ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಉಗಾಭೋಗ (ಗ)

ಗಜರಾಜನ ಪೊರೆದರೇನು

ಗಜರಾಜನ ಪೊರೆದರೇನು ಘನವು | ಗಜಪುರದ ದ್ರೌಪದಿಯ ಪೊರೆದರೇನು ಫಲವು|

ಭಜಕ ಪ್ರಹ್ಲಾದನ್ನ ಪೊರೆದರೇನಾಶ್ಚರ್ಯ |

ಭಜನೆ ಮಾಡಿದುದಕ್ಕೆ ನೀ ಪೊರೆದೆ ಸರಿಸಾಟಿ | ಅಜನಯ್ಯ ನಾ ನಿನ್ನ ಒಮ್ಮೆಯಾದರೂ ಸರಿ | 

ಭಜಿಸಿದವನಲ್ಲ ನೀ ಎನ್ನ ಪೊರೆದರೆ | ಮಝುಭಾಪುರೆ ಕೀರ್ತಿ ತ್ರಿಜಗದೊಳಗೆ ಸ್ವಾಮಿ |

ವ್ಯಜಿನಹರ ಶ್ರೀಗುರುಗೋಪಾಲವಿಠಲ | ಸುಜನರಿಂದ ಕಂಡು ಸಂತೋಷಪಡುವರೋ

 

ಗಜತುರಗ ಸಹಸ್ರ ದಾನ

ಗಜ-ತುರಗ ಸಹಸ್ರ ದಾನ | ಗೋಕುಲ ಕೋಟಿ ದಾನ | 

ಭೂದಾನ ಸಮುದ್ರ ಪರ್ಯಂತರ | ಧನಿ ಪುರಂದರವಿಠಲನ ಧ್ಯಾನಕ್ಕೆ ಸಮವಿಲ್ಲ |

 

ಗರ್ಭವಾಸ ಗಿರ್ಭವಾಸ ಜನನ ಗಿನನ

ಗರ್ಭವಾಸ ಗಿರ್ಭವಾಸ, ಜನನ ಗಿನನ | ಮರಣ ಗಿರಣ | ದುಃಖ ಗಿಖ್ಖ |

ಪ್ರಾರಬ್ಧ ಗೀರಬ್ಧ, ಆಗಾಮಿ ಗೀಗಾಮಿ | ಸಂಚಿತ ಗಿಂಚಿತ, ಎಲ್ಲ ಪುರಂದರ ವಿಠಲ

 

ಗಂಡಮಾಡಿದ ಪಾಪ ಹೆಂಡತಿಗಿಲ್ಲ

ಗಂಡಮಾಡಿದ ಪಾಪ ಹೆಂಡತಿಗಿಲ್ಲ | ಹೆಂಡತಿಮಾಡಿದ ಪಾಪ ಗಂಡಗುಂಟು |

ಹೆಂಡತಿಮಾಡಿದ ಪುಣ್ಯ ಗಂಡನಿಗಿಲ್ಲ| ಗಂಡಮಾಡಿದ ಪುಣ್ಯ ಹೆಂಡತಿಗುಂಟು|

ಜೀವಜೀವರು ಭೇದ |ನೀನೇ ಉದ್ಧರಿಸಯ್ಯಾ ಪುರಂದರ ವಿಠಲ |


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2022