ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಉಗಾಭೋಗ (ಧ)

ಧನದಾಸೆ ದೈನ್ಯವಂ ಬಡಿಸುತಿದೆ

ಧನದಾಸೆ ದೈನ್ಯವಂ ಬಡಿಸುತಿದೆ | ವನಿತೆಯರ ಆಸೆನ್ನ ಓಡ್ಯಾಡಿಸುತಲಿದೆ | ಮನದಾಸೆ

ಮನ್ನಣೆಗೆಡಿಸುತಿದೆ | ಇನಿತಾಸೆ ಬಿಡಿಸಿ ನಿನ್ನ ಚರಣಕಮಲದಲ್ಲಿ | ಇರಿಸೋ ದೇವ

ಅಚಲಾನಂದವಿಠಲ |

 

ಧನದಾಸೆ ದೈನ್ಯಪಡಿಸುತಿದೆ

ಧನದಾಸೆ ದೈನ್ಯಪಡಿಸುತಿದೆ | ವನಿತೆಯರ ಓಡಾಡಿಸುತಿದೆ | ಮನದಾಸೆ ಮಂತ್ರವ 

ಕೆಡಿಸುತಿದೆ | ಮನೆವಾರ್ತೆಯಾಸೆ ಮನವ ಬಾಧಿಸುತಿದೆ | ಇನಿತರಾಸೆಯ ಬಿಡಿಸಿ ನಿನ್ನ

ಚರಣಗಳ | ನೆನೆವಂತೆಮಾಡೊ ಪುರಂದರವಿಠಲ |

 

ಧರ್ಮಪಥವ ಮೆಟ್ಟಲು ಮನವೆರಗದು

ಧರ್ಮಪಥವ ಮೆಟ್ಟಲು ಮನವೆರಗದು | ದುಷ್ಕರ್ಮಕಾದಡೆ ಚಿಗಿ ಚಿಗಿದಾಡುವುದು |

ಯುಗಧರ್ಮವೋ ಇದು ಹರಿಯೆ ಜೀವನಕರ್ಮವೋ | ದುರ್ಮಾಯ ಯುಕ್ತಿಯಿಝ್ಂದ

ಚರಿಸುವವರ ಜನರ ಮೈಯ | ಚರ್ಮವ ಸುಲಿಸದೆ ಬಿಡನೊ ಪುರಂದರವಿಠಲ |

 

 

 

 

ಧರೆಗಿದೇ ವೈಕುಂಠ ಎಂದು ತೋರುವ

ಧರೆಗಿದೇ ವೈಕುಂಠ ಎಂದು ತೋರುವ ಹಸ್ತ | ತಿರುವೆಂಗಳಪ್ಪ ಪುರಂದರವಿಠಲ |

 

ಧ್ವಜ ವಜ್ರಾಂಕುಶ ರೇಖಾಂಕಿತವಾದ

ಧ್ವಜ ವಜ್ರಾಂಕುಶ ರೇಖಾಂಕಿತವಾದ | ಹರಿಯ ಪಾದಾಂಬುಜವ ಸೇವಿಪ | ಅಜಭವರ

ಭಾಗ್ಯವ ನೋಡು | ಕುಜನಮತವ ಬಿಡು | ದುರ್ಜನರ ಸಂಗವ ಸುಡು | ತ್ರಿಜಗವಂದ್ಯನ

ಪಾಡು | ಮುಕುತಿ ಸುಖವ ಬೇಡು | ಗಜೇಂದ್ರಗೊಲಿದ ಸಿರಿಕೃಷ್ಣನ್ನ ಧ್ಯಾನಮಾಡು |

ನಿಜಪುರಂದರವಿಥಲರಾಯನ ಬಿಡದೆಲೆ ಕೊಂಡಾಡು

 

ಧರ್ಮಪಥವ ಮೆಟ್ಟಲು ಮನವೆರಗದು

ಧರ್ಮಪಥವ ಮೆಟ್ಟಲು ಮನವೆರಗದು | ದುಷ್ಕರ್ಮಕಾದರೆ ಚಿಗಿಚಿಗಿದಾಡುವದು

ಯುಗ | ಧರ್ಮವೋ ಜೀವನ ಕರ್ಮವೋ ಹರಿಹರಿ | ನಿರ್ಮಲಾತ್ಮಕನ ನೆನೆಯಲೀಯದು

ಯುಗ | ದುರ್ಮದೊಕ್ತಿಗಳಿಂದ ಚರಿಸುವ ಜನರ ಮೈ | ಚರ್ಮವ ಸುಲಿಸದೆ ಬಿಡನು

ಸಿರಿ ರಾಮಕೃಷ್ಣ ಯುಗ | ಧರ್ಮವೋ ಜೀವನ ಕರ್ಮವೋ ಹರಿಹರಿ

 

ಧರೆಯೊಳಗೆ ಬಹು ದೀನನಾಗಿ

ಧರೆಯೊಳಗೆ ಬಹು ದೀನನಾಗಿ ಬಾಳುವೆನಯ್ಯ | ನರರಿಗೆ ಬಾಯಿತೆರೆದು ನಿತ್ಯ |

ಇರುಳು ಹಗಲೆನ್ನದೆ | ಮನೆಮನೆಯ ತಿರುಗುವೆನೊ ಕರುಣ ಬಾರದು | ಕಠಿಣಜನರಿಗೊಮ್ಮೆ |

ಮರೆಮೋಸದಲಿ ಮಾತುಗಳನಾಡುತಾರೆ | ಗರುವಿನಿಂದಲಿ ಗಜದಂತಿಪ್ಪರು | ಅರಸುಗಳು 

ನಾವೆಂದು ಅಹಂಕಾರದಲಿ ಮುಣುಗಿ | ಕರವ ಮುಗಿದರೆ ಮುಗಿಯರೊಂದುಕಾಲ |

ದುರುಳಜನರ ಸೇವೆ ವ್ಯರ್ಥವೋ ದೇವೇಶ | ಚಲುವ ಹಯವದನ ಮಹಾರಾಜರಾಜ

 

