾಡುತಾಳೆ ತಾಳಲಾರೆ | ಸಂಸಾರವೆಂಬ

ಮಾರಿಯಿಂದ ಬಲುನೊಂದೆನೋ | ಆರುಮಂದಿ ವೈರಿಗಳೆನ್ನ ಸುತ್ತಮುತ್ತ | ಹೋರಿ ತಮ್ಮ

ವಿಷಯಂಗಳಿಗೆನ್ನ ಸೆಳೆಯುತಾರೆ | ನಾರಾಯಣ ನಿನ್ನ ನಾಮಸ್ಮರಣೆಯಿತ್ತು | ಶ್ರೀ ರಾಮಕೃಷ್ಣ

ಎನ್ನ ನೀ ಸಲಹಯ್ಯ

 

          ದಾನವಾರಿಯೆ ನಿಮಗೆ ದೈನ್ಯದಿಂ ಬೇಡುವೆನು

ದಾನವಾರಿಯೆ ನಿಮಗೆ ದೈನ್ಯದಿಂ ಬೇಡುವೆನು | ಪ್ರಾಣನೀಗಲು ಪುಸಿನುಡಿವ

ಪ್ರಸಂಗಬೇಡ | ನಾನು ಮಾಡಿದ ಕೃತಿಗೆ ಏನು ಶಿಕ್ಷಿಸಲು ಸರಿ | ಮಾನವೊಂದಮಾತ್ರ ರಕ್ಷಿಸು

ಶ್ರೀರಾಮ

 

                     ದಾಸಪುರಂದರನ ದಯಕೆ

ದಾಸಪುರಂದರನ ದಯಕೆ ಪಾತುರರಾದ | ವಾಸುದೇವವಿಠಲನ್ನ ದಾಸಜನರ |

ಲೇಸಾಗಿ ಸೇವಿಸುವ ಭಾಗ್ಯವೇಕೊಡು ಎನಗೆ | ಸೂಸಿ ಸುಖವುಂಬ ಸುರಲೋಕಕಂಕಿತ | 

ಸುಖವಿತಿಲಕ ಭೂಸುರಶಿರೋರತುನ ಶ್ರೀ | ವ್ಯಾಸಮುನಿಪದಕಂಜಭೃಂಗರೆನಿಪ | ಶ್ರೀಶ

ಗುರುಕೃಷ್ಣನ್ನ ಭಜಕರ ಸಮೀಪದಲಿ | ವಾಸಮಾಡಿಸೋ ವರದಗೋಪಾಲವಿಠಲ

 

              ದಾಸನಾಗುವನಿಗೆ ಕ್ಲೇಶಬಡಿಸದೆ ಒಲಿಯ

ದಾಸನಾಗುವನಿಗೆ ಕ್ಲೇಶಬಡಿಸದೆ ಒಲಿಯ | ರೆಕ್ಕೆ ಮುರಿದ ಪಕ್ಕಿ ಬಾಯಿಬಿಟ್ಟಂತೆ |

ಗಗನಕ್ಕೆ ಮೊಗವೆತ್ತಿ ಕೂಗುತಿಪ್ಪೆ | ಅಕ್ಕರೆ ನಿನಗಿನ್ನು ಬಾರದೇನಲೊ | ದೇವಕ್ಕಳೊಡೆಯ

ತ್ರಿಜಗದಲ್ಲಿ ನೀನು | ಠಕ್ಕಿಸಿ ಪೋಗುವೆಯಾ ಸರ್ವಜೀವಿಗಳೊಳು | ಯಾತಕ್ಕೆ ಎನ್ನೊಬ್ಬನ

ಪುಟ್ಟಿಸಿದೆ | ಪಕ್ಕದಾಸನು ನಾನು ವಿಜಯವಿಠಲ ನಿನ್ನ | ಲೆಕ್ಕಕ್ಕೆ ಮೊದಲಿಗನೆನಿಪೆನಯ್ಯ

 

