ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಉಗಾಭೋಗ (ಯ)

ಯದುಕೃಷ್ಣ ಯಾದವ ಕೃಷ್ಣ ಎಂದವರಿಗೆ

 

ಯದುಕೃಷ್ಣ ಯಾದವ ಕೃಷ್ಣ ಎಂದವರಿಗೆ ಅಂತ್ಯಕಾಲದಲಿ | 

ಮೊದಲಿನ ಶಬ್ಧ ಕೇಳಿದ ಮಾತ್ರದಿಂದ ಮುದದಿ ಮುಕ್ತಿಯನಿತ್ತಂತೆ | 

ಸದಾ ಭಕುತಿಯ ತನ್ನ ಪಾದದಲ್ಲಿ ಕೊಟ್ಟು |

ಎರಡನೆಯ ನಾಮ ಕೇಳಿದ್ದಕ್ಕೆ ಏನ ಕೊಡಲೆಂದು ನಾಚಿ | 

ನಮ್ರ ಸದಯ ಶ್ರಿ ಪುರಂದರ ವಿಠಲ ಸ್ವಾಮಿ |ಮುದದಿ ನಾಮ ಸ್ಮರಣೆಯ ಕೊಟ್ಟು ಕಾಯ್ದ

 

ಯಶೋಧೆ ಕೋಪಿಸಿಕೊಂಡು 

ಯಶೋಧೆ ಕೋಪಿಸಿಕೊಂಡು, ಎದವುತ ಮುಗ್ಗುತ, | ಕೋಲುಕೊಂಡು ಕೊಲ್ಲಹೊಡಿಯಬೇಕೆಂದು | 

ಕೋಲು ಕೊಂಡುಬಂದಳು ನಿನ್ನ ಬಳಿಗೆ, ನೀನೆಲ್ಲಿ ಪೊಕ್ಕೆಯೋ,| ಪೇಳೊ ಪುರಂದರ ವಿಠಲ

 

ಯಂ ಬ್ರಹ್ಮ ವೇದಾಹಂ ಬ್ರಹ್ಮದೇವ

 

"ಯಂ ಬ್ರಹ್ಮ ವೇದಾಹಂ ಬ್ರಹ್ಮದೇವ" | ಶ್ರೂತಿಶಬ್ಧಬ್ರಹ್ಮವೆಂಬ ವೇದ ಭೋದಿಸಿತಾಗಿ | 

ಇಂಥ ಮನುಜರಿಗೆಲ್ಲ ಸದ್ಭಾವವ ಪೇಳ್ವ | ಹೊಂದಿ ಬದುಕು ಹಯವದನನ ಚರಣವ |

ಹೊಂದಿ ಬದುಕೋ ಜೀವ ಹರಿಯ ನಾನೆನ್ನಬ್ಯಾಡ

 

ಯನಗೆ ನಾನೇ ಸರಿ

 

 

ಯನಗೆ ನಾನೇ ಸರಿ ನೊನಗೆನೀನೆ ಹರಿ |ಎನಗಾಣೆ ನೀರ್ವರ್ಗೆ ವನಜನಯನ|

ಧರೆಯನಳುವ ಸಿರಿಯರಸ ನೀನು|ಈ ಧರೆಯೊಳು ನಿರ್ಭಾಗ್ಯರೆರೆಯ ನಾನು| 

ಪರಮೇಷ್ಠಿಯನ್ನು ಪಡೆದ ಪರಮ ನೀನು | ಬಲು ದುರಿತಂಗಳಪ್ಪಿದ ದುರುಳನು ನಾನು|

ಪುಣ್ಯವಂತರ ಹೃದಯ ಗಣ್ಯ ನೀನು |ಕೃತಪುಣ್ಯ ಹೀನರಿಗಗ್ರಗಣ್ಯ ನಾನು|

 ಪತಿತ ಪಾವನ ನೀನು ಪತಿತ ನಾನು|ಸದ್ಗತಿದಾತ ನೀನು ನಿರ್ಗತಿಕ ನಾನು|

ವರವ್ಯಾಘ್ರಿಗಿರಿಯ ವರದ ವಿಠಲನು ನೀನು | ನಿಜ ಶರಣರ ಚರಣ ಧೋಳೀಪಟಲ ನಾನು ||

 

ಯಥಾದೇವೋ ತಥಾ ಗುರೌ

 