ಧ್ವಜ ವಜ್ರಾಂಕುಶ ರೇಖಾಂಕಿತದ

ಧ್ವಜ ವಜ್ರಾಂಕುಶ ರೇಖಾಂಕಿತದ ಹರಿಯ ಪಾದಾಂ | ಬುಜವ ಸೇವಿಸುವ ಅಜಭವರ

ಭಾಗ್ಯ ನೋಡು | ತ್ರಿಜಗವಂದ್ಯನ ಪಾಡು ಭಕುತಿಯ ನೀ ಬೇಡು | ಕುಜನರ ಮಾತ ಸುಡು

ದುರ್ಜನರ ಸಂಗವ ಬಿಡು | ಗಜರಾಜನ ಕಾಯ್ದ ಕೃಷ್ಣನ ಧ್ಯಾನಮಾಡು | ವಿಜಯವಿಠಲನ

ಬಿಡದೆ ಕೊಂಡಾಡು

 

ಧ್ಯಾನವು ಕೃತಯುಗದಲ್ಲಿ

ಧ್ಯಾನವು ಕೃತಯುಗದಲ್ಲಿ | ಯಜ್ಞಯಾಗವು ತ್ರೇತಾಯುಗದಲ್ಲಿ | ಅರ್ಚನೆ ದ್ವಾಪರದಲ್ಲಿ |

ಕೀರ್ತನೆಮಾತ್ರದಿ ಕಲಿಯುಗದಲ್ಲಿ | ಮುಕುತಿಯವನೀವ ಪುರಂದರವಿಠಲ |

 

ಧ್ಯಾನ ಮೌನಗಳೆಂಬ ಜ್ಞಾನಸಾಧನಗಳನು

ಧ್ಯಾನ ಮೌನಗಳೆಂಬ ಜ್ಞಾನಸಾಧನಗಳನು | ಏನೂ ಅರಿಯದತಿದೀನ ನಾ

ಭವಕಂಜಿ | ನಿನ್ನನೇ ಮೊರೆಯ ಹೊಕ್ಕಿಹೆನೊ | ನಿನ್ನ ನಂಬಿದ್ದವರ ಘನ್ನಭಯ 

ಹರಿವೆಂದು | ನಿನ್ನನೇ ಮೊರೆಹೊಕ್ಕಿಹೆನೊ | ಜಲದೊಳಗೆ ಎದ್ದೆನ್ನ ಪಾಲೊಳಗೆದ್ದೆನ್ನ |

ತಿಳಿದಂತೆ ಮಾಡು ನೀ ಮಹಿಪತಿಸುತ ಪ್ರಾಣ  ನಿನ್ನನೇ ಮೊರೆಯ ಹೊಕ್ಕಿಹೆನೊ |

 

ಧಾರುಣಿಯೊಳಗೆಲ್ಲ ಪರದೈವವಾವುದೆಂದು

ಧಾರುಣಿಯೊಳಗೆಲ್ಲ ಪರದೈವವಾವುದೆಂದು | ತಾರಿ ಬೆಂಡಾಗದಿರಿ ತವಕದಿಂದ 

ಸಾರುವೆನು ಕರ ನೆಗಹಿ ಉರಗಹಾರವ ಧರಿಸಿ | ಮಾರುತ್ತರವು ಸಲ್ಲದು ದುರುಳರಿಗೆ |

ನಾರಾಯಣನೆಂಬೊ ನಾಮಕ್ಕೆ ನಿರ್ವಚನ | ಆರು ಮಾಡಬಲ್ಲರು ಪ್ರಾಜ್ಞರೊಳು | ತೋರಿರೊ

ಈ ನುಡಿದ ನುಡಿಯನು ಬಿಚ್ಚಿ | ಕ್ಷೀರವಾರಿಧಿಶಯನ ವಿಜಯವಿಠಲ ದೈವ | 

 

ಧ್ಯಾನವು ಕೃತಯುಗದಲ್ಲಿ

ಧ್ಯಾನವು ಕೃತಯುಗದಲ್ಲಿ |ಯಜನವು ತ್ರೇತಾಯುಗದಲ್ಲಿ | ದಾನವಾಂತಕನ ಅರ್ಚನೆಯು

ದ್ವಾಪರದಲ್ಲಿ | ಕಲಿಯುಗದಿ ಗಾಯನದಿ ಕೇಶವನೆಂದರೆ | ಕೈಗೂಡುವನು ರಂಗವಿಠಲ

 

(ಆದಿ)

ಧೂಳಳತೆಯಿ೦ದ  ಕಾರ್ಮುಖವು 

ಹೋಗೆ  ಕಂಗಳ ಡಾಳಗಳು 

ಪು೦ಡರೀಕವು  ತೂಮಕಮಲ 

ಕಪೋಲ ಚಂಪಕ  ನಾಸಿಕವು 

ಸೋಲಿಸುವಿದರದನಂಗಲ  ನವ ಕುರುವಿಂದವು 

ಮೇಲಗೆ  ನುಡಿಯಾಲು ವರವೂಗೆಯಂದವು 

ಬಾಲಕಿ  ನಸುನಗೆ  ಪುಗುತರಮಮ್  II ರಾಮನೆಂತ  II 

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2022