                   ದಾಸನಾಗುವೆನೆಂದು ಆಸೆಮಾಡಲು

ದಾಸನಾಗುವೆನೆಂದು ಆಸೆಮಾಡಲು ಬಲು ಕ್ಲೇಶವಬಡಿಸುವ ಆ- | ಭಾಸವ ನುಡಿಸುವ

ನಾಶಮಾಡುವ ಸಕಲೈಶ್ವರ್ಯಗಳನೆಲ್ಲ | ಗ್ರಾಸವಾಸಕೆ ತರರೀಸನು ಪರರಿಂದ ಮೋಸವಾದ

ಭವ | ಕ್ಲೇಶಪಾಶದಿ ಬಿಗಿ     ದ್ವೇಷವ ಮಾಡಿಸುವ ನೀಚರ ಕೈಯಿಂದ | ಕಾಸಿನವನ ಮಾಡಿ

ಬೀಸಿ ಬಿಸಾಡುವ ಲೇಸು     ನಮ್ಮ ವಿಜಯವಿಠಲನು

 

ದೊರೆತನವುಂಟೆಂದು ಗರ್ವಿಸಲು ಬೇಡ

ದೊರೆತನವುಂಟೆಂದು ಗರ್ವಿಸಲು ಬೇಡ | ಸಿರಿ ನಮಗಿಲ್ಲೆಂದು ಜರಿದು ನಿಂದಿಸಬೇಡ |

ನಿನ್ನಂಥ ಒಡೆಯರು ಎನಗುಂಟು ನಿನಗಿಲ್ಲ | ಎನ್ನನೀ ಕಾಯೊ ಅಚಲಾನಂದವಿಠಲ ||೧||

ದೇವ ತಪ್ಪಿಲ್ಲದೆ ಅವಗುಣವಿಲ್ಲದೆ

ದೇವ ತಪ್ಪಿಲ್ಲದೆ ಅವಗುಣವಿಲ್ಲದೆ | ಒಬ್ಬರೊಬ್ಬರ ಮರೆಹೊಗುವರೆ | ಮರೆಹೊಕ್ಕರೆ

ಕಾವರಿಲ್ಲದೆ ಅಲ್ಲಿ ಕುಲಾಚಾರ್ಯನಾಗಿ ದುಃಖ ಭೀತನಾಗಿ | ಮರೆಹೊಕ್ಕೆ ಕಾಯೊ

ಅಚಲಾನಂದವಿಠಲ |

 

ದೈತ್ಯನ್ನ ವಧೆಗಾಗಿ ಶಪಥಮಾಡಲಾಗಿ

ದೈತ್ಯನ್ನ ವಧೆಗಾಗಿ ಶಪಥಮಾಡಲಾಗಿ | ಕೃತ್ತಿವಾಸನು ದ್ವಾರಕೃಪೆಯು ಮಾಡಿ | ಸುತ್ತ

ಕಾದಿದ್ದ ಆಪ್ತಮಿತ್ರರ ರಕ್ಷಿಸುತಿರೆ | ಕತ್ತಲೆಗೈಸಿ ಶಿರಕಿತ್ತಿ ಚಂಡಾಡಿಸಿ | ಭಕ್ತನ ಪ್ರತಿಜ್ಞೆ

ಗೆಲಿಸಿದಂಥ | ಸತ್ಯವಾದ ರೂಢಿ ತ್ರಿಜಗವು ಬಲ್ಲುದು | ಪೃಥ್ವಿಪಾಲಕನಾದ ಸಾರ್ವಭೌಮಂಗೆ

ಪರಮ | ರಿಕ್ತ ಅನುಬಂಧ ಪೇಳಿ ಹಿಗ್ಗುವಂತೆ | ಉತ್ತಮೋತ್ತಮ ನಿನ್ನ ಇನಿತು ತಿಳಿದು |

ಭಕ್ತಿಯಿಲ್ಲದೆ ಸಟೆಯಿಂದ ನುಡಿದಂಥ | ಉಕ್ತಿಗೆ ವ್ಯಾಹತಿತಂದುದಕ್ಕೆ ನಿನ್ನ | ಮಿತ್ರತ್ವ

ಏನುಂಟು ಇದರೊಳಗೆ | ಭೃತ್ಯರ ಅಭಿಮಾನ ಕಾಯದಿದ್ದರೆ ಒಡೆಯ | ಕೀರ್ತಿಯೈದುವನೇನೊ

ಮಾನ್ಯನಾಗಿ | ಸತ್ಯಸಂಕಲ್ಪ ಗುರುವಿಜಯವಿಠಲರೇಯ | ಈತೆರದಲಿ ಮಾಡದಲಿರು ಎಂದಿಗಾನ |

 

 

 

 

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2022