ಉಗಾಭೋಗ (ವ)
ವೇದಶಾಸ್ತ್ರವಿಲ್ಲದ ವಿಪ್ರಂಗೆ ವಿಧಿಮಂತ್ರಗಳೇಕೆ
ವೇದಶಾಸ್ತ್ರವಿಲ್ಲದ ವಿಪ್ರಂಗೆ ವಿಧಿಮಂತ್ರಗಳೇಕೆ | ಗಂಡನಿಲ್ಲದ ಗರತಿಗೆ ಶೃಂಗಾರವೇಕೆ | ಮಾಧವವಿಠಲನ್ನ
ನೆನೆಯದೆ ನರಜನ್ಮವೇಕೆ.
ವೇದ ಓದಲಿಲ್ಲ ವೇದದರ್ಥ ತಿಳಿಯಲಿಲ್ಲ
ವೇದ ಓದಲಿಲ್ಲ ವೇದದರ್ಥ ತಿಳಿಯಲಿಲ್ಲ | ಮಾಧವನೆ ನಿನ್ನ ಪೂಜಿಸಲಿಲ್ಲ | ಬಾದರಾಯಣ ತಂದೆ ಮುದ್ದುಮೋಹನವಿಠಲ | ವೇದವೇದ್ಯನೆ ಕಾಯೊ ದೇವಾ.