ಯಥಾದೇವೋ ತಥಾ ಗುರೌ | ಶ್ರುತಿ ಹೇಳಿದ ಸನ್ಮತಲಿರ್ಯೋ ||ಧ್ರುವ||

ವೃಥಾ ಅಭಾವ ನೀ ಹಿಡುವರೆ |ಸತ್ಸಂಗದಲಿ ನೋಡಿನ್ನಾರೆ | ಚಿತ್ಸುಖ ಹೊಳೆವರು ಕಣ್ಣಾರೆ||೧||

ಮುಗಿಲಲಿ ಮತ್ತೆ ಮುಗಿಲುಂಟು | ಹಗಲಿಗೆ ಹಗಲಾಗುದುಂಟೆ | 

ಜಗ ಇಹುದಕೆ ಜಗಮುಂಟೆ | ಹೀಗಾದ ಮ್ಯಾಲೆ ವಸ್ತು ಎರಡುಂಟೆ ||೨||

ಅನುಭವಕಿದರಿಟ್ಟು ಬಾಹುದು | ಖೂನ ಹೇಳವ್ಯಾವು ನೋಡು ವೇದ | 

ದೀನ ಮಹಿಪತಿಗೆ ಬೋಧ | ಭಾನುಕೋಟಿತೇಜನೊಂದೇ ತಾನಾದ||೩||

 

ಯಾರು ಮುನಿದು

 

ಯಾರು ಮುನಿದು ನಮಗೇನುಮಾಡುವರಯ್ಯ | ಯಾರು ಒಲಿದು ನಮಗೇನು ಕೊಡುವರಯ್ಯ |

ಕೊಡಬೇಡ ನಮ್ಮ ಕುನ್ನಿಗೆ ಕಾಸನು |  ಈಯಲು ಬೇಡ ನಮ್ಮ ಶಕುನಗೆ ತಳದಿಯ | 

ಆನೆಯ ಮೇಲೆ ಪೋಪುಗೆ,ಶ್ವಾನ ಮುಟ್ಟಬಲ್ಲದೆ? ನಮಗೆ ಶ್ರೀ ಪುರಂದರ ವಿಠಲನೇ ಸಾಕು|

 

ಯಾತ್ರೆಯನು ಮಾಡಿಕೊಂಡು

ಯಾತ್ರೆಯನು ಮಾಡಿಕೊಂಡು ಹರ ಹಿರಿಯನಹನಾಗಿ | ಉಕುತಿ ಬಾಧಕವಾಯ್ತು ಹರಿಹರರೊಳೈಕ್ಯ |

ಚಿನ್ನ ನಿನ್ನ ಮತಕೆ ನೀನೆ ಶತ್ರುವಾದ್ಯಯ್ಯ ಜಾ| ತ್ಯುತ್ತರವ ಪೇಳೆ ಪರಾಜಯವು ಬಾರದಿಹುದೆ? |

ಮತ್ತೆ ನೆನೆಯೆ ಹಯವದನಗಿದು ಲೀಲೆಯಾದರೆ | ಸತ್ವ ಹೆಚ್ಚಿತು ಹರಿಸರ್ವೋತ್ತಮನೆಂಬ ಶ್ರುತಿಗೆ |

 

ಯಾಚಿಸುವನ ಜನ್ಮ

 

ಯಾಚಿಸುವನ ಜನ್ಮ ಯಾತಕ್ಕೆ ಬರುವುದು | ಯೋಚನೆ ಮಾಡಲಿಬೇಕು ತನ್ನೊಳಗೆ |

ವಾಚಾಲನಾಗಿ ಪೋಗಿ ಎಲ್ಲೆಲ್ಲಿ ತಿರುಗುತ |ಉಚ್ಚ ನೀಚವೆನದೆ ಸುತ್ತಿಸಿಕೊಳುತಾ |

ಆಚಾರವನು ಬಿಟ್ಟು ದಿನಾಂತರವೆನದೆ | ಚಾಚುವೆನು ಕರೆವ ಕೇವಲ ದೈನ್ಯದಿ |

ಚಾಚೂತಪ್ಪದಂತೆ ನುಡಿಯದಿದ್ದರೆ ನಾನಾ - | ಯೋಚನೆಗೊಳಗಾಗಿ ಕುದಿಯಾಬೇಕೋ |

ಛಿ ಛಿ ಒಬ್ಬರ ಬೇಡುವ ನಡತಿಕಿಂತಲಿ |  ನಾ ಚರಿಸುಬಹುದು  ಮಾರಿಗಳ ಕೂಡ | 

ಕುಚೇಲಪಾಲ ಸಿರಿ ವಿಜಯ ವಿಠಲ ಎನಗೆ | ನಾಚಿಕೆಯಾಗಿದೆಯಯ್ಯಾ ಉದರಗೋಸುಗ |

 

ಯಾರ ಮುನಿಗಳಿಗೆ ಹಾರೈಸಿ

 

ಯಾರ ಮುನಿಗಳಿಗೆ ಹಾರೈಸಿ ಪೋದರೆ | 

ಯಾರಿತ್ತ ಬ ಎನ್ನರೋ ನುಡಿಯರೊ|

ಎಂಟು ಗೇಣು ಶರೀರವ ಒಂಟಿಗೇಣು ಮಾಡಿಕೊಂಡು | 

ಗಂಟಲಲ್ಲಿ ಶಿರ ಬಿಗಿದು ಪಪರ ಬೇಡುವ | 

ಸಂಕಟ ಬಿಡಿಸುವದು ಸಿರಿ ವೇಕಟಪತಿ ವಿಠಲ |


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